ವಾಹನಗಳಿಗೆ ಉಚಿತ ಪರ್ಮಿಟ್ ನೀಡಲು ಆಗ್ರಹ

Share

ಮೈಸೂರು
ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಒಂದರಿಂದ ಶಾಲೆಗಳನ್ನು ಪ್ರಾರಂಭ ಮಾಡಲು ನಿರ್ಧರಿಸಿದನು ಕೈಬಿಡಬೇಕು ಎಂದು ಮೈಸೂರು ನಗರ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಎಸ್ ರಾಜೇಶ್ವರ್ ಅವರು ಆಗ್ರಹಿಸಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಜೂನ್ 5 ರಿಂದ ಹತ್ತರವರೆಗೆ ಪೋಷಕರ ಸಲಹೆಯನ್ನು ಕೇಳಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಹೇಳಿ ಈಗ ಜುಲೈ ಒಂದರಿಂದ ಶಾಲೆ ಪ್ರಾರಂಭ ಮಾಡುತ್ತೇವೆ ಎಂದಿರುವುದು ಪೋಷಕರ ಅಭಿಪ್ರಾಯವನ್ನು ಕಡೆಗಣಿಸುವ ಹುನ್ನಾರವಾಗಿದೆ ಎಂದಿರುವ ಅವರು ಶಾಲೆಯ ಅವಧಿಯನ್ನು ಕಡಿಮೆ ಮಾಡಬೇಕು ಹಾಗೂ ಪಠ್ಯಕ್ರಮಗಳನ್ನು ಕಡಿಮೆ ಮಾಡಬೇಕಾಗಿ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು
ಅವರು ಮುಂದುವರಿದು ಮಾತನಾಡುತ್ತಾ ಆಟೋ ಹಾಗೂ ಕಾರು ಕ್ಯಾಬಿನ್ ಇತರೆ ವಾಹನ ಮಾಲೀಕರಿಗೆ ಕೋರೋನ ದಿ0ದ ನಷ್ಟವಾಗಿದೆ ರಾಜ್ಯಗಳಿಗೆ ಹೋಗಲು ಉಚಿತ ಪರ್ಮಿಟ್ ನೀಡಬೇಕು ಹಾಗೂ ತೆರಿಗೆ ಹಣದಲ್ಲಿ ವಿನಾಯಿತಿ ನೀಡಬೇಕು ಮತ್ತು ಮುಂದಿನ ಆರು ತಿಂಗಳವರೆಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ


Share