ವಿಕಲ ಚೇತನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ

19
Share

ವಿಕಲ ಚೇತನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ- ಸವಿತಾ

ಮೈಸೂರು  ಪ್ರತಿಯೊಬ್ಬ ಮನುಷ್ಯನಿಗೂ ವಿಶೇಷವಾದ ಗುಣಗಳಿರುತ್ತವೆ. ವಿಕಲಚೇತನದಲ್ಲಿ ವಿಶಿಷ್ಟವಾದ ಗುಣಗಳು ಇವೆ. ವಿಕಲ ಚೇತನರಿಗೆ ಏಳಿಗೆಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ ) ಸವಿತಾ ಅವರು ತಿಳಿಸಿದರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸವಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಜಿಲ್ಲೆ, ಮೈಸೂರು ಹಾಗೂ ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ದಸರಾ ವಸ್ತು ಪ್ರದರ್ಶನ ಆವರಣದ ಪಿ ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿಕಲ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯರಂತೆ ವಿಕಲ ಚೇತನನರು ಕೂಡ. ಆದರೆ ಅವರಿಗೆ ವಿಶೇಷವಾದ ದೂರದೃಷ್ಟಿ ಮತ್ತು ಶಕ್ತಿ ಇರುತ್ತದೆ ಎಂದರು.

ಈ ಹಿಂದೆ ವಿಕಲ ಚೇತನರ ವಿಕಲಚೇತನರ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ಯೋಗಪಟುಗಳಿಗಿಂತ ವಿಶೇಷವಾದ ಯೋಗ ಅಭ್ಯಾಸವನ್ನು ನಾವು ನೋಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರವು ವಿಕಲಚೇತನರಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಿ. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಮೀಸಲಾತಿಯನ್ನು ನೀಡುತ್ತಿದೆ. ಪ್ರತಿಯೊಬ್ಬ ವಿಕಲಚೇತನರಲ್ಲಿಯೂ ಕೂಡ ವಿಶಿಷ್ಟ ಮತ್ತು ವಿಭಿನ್ನ ಪ್ರತಿಭೆಗಳು ಮೂಡಿಬರುತ್ತದೆ. ರಾಷ್ಟ್ರದ ಪ್ರಮುಖ ಕ್ರೀಡೆಗಳನ್ನು ಕೂಡ ವಿಶೇಷ ಚೇತನರು ಭಾಗವಹಿಸಿ ಹಿರಿಮೆಯನ್ನು ತರುವುದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಧಮಕ್ಕಳಿಗೆ ಉಪಯುಕ್ತ ವಾಗುವ ಬ್ರೈನ್ ಲಿಪಿ ಆಧಾರಿತ 2024 ನೆ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಿ ಬಸವರಾಜು, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳಾದ ಜ್ಯೋತಿ ಕೆ.ವಿ, ಅಂದ ಮಕ್ಕಳ ಪಾಠಶಾಲೆಯ ಪ್ರಾಚಾರ್ಯರಾದ ಸತೀಶ್, ಶ್ರೀಧರ್ ಚೇತನ್, ಮುಂತಾದವರು ಪಾಲ್ಗೊಂಡಿದ್ದರು

 


Share