ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ*

Share

 

 

*ಸ್ವಯಂ ಪ್ರೇರಿತ ರಕ್ತದಾನ ಶಿಬಿರ*

ತುರ್ತು ಚಿಕಿತ್ಸೆ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಮೈಸೂರಿನ ಸರಸ್ವತಿಪುರಂನಲ್ಲಿರವ ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 50 ಮಂದಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಗಮನಸೆಳೆದರು. ಕಾಲೇಜು ಸಂಸ್ಥಾಪಕರಾದ ಡಾಕ್ಟರ್ ಕೆ ಎಲ್ ರಾಮದಾಸ್ ರವರ ಸ್ಮರಣೆಯ ದಿನಾಚರಣೆಯ ಅಂಗವಾಗಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಘಟಕದ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕ್, ಮೈಸೂರು ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ರಕ್ತ ಗುಂಪು ತಪಾಷಣೆ ಮತ್ತು ರಕ್ತದಾನ ಶಿಬಿರದಲ್ಲಿ ಕಾಲೇಜಿನ 300 ವಿದ್ಯಾರ್ಥಿಗಳಲ್ಲಿ 160 ವಿದ್ಯಾರ್ಥಿಗಳು ತಪಾಸಣೆಗೆ ಒಳಪಟ್ಟು ಅವರಲ್ಲಿ 50 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. . ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುದೀರ್ ಪಿ. ಎಸ್. ಉಪಾಧ್ಯಕ್ಷರು ಹೆಚ್ ಡಿ ಎಫ್ ಸಿ ಬ್ಯಾಂಕ್ ಮೈಸೂರ್ ಸರ್ಕಲ್, ಶ್ರೀಮತಿ ಪೂರ್ಣಿಮಾ ಪೂಂಜ ಶ್ರೀ ವಿಕ್ರಮ್ ಅಯ್ಯಂಗಾರ್ ಅಧ್ಯಕ್ಷರು Starting ಚಾರಿಟೇಬಲ್ ಟ್ರಸ್ಟ್ ಮೈಸೂರು, ಶ್ರೀ ಜೈ ಕುಮಾರ್ ಲಯನ್ಸ್ ಕ್ಲಬ್ ನಿಸರ್ಗ, ಲಯನ್ಸ್ ಕ್ಲಬ್ ಮಯೂರಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ. ಬಿ ವಿ ಪ್ರಶಾಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಬ್ರಹ್ಮರಾಂಬ ಎಸ್, ಹಿರಿಯ ಉಪನ್ಯಾಸಕರಾದ ಪ್ರೊಫೆಸರ್ ಎನ್ ಎಂ ರಾಮಚಂದ್ರಯ್ಯ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು


Share