ವಿದ್ಯಾರ್ಥಿನಿ ನೇಹಾರವರಿಗೆ ಶಾಂತಿ ಮಂತ್ರ ಪಠಣ ಸಲ್ಲಿಸಿ ಸಂತಾಪ 

159
Share

ವಿದ್ಯಾರ್ಥಿನಿ ನೇಹಾರವರಿಗೆ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಶಾಂತಿ ಮಂತ್ರ ಪಠಣ ಸಲ್ಲಿಸಿ ಸಂತಾಪ
ಮೈಸೂರು: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ ನಲ್ಲಿಯೇ ವಿದ್ಯಾರ್ಥಿನಿ ನೇಹಾ ಹಿರೇಮಠದ ಬರ್ಬರ ಹತ್ಯೆಯ ಘಟನೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದರು.
ನಗರದ ಲಕ್ಷ್ಮಿಪುರಂನ ವಿಷ್ಣುವರ್ಧನ್ ರಸ್ತೆಯಲ್ಲಿರುವ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಚೇರಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠರವರ ಭಾವಚಿತ್ರ ಹಿಡಿದು ಶಾಂತಿ ಮಂತ್ರ ಪಠಣ ಮಾಡಿ ಶಾಂತಿ ಕೋರಿ ಸಂತಾಪ ಸಲ್ಲಿಸಿ ಮಾತನಾಡಿದ ಡಿ.ಟಿ.ಪ್ರಕಾಶ್ ಅವರು ಹೆಣ್ಣು ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಗತಿ ಏನು ಎಂದು ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ, ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಮನುಷ್ಯ ರೂಪದ ರಾಕ್ಷಸ ಫಯಾಜ್ ಗೆ ಗಲ್ಲು ಶಿಕ್ಷೆಗೆ ನೀಡಬೇಕು, ದೇಶದಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಇಂತಹ ಹೇಯ ಕೃತ್ಯಗಳು ಹೆಚ್ಚುತ್ತಿರುವುದು ಖಂಡನೀಯ. ಇಂತಹ ಪ್ರಕರಣಗಳಿಗೆ ಸರ್ಕಾರ ಪ್ರತ್ಯೇಕ ಕಠಿಣ ಕಾನೂನು ರೂಪಿಸಬೇಕು. ಬರ್ಬರವಾಗಿ ಹತ್ಯೆಯಾಗಿರುವ ಆ ಹೆಣ್ಣು ಮಗುವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಗೊಳ್ಳಬೇಕು ಎಂದು ತಿಳಿಸಿದರು.

 


Share