ವಿಧವೆ ಮೇಲೆ ಸಾಮುಹಿಕ ಅತ್ಯಾಚಾರ, ಪ್ರಕರಣ ದಾಖಲು

471
Share

ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ
ರಾಯಚೂರು,ಮೇ.೨೦.(ಕ.ವಾ)- ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಿಂಧನೂರು ಡಿವೈಎಸ್‌ಪಿ ವಿಶ್ವನಾಥ ರಾವ್ ಅವರ ಮಾರ್ಗದರ್ಶನದಲ್ಲಿ ಸಿಂಧನೂರು ಸಿಪಿಐ ಡಿ. ಬಾಲಚಂದ್ರ ನೇತೃತ್ವದಲ್ಲಿ ತುರುವಿಹಾಳ ಪಿಎಸ್‌ಐ ಎರಿಯಪ್ಪ ಮತ್ತು ಸಿಬ್ಬಂದಿಗಳಾದ ಎಎಸ್‌ಐ ವೀರೇಶ, ಬಸವರಾಜ, ಶಿವಲಿಂಗಪ್ಪ, ಶಿವರಾಜ, ವೀರೇಶ, ಗೋಪಾಲ, ಶಶಿಧರಗೌಡ, ತಿಪ್ಪಣ್ಣ, ಯೇಸು, ಶರಣಪ್ಪ, ಚೌಡಯ್ಯ ಮತ್ತು ಅಜೀಂ ಪಾಷಾ ಇವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಆದೇಶ, ಸೋಮನಾಥ ಮತ್ತು ರಮೇಶ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರ


Share