ವಿಮಾನದಲ್ಲಿ ಜನ್ಮತಾಳಿದ ಶಿಶು

Share

ಬೆಂಗಳರು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ಎರ್ ಲೈನ್ಸ್ ನ 6E-122 ನಂಬರ್ ನ ವಿಮಾನದಲ್ಲಿ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಸಂತಸದ ಸುದ್ದಿ ವರದಿಯಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಬರಲು ಫಿಟ್ ಎರ್ ಸರ್ಟಿಫಿಕೇಟ್ ಪಡೆದು ಪ್ಲೈಟ್ ಹತ್ತಿದ್ದ ಗರ್ಭಿಣಿ ಮಹಿಳೆಗೆ ಮಾರ್ಗ ಮದ್ಯ ರಾತ್ರಿ ಎಂಟು ಗಂಟೆ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಪ್ಲೈಟ್ ನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರಾದ ವೈದ್ಯೆ ಡಾ.ಶೈಲಜಾ ವಲ್ಲಬಾನಿ ರವರು ಹೆರಿಗೆ ಮಾಡಿಸಿದ್ದು, ಗರ್ಭಿಣಿಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಂಪ್ಲಿಮೆಂಟ್ಸ್, ದೊಡ್ಡಬಳ್ಳಾಪುರ
ತಾಯಿ-ಮಗು ಆರೋಗ್ಯ ವಾಗಿದ್ದು,ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೆಂಗಳೂರಿನ ಹೆಬ್ಬಾಳದ ಬಳಿಯ ಎ ಸ್ಟಾರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತಾಯಿ ಮಗು ರವಾನಿಸಿದ್ದು ಚಿಕಿತ್ಸೆ ನೀಡುತ್ತಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎರ್ ಪೋರ್ಟ್ ಸಿಬ್ಬಂದಿ ತಾಯಿ ಮಗುವಿಗೆ ಭವ್ಯ ಸ್ವಾಗತ ಕೋರಿದ್ದಾರೆ. ಅಲ್ಲದೆ, ಇದೊಂದು ಅಪೂರ್ವ ಕ್ಷಣ ಎಂದಿರುವ ಇಂಡಿಗೋ ಸಂಸ್ಥೆಯಿಂದ ಆಕರ್ಷಕ ಉಡುಗೊರೆಯಾಗಿ ತಾಯಿ, ಮಗುವಿಗೆ ಜೀವನ ಪರ್ಯಂತ ಉಚಿತ ವಿಮಾನ ಪ್ರಯಾಣ ಘೋಷಣೆಯನ್ನು ಮಾಡಿದೆ, ಕೃಪೆ.


Share