ವಿಶೇಷ ಚೇತನ ಸಂಸ್ಥೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ

431
Share

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ವಿಜಯನಗರ 4ನೇ ಹಂತ ಮೂಡ ಪಾರ್ಕ್ ನಲ್ಲಿ ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು.

ಅಂಗವಿಕಲ ಅಧಿನಿಯಮ ಮಾಜಿ ಆಯುಕ್ತರಾದ ಕೆ.ವಿ.ರಾಜಣ್ಣ ಚಾಲನೆಕೊಟ್ಟು ಮಾತನಾಡಿ, ಏರುತ್ತಿರುವ ತಾಪಮಾನದ ಬಗ್ಗೆ ವಿಶ್ವದ ವಿಜ್ಞಾನಿಗಳು ತಲೆಬಿಸಿ ಮಾಡಿಕೊಂಡಿದ್ದು, ಪರಿಹಾರೋಪಾಯ ಹುಡುಕುತ್ತಲೇ ಇದ್ದಾರೆ. ಆದರೆ, ಜನಸಾಮಾನ್ಯರು ಕೂಡ ಈ ದಿಶೆಯಲ್ಲಿ ಪರಿಸರದ ಕುರಿತು ಕಾಳಜಿ ಹೊಂದಬೇಕಿದೆ.
ಕಳೆದ ಸುಮಾರು ನೂರು ವರ್ಷಗಳ ಯಾಂತ್ರಿಕ ಉಷ್ಣತಾ ದಾಖಲೆಗಳನ್ನು ಅವಲೋಕಿಸಿದರೆ ಕಂಡುಬರುವ ಹವಾಗುಣ ಪ್ರವೃತ್ತಿಯು ಸರಾಸರಿ ಜಾಗತಿಕ ತಾಪಮಾನದಲ್ಲಿ ಏರಿಕೆಯನ್ನು ತೋರಿಸುತ್ತದೆ ಇದಕ್ಕೆ ಮನುಷ್ಯನ ದುರಾಶೆಯೇ ಕಾರಣ ಎಂದು ಹೇಳಿದರು.

ಇಂದು ಯಾವ ಪಾರ್ಕಗಳಲ್ಲಿ ಅಳಲಿಮರ, ಆಲದಮರ, ಅತ್ತಿಮರ, ಹೊಂಗೆ, ಬೇವು ಮರಗಳನ್ನ ನಾವು ನೋಡುತ್ತಿಲ್ಲ ಇವುಗಳು ವಾತಾವರಣದ ಸಮತೋಲನವನ್ನು ಕಪಾಡುತ್ತವೆ ಜೊತೆಗೆ ಪಕ್ಷಿ ಹಾಗೂ ಕೋತಿಗಳಿಗೂ ಸಹ ಆಹಾರವಾಗುತ್ತವೆ ಆದ್ದರಿಂದ ಇಂತಹ ಮರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ನಂತರ ಸಾಹಿತಿ ಸತೀಶ್ ಜವರೇಗೌಡ ಮಾತನಾಡಿ ಪರಿಸರ ಸಮತೋಲನ ಕಪಾಡಿಕೊಳ್ಳದೆ ಹೋದರೆ ರಾಜಕೀಯ, ಸಾಮಾಜಿಕ, ಆರ್ಥಿಕ ಯಾವುದು ಕೂಡ ನಮ್ಮನ್ನು ಕಪಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಜೀವ ಸಂಕುಲವನ್ನು ಕಾಪಾಡುವ ಶಕ್ತಿ ಪರಿಸರ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿದ ಹಬ್ಬಗಳನ್ನ ಕೇಕ್ ಕಟ್ಟುಮಾಡಿಕೊಳ್ಳುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವುದನ್ನ ನೋಡುತ್ತಿದ್ದೇವೆ. ಕೇಕ್ ಕಟ್ಟುಮಾಡುವುದರ ಬದಲು ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಒಂದೊಂದು ಗಿಡ ನೆಟ್ಟರು ಕೋಟ್ಯಂತರ ಮರಗಳು ಕೋಟ್ಯಂತರ ಜನರಿಗೆ ಜೀವದಾನ ನೀಡುತ್ತದೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾವೇರಪ್ಪ, ಸಿದ್ಧಾರೂಢ, ಅಖಿತ್, ಪಾಂಡು, ಧನಂಜಯ್, ಉಮೇಶ್ ಹಾಗೂ ಇನ್ನಿತರು ಭಾಗವಹಿಸಿದರು.


Share