ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಭಿಯಾನಕ್ಕೆ ಚಾಲನೆ

485
Share

ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಿಮಿತ್ತ ಜನಜಾಗೃತಿ ಅಭಿಯಾನಕ್ಕೆ‌ ಚಾಲನೆ
ಜಗಿಯುವ ತಂಬಾಕು ಸೇವನೆ,ಉಗುಳುವುದು ನಿಷೇಧ: ಡಾ.ಮರಿಯಂಬಿ
ಬಳ್ಳಾರಿ, ಮೇ 31(ಕರ್ನಾಟಕ ವಾರ್ತೆ): ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ‌ ಭಾನುವಾರ ಏರ್ಪಡಿಸಿದ್ದ ವಾಹನಗಳ ಧ್ವನಿವರ್ಧಕದ ಮೂಲಕ ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಮತ್ತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುರಾಜ‌ ಚವ್ಹಾಣ ಅವರು‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ‌ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ವಾಹನದಲ್ಲಿ ಧ್ವನಿವರ್ದಕದ ಮೂಲಕ ಜನಜಾಗೃತಿ ಅಭಿಯಾನವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ ಹೊರಟು ಸಂಗಂ ವೃತ್ತ, ರಾಘವೇಂದ್ರ ಚಿತ್ರ ಮಂದಿರ ವೃತ್ತ, ಮೀನಾಕ್ಷಿ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಲಯ, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲೀಸ್ ಠಾಣೆ, ಎ.ಪಿ.ಎಂ.ಸಿ ಯಾರ್ಡ್,ಬಾಪೂಜಿನಗರ, ಮಿಲ್ಲರ್ ಪೇಟೆ, ಶ್ರೀ ರಾಂಪುರ ಕಾಲೋನಿ, ಎಮ್.ಜಿ ವೃತ್ತ, ಪಟೇಲ್ ನಗರ, ಎಸ್.ಎನ್.ಪೇಟೆ, ಗಾಂಧಿನಗರ, ದುರ್ಗಮ್ಮ ಗುಡಿ ವೃತ್ತ, ಎಸ್.ಪಿ.ಸರ್ಕಲ್, ಕೋಟೆ, ಕೌಲ್ ಬಜಾರ್, ಬೆಳಗಲ್ ಕ್ರಾಸ್, ರೇಡಿಯೋ ಪಾರ್ಕ್, ನಂದಿ ಸ್ಕೂಲ್ ಹೊಸಪೇಟೆ ರಸ್ತೆ, ಸುಧಾ ಕ್ರಾಸ್, ಓ.ಪಿ.ಡಿ. ಇಂದಿರಾನಗರ, ದೇವಿನಗರ, ಮೋತಿ ವೃತ್ತ, ರಾಯಲ್ ವೃತ್ತ, ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಮರಳಿತು.
ಈ ಸಂಧರ್ಭದಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರು ಸಮುದಾಯದಲ್ಲಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ತಂಬಾಕಿನ ವಿವಿಧ ಉತ್ಪನ್ನಗಳನ್ನು ಸಾರ್ವಜನಿಕ ಆರೋಗ್ಯದ ಹಿನ್ನಲೆಯಲ್ಲಿ ಹಂತಹಂತವಾಗಿ ಬಳಕೆಯನ್ನು ನಿಯಂತ್ರಿಸುವ ಕಾರ್ಯ ಕಾನೂನಾತ್ಮಕ ರೀತಿಯಲ್ಲಿ ಹಾಗೂ ಜಾಗೃತಿ ನೀಡುವ ಮೂಲಕ ಕೈಗೊಳ್ಳಲಾಗುತ್ತಿದೆ. ಇತ್ತೀಚಿಗೆ ಜಾಗತಿಕವಾಗಿ ಕಂಡುಬಂದ ಕರೋನಾ ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಲಾಗಿದ್ದು ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕಾರ ನೀಡುವಂತೆ ಕೋರಿದರು.
‘’ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ರಕ್ಷಣೆ ಮಾಡುವುದು’’ ಈ ವರ್ಷದ ಧೈಯವಾಕ್ಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ‌ಸಲಹೆಗಾರ ದುರುಗೇಶ ಎಸ್.ಮಾಚನೂರು, ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಜಬೀನ್ ತಾಜ್ ಜಿಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ,ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ, ಡಾ. ಗುರುಪ್ರಸಾದ್ ಪುರೋಹಿತ್, ಶರತ್ ಬಾಬು ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಂಬಾಕು ದುಷ್ಪರಿಣಾಮಗಳು ಹಾಗೂ ನಿಯಂತ್ರಣ:
ತಂಬಾಕುವಿನಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತದೆ. ತಂಬಾಕು ವಸ್ತುಗಳಲ್ಲಿ (ಸಿಗರೇಟ್, ಬೀಡಿ, ಸಿಗ್ಯಾರ್ ಇತ್ಯಾದಿ) 7000 ರಾಸಾಯನಿಕ ವಸ್ತುಗಳಿದ್ದು, ಅದರಲ್ಲಿ ಶೇ. 69ರಷ್ಟು ಕ್ಯಾನ್ಸರ್‌ ಕಾರಕ ವಸ್ತುಗಳಾಗಿವೆ. ಧೂಮರಹಿತ (ಜಿಗಿಯುವ ತಂಬಾಕುಗಳು) ತಂಬಾಕು ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು,ಅದರಲ್ಲಿ ಶೇ. 28ರಷ್ಟು ಕ್ಯಾನ್ಸರ್‌ ಕಾರಕ ವಸ್ತುಗಳಿವೆ.
ತಂಬಾಕು ಅಥವಾ ನಿಕೋಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಉತ್ತೇಜಕ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಯಾರು ಧೂಮಾಪಾನವನ್ನು ಮಾಡುತ್ತಾರೋ ಅವರು ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಮೇದೊಜ್ಜೀರಕ ಗ್ರಂಥಿ, ಮೂತ್ರಪಿಂಡ, ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್, ಅಲ್ಜಮೈರ್, ಬ್ರೇನ್, ಮೂಲೆ ಶ್ವಾಸಕೋಶ ಸಂಬಂಧಿ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು.
ಹೊಗೆ ರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಭ್ರೂಣಕ್ಕೆ ಹಾಣಿ, ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧೀವಾತ ಹಾಗೂ ಅಸ್ಟಿಯೋಪೊರೊಸಿಸ್ ಮುಂತಾದ ತೊಂದರೆ ಹೆಚ್ಚಿಸಲೂಬಹುದು ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15ವರ್ಷ ಕಡಿಮೆಯಾಗುತ್ತೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್‌ಗಿಂತ ಸುರಕ್ಷಿತ ಎಂಬ ನಂಬಿಕಿಯಿದೆ. ಇದು ಸತ್ಯವಲ್ಲ ಅವು ಕೂಡ ಸಿಗರೇಟ್‌ನಂತೆಯೇ ಅಪಾಯಕಾರಿ ಇವು ಅದನ್ನು ಸೇವಿಸುವ ವ್ಯಕ್ತಿ ಮಾತ್ರವಲ್ಲದೆ ಆತನ ಸುತ್ತಮುತ್ತಲಿನನವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ.
ತಂಬಾಕು ತ್ಯಜಿಸುವುದು ಹೇಗೆ ?: ತಂಬಾಕಿನಲ್ಲಿರುವ ನಿಕೋಟಿನ್ ಎಂಬ ರಾಸಾಯನಿಕ ವಸ್ತು ವ್ಯಸನವಾಗಿಸುತ್ತದೆ. ಎಂಬ ಕಟು ಸತ್ಯ ಅರ್ಥಮಾಡಿಕೊಳ್ಳುವುದು. ತಂಬಾಕು ತ್ಯಜಿಸುವ ದಿನಾಂಕ ನಿಗದಿ ಮಾಡಿಕೊಳ್ಳುವುದು ಮತ್ತು ಅದಕ್ಕೆ ಬದ್ದರಾಗಿರುವುದು.ತಂಬಾಕು ಸೇವಿಸುವ ವ್ಯಕ್ತಿಗಳಿಂದ, ಪರಿಸರದಿಂದ ಸಾಧ್ಯವಾದಷ್ಟು ದೂರವಿರುವುದು. ತಂಬಾಕು ತಿನ್ನಬೇಕಿನಿಸಿದಾಗ, ಮನಸನ್ನು ನಿಗ್ರಹಿಸಲು ನಿಮಗೆ ಖುಷಿ ನೀಡುವ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಪೌಷ್ಠಿಕ ಆಹಾರ ಸೇವಿಸುವುದು. ಅಗತ್ಯವಿದ್ದಲ್ಲಿ ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ / ಚಿಕಿತ್ಸೆ ಪಡೆಯುವುದು.
ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನ: ರಕ್ತದ ಒತ್ತಡ ಮತ್ತು ಹೃದಯ ಬಡಿತ ಸಾಮನ್ಯ ಹಂತಕ್ಕೆ ಬರುತ್ತದೆ.ದೇಹದಲ್ಲಿ ಕಾರ್ಬನ್ ಮೊನಾಕ್ಸೈಡ್(ಟೋಕ್ಸಿನ್) ಪ್ರಮಾಣ ಕಡಿಮೆ ಆಗುತ್ತದೆ. ಹೃದಯಾಘತ ಕಡಿಮೆಯಾಗುತ್ತದೆ.ಬಾಯಿ ಅಲ್ಸರ್ ಕಡಿಮೆಯಾಗುತ್ತದೆ. ಹಣದ ಉಳಿತಾಯ ಆಗುತ್ತದೆ.
ತಂಬಾಕು ನಿಯಂತ್ರಣ ಕಾನೂನು – ಕೋಟ್ಪಾ 2003: ಸೆಕ್ಷನ್-4: ಸಾರ್ವಜನಿಕ ಸ್ಥಳಗಲ್ಲಿ ಧ


Share