ವಿಶ್ವ ವಿಖ್ಯಾತ ವೈರಮುಡಿ ಉತ್ಸವಕ್ಕೆ ಚಾಲನೆ : ವೀಕ್ಷಿಸಿ

Share

ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ಇಂದು ಬೆಳಿಗ್ಗೆ ಚೆಲುವರಾಯ ಸ್ವಾಮಿಗೆ ಅಭಿಷೇಕ ಮಾಡುವುದರ ಮೂಲಕ ಆರಂಭಗೊಂಡಿದ್ದು ಈಗ ಅಂಕುರಾರ್ಪಣೆ ನೆರವೇರಿತು.
ಅಂಕುರಾರ್ಪಣೆ : ಬೆಳಗ್ಗೆ ಶ್ರೀ ಚೆಲುವರಾಯ ಸ್ವಾಮಿಗೆ ಉತ್ಸವ, ಮಧ್ಯಾಹ್ನ ಅಭಿಷೇಕ, ಬೆಳಿಗ್ಗೆ ಅಮ್ಮನವರಿಗೆ ಅಭಿಷೇಕ, ರಾತ್ರಿ ಶ್ರೀನಾರಾಯಣಸ್ವಾಮಿ ಸನ್ನಿಧಿಯ ಬಳಿ ಪುಣ್ಯಾಹ, ಅನುಗ್ರಹ, ವಿಶ್ವನ ಆರಾಧನೆ, ಸ್ನಪನ ಸ್ವಾಮಿಗೆ ಅಭಿಷೇಕ, ಜಿತಂತಾಸ್ತೋತ್ರ ಪಠನ, ತೀರ್ಥಗೋಷ್ಠಿಯಾದ ಬಳಿಕ ವಿಶ್ವಕ್ಸೇನರಿಗೆ ಉತ್ಸವ, ಕೋಟೆ ಬಾಗಿಲ ಬಳಿ ಇರುವ ಬೃಂದಾವನದ ಬಳಿ ಮೃತ್ತಿಕಾ ಸಂಗ್ರಹ, ಯಾಗ ಪ್ರತಿಷ್ಠೆ ಇಂದಿನ ಕಾರ್ಯಕ್ರಮಗಳು ಯಥಾ ವಿಧಿಯಾಗಿ ನೆರವೆರಿತು.
ವೈರಮುಡಿ ಬ್ರಹ್ಮತ್ಸವವು ಮಾರ್ಚಿ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಇಲ್ಲಿ ನಡೆಯುವ ಜಾತ್ರೆಗಳಲ್ಲೆಲ್ಲಾ ಇದು ಅತಿ ದೊಡ್ಡ ಉತ್ಸವ. ಇದು ಜಗತ್ ಪ್ರಸಿದ್ಧವಾದ ಉತ್ಸವ ಹಾಗೂ ಜಾತ್ರೆ ಅಲ್ಲದೆ ಯಾತ್ರಾರ್ಥಿಗಳು ದರ್ಶನಾರ್ಥಿಗಳಾಗಿ ಹೇರಳವಾಗಿ ಬರುತ್ತಾರೆ.
ಭರಣಿ ನಕ್ಷತ್ರದಿಂದ ಪ್ರಾರಂಭಗೊಂಡು ಹಸ್ತ ನಕ್ಷತ್ರ ತೀರ್ಥ ಸ್ನಾನವಾಗುವಂತೆ (ತೀರ್ಥ ಸ್ನಾನ ಉತ್ಸವಕ್ಕೆ ಮೀನ ಮಾಸದ ಹಸ್ತನಕ್ಷತ್ರ ವಿರಬೇಕು) ಉತ್ಸವ ನಡೆಯುತ್ತದೆ.

ವರದಿ :

 ಟಿ ವಿ ಪದ್ಮ ಸೋಮ ಶೇಕರ್


Share