ವಿಷು ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ

Share

 

SOUTH WESTERN RAILWAY
Press Release No. 26 Dt: 14.04.2023

*RUNNING OF SPECIAL TRAINS FOR VISHU FESTIVAL*

Southern Railway has notified the operation of Train No. 06083/06084 between Kochuveli and Sir M. Visvesvaraya Terminal Bengaluru Festival Special Fare trains on demand to clear extra rush of passengers during the Vishu festival, as detailed below:

Train No. 06083 will depart from Kochuveli at 5 p.m. on 16.04.2023 and arrive at Sir M. Visvesvaraya Terminal Bengaluru at 10 a.m. on the next day. In the return direction, Train No. 06084 Sir M. Visvesvaraya Terminal – Kochuveli Special Express will leave SMVT Bengaluru at 1 p.m. on 17.04.2023 and reach Kochuveli at 6:50 a.m. on the next day.

The train will halt at Kollam, Kayankulam, Mavelikara, Chengannur, Tiruvalla, Chenganseri, Kottayam, Ernakulam Town, Aluva, Thrissur, Palakkad, Coimbatore, Tiruppur, Erode, Salem, Omalur, Dharmapuri and Hosur stations in both directions.

The special train will have 22 coaches including AC two tier coaches (2), AC three tier coaches (8), sleeper class coaches (7), general second-class coaches (3), second class luggage cum brake-vans/disabled friendly compartment (1) and Break, luggage cum generator car (1).

Passengers are requested to take advantage of this special train service.

*ವಿಷು ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ*

ವಿಷು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರುವುಗೊಳಿಸಲು ಬೇಡಿಕೆ ಮೇರೆಗೆ ಕೊಚುವೇಲಿ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲುಗಳನ್ನು (06083/06084) ಓಡಿಸಲು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ. ಈ ರೈಲಿನ ವಿವರ ಕೆಳಗಿನಂತಿದೆ.

ರೈಲು ಸಂಖ್ಯೆ 06083 ಏಪ್ರಿಲ್‌ 16 ರಂದು ಕೊಚುವೇಲಿ ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಪುನಃ ಇದೇ ರೈಲು (06084) ಏಪ್ರಿಲ್‌ 17 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6.50 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಕೊಲ್ಲಂ, ಕಾಯಂಕುಲಂ, ಮಾವೇಲಿಕರ, ಚೆಂಗನ್ನೂರ, ತಿರುವಲ್ಲಾ, ಚೆಂಗನ್‌ಸೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್‌, ಅಲುವಾ, ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ, ಓಮಲೂರ್, ಧರ್ಮಪುರಿ ಮತ್ತು ಹೊಸೂರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಈ ವಿಶೇಷ ರೈಲಿನಲ್ಲಿ ಎಸಿ ಟು ಟೈರ್ ಬೋಗಿಗಳು (2), ಎಸಿ ತ್ರಿ ಟೈರ್ ಬೋಗಿಗಳು (8), ಸ್ಲೀಪರ್ ಕ್ಲಾಸ್ ಬೋಗಿಗಳು (7), ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳು (3), ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್-ವ್ಯಾನ್‌/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ (1) ಮತ್ತು ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ (1) ಸೇರಿದಂತೆ 22 ಬೋಗಿಗಳನ್ನು ಒಳಗೊಂಡಿರುತ್ತವೆ.

ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

Aneesh Hegde
Chief Public Relations Officer
South Western Railway, Hubballi


Share