ವಿಸ್ಮಯ ಚಿಕಿತ್ಸೆ

Share

ಚಿಕಿತ್ಸೆ ತಂದ ಅಚ್ಚರಿ

ವೈದ್ಯಲೋಕದಲ್ಲಿ ವಿಸ್ಮಯ ಮೂಡಿಸಿದ ನಿಸರ್ಗ ಚಿಕಿತ್ಸೆ

ಬಾಗಲಕೋಟೆ: ಜೂನ್ 02 (ಕರ್ನಾಟಕ ವಾರ್ತೆ) : ಜಾಗತಿಕ ಮಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಸಹ ಪಾರಂಪರಿಕ ಚಿಕಿತ್ಸೆಗೆ ಮತ್ತೇ ಜೀವ ತುಂಬುವ ಪ್ರಯತ್ನ ಕೆಲವೇ ಕೆಲವರಿಂದ ಆರಂಭಗೊಂಡಿದ್ದು, ಇಂಥದೊಂದು ಅಚ್ಚರಿಯ ಬೆಳವಣಿಗೆ ಬಾಗಲಕೋಟೆ ಹತ್ತಿರದ ಶಿರೂರಿನ ಚಿತ್ತರಗಿ ಮಹಾಂತತೀರ್ಥ ಶಿವಯೋಗ ಹಾಗೂ ನಿಸರ್ಗ ಚಿಕಿತ್ಸೆ ಕೇಂದ್ರದಲ್ಲಿ ಕಂಡುಬಂದಿದೆ.
ನಂಬಿಕೆ ಹಾಗೂ ಅಪನಂಬಿಕೆಗಳ ನಡುವೆ ಬದುಕು ಸಾಗಿಸುತ್ತಿರುವ ಈ ಸಂದರ್ಭದಲ್ಲಿ ಆಧುನಿಕ ವೈದ್ಯಲೋಕದ ಪ್ರಯತ್ನಗಳ ನಡುವೆಯೂ ಸಿಗದ ಪರಿಹಾರಕ್ಕೆ ನಿಸರ್ಗ ಚಿಕಿತ್ಸೆ ಬಳಸಿ ಅತೀ ಗಂಭೀರ ರೂಪದ ವಾಸಿಯಾಗದ ಬೋನ್ ಮ್ಯಾರೋ ಕ್ಯಾನ್ಸರ್ ರೋಗವನ್ನು ಡಾ.ಬಸವಲಿಂಗ ಸ್ವಾಮಿಜಿಗಳು ಗುಣಪಡಿಸಿ ದಾಖಲೆ ನಿರ್ಮಿಸಿ ವೈದ್ಯಲೋಕದಲ್ಲೇ ಅಚ್ಚರಿ ಮೂಡಿಸಿದ್ದಾರೆ. ಕೋವಿಡ್ ಕೊರೊನಾ ಲಾಕ್‍ಡೌನ್ ಮಧ್ಯೆಯೇ ಇಂಥದೊಂದು ಅಚ್ಚರಿ ನಿಸರ್ಗ ಚಿಕಿತ್ಸೆ ವೈದ್ಯಲೋಕದಲ್ಲಿ ದಾಖಲಾಗಿದೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ.ಗಳನ್ನು ಖರ್ಚುಮಾಡಿ ಆನಾರೋಗ್ಯ ಪೀಡಿತನಾಗಿದ್ದ ಬಳ್ಳಾರಿ ಮೂಲದ 30 ವರ್ಷದ ಕೆಇಬಿ ಇಂಜಿನೀಯರ್ ಜ್ಞಾನೇಶ ಮಲ್ಲಿಕಾರ್ಜುನ ಶಾವೆಗೆ ರಕ್ತ ಹಾಗೂ ಹಿಮೋಗ್ಲೋಬಿನ್ ಉತ್ಪಾದನೆ ತೀವ್ರ ಕುಸಿತಗೊಂಡು ಬೋನ್ ಮ್ಯಾರೋ ಪ್ರಥಮ ಹಂತದ ಲಕ್ಷಣಗಳನ್ನು ಒಳಗೊಂಡು ಅಸ್ವಸ್ಥನಾಗಿದ್ದರು. ಸೆವರ್ ಹಾರಮೋಗ್ಲಿಟಿಕ್ ಅನೆಮಿಯಾ ಎಂದು ವೈದ್ಯರು ಲ್ಯಾಬರೋಟರಿ ವರದಿಯಲ್ಲಿ ತಿಳಿಸಲಾಯಿತು. ಕೇವಲ 4.6 ಎಚ್.ಬಿ ಹಾಗೂ 36000 ಪ್ಲೇಲ್ ಲೇಟರ್‍ಗಳ ವರದಿ ಬಂತು. ಕಣ್ಣುಗಳು ಮಸುಕಾದವು. ತೀವ್ರ ಬೆನ್ನು ನೋವು, ಕಾಲು ನೋವು, ನಿದ್ರಾಹೀನತೆ, ಆಯಾಸ ಅಶಕ್ತತೆಯಿಂದ ನಿತ್ರಾಣವಾಗಿದ್ದನು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಲಹೆ ನೀಡಲಾಯಿತು. ಆರಂಭದಲ್ಲೇ ಒಂದು ಲಕ್ಷ ರೂ. ಕಟ್ಟಿ ಪ್ರಥಮ ಹಂತದ ಬೋನ್ ಮ್ಯಾರೋ ಕ್ಯಾನ್ಸರ್ ಲಕ್ಷಣಗಳು ಕಂಡು ಬರುತ್ತಿವೆ. ರಕ್ತ ಉತ್ಪಾದನೆ ಕುಸಿಯುತ್ತಿದೆ ಎನ್ನಲಾಯಿತು. ತಕ್ಷಣವೇ ಅವರ ಮಾವ ಇಳಕಲ್ಲಿನಲ್ಲಿ ಡಾ.ಮಂಜು ಆಯುರ್ವೇದದ ವೈದ್ಯ ಜ್ಞಾನೇಶ ಅವರನ್ನು ಎಪ್ರೀಲ್ ತಿಂಗಳಲ್ಲಿ ಶಿರೂರಿನ ಶಿವಯೋಗಿ ಯೋಗ ಹಾಗೂ ನಿಸರ್ಗ ಚಿಕಿತ್ಸೆ ಕೇಂದ್ರಕ್ಕೆ ಒಳರೋಗಿಯಾಗಿ ದಾಖಲಿಸಲಾಯಿತು.
ಡಾ.ಬಸವಲಿಂಗ ಸ್ವಾಮಿಗಳ ನಿರಂತರ 21 ದಿನಗಳ ಚಿಕಿತ್ಸೆಯಿಂದಾಗಿ ಜ್ಞಾನೇಶ ಈಗ ಅತ್ಯುತ್ತಮವಾಗಿ ಚೇತರಿಸಿಕೊಂಡು, ಗುಣಮುಖರಾಗಿ 3 ಬಾರ ರಕ್ತ ಪರೀಕ್ಷೆ ಮಾಡಿಸಲಾಗಿ ಹಿಮೋಗ್ಲೋಬಿನ್ 11.5 ಎಂ.ಜಿ ಗೆ ಏರಿಕೆಯಾಯಿತು. ಪ್ಲೇಟ್‍ಲೇಟರ್‍ಗಳ ಸಂಖ್ಯೆ ಲಕ್ಷ ದಾಟಿತು. ಇದೊಂದು ಅಚ್ಚರಿಯ, ವಿಸ್ಮಯಕಾರಿ ಬದಲಾವಣೆಯೆನ್ನುತ್ತಾರೆ ಡಾ.ಬಸವಲಿಂಗ ಸ್ವಾಮಿಗಳು. 21 ದಿನಗಳಲ್ಲಿ ಎಚ್.ಬಿ 11.6 ಜಿಎಂ ಏರಿಕೆ ಹಾಗೂ ಬಿಳೆಯ ರಕ್ತಕಣಗಳ ಸಂಖ್ಯೆ ರೆಡ್ ಝೋನ್‍ನಿಂದ ಗ್ರೀನ್ ಝೋನ್‍ಗೆ ಬದಲಾಯಿತು. ನಿಸರ್ಗದ ಚಿಕಿತ್ಸೆಯಲ್ಲಿ ಅದ್ಬುತ ಶಕ್ತಿಯಿದೆ. ನಿಸರ್ಗದಲ್ಲಿ ಎಲ್ಲವೂ ಇದೆ. ಆರೈಸಿಕೊಳ್ಳಬೇಕಿದೆ ಎನ್ನುತ್ತಾರೆ ಸ್ವಾಮಿಗಳು.
ಉಪವಾಸ, ಜೇನತುಪ್ಪ, ನಿಂಬೆಹಣ್ಣು, ಎಣ್ಣೆ ಸ್ನಾನ, ಮಸಾಜ್, ಮಣ್ಣು ಸ್ನಾನ, ಸೂರ್ಯಸ್ನಾನ, ಹಣ್ಣುಗಳ ಸೇವನೆ, ಮ್ಯಾಗ್ನೇಟ್ ಥೆರಾಪಿ ಹಾಗೂ ಯೋಗ್ಯ ಆಹಾರ ಪದ್ದತಿ ಹಾಗೂ ದಿನನಿತ್ಯ ಯೋಗ, ಪ್ರಾಣಾಯಾಮದಿಂದ ಅನೇಕ ರೋಗಗಳು ನಿವಾರಣೆಯಾಗಿದೆ. ಗಾಂಧೀಜಿಯವರು ನಿಸರ್ಗ ಚಿಕಿತ್ಸೆ ಪದ್ದತಿಗೆ ಹೆಚ್ಚಿನ ಒತ್ತು ನೀಡಿದ್ದು, ಭಾರತೀಯ ವೈದ್ಯ ಪದ್ದತಿ ಜಗತ್ತಿನಲ್ಲಿ ಶ್ರೇಷ್ಠವಾಗಿದೆಯೆನ್ನುತ್ತಾರೆ ಡಾ.ಬಸವಲಿಂಗ ಸ್ವಾಮಿಗಳು. ಸಾಮಾನ್ಯ ಚಿಕಿತ್ಸೆ ಹಾಗೂ ರೋಗಕ್ಕೆ ಸಂಬಂಧಪಟ್ಟ ವಿಶೇಷ ಚಿಕಿತ್ಸೆ ಹಾಗೂ ವಿಶೇಷ ಆಸನಗಳು, ವಿಶೇಷ ಆಹಾರ, ವಿಶೇಷವಾದ ವಿಚಾರಗಳನ್ನು ನೀಡಲಾಗುತ್ತದೆ. ನೂರಾರು ವಿಶೇಷ ಪ್ರಕರಣಗಳು ಸಹ ವಾಸಿಯಾದ ಉದಾಹರಣೆಗಳಿವೆ.
ಛಾಯಾಚಿತ್ರ ಲಗತ್ತಿಸಿದೆ. 4 ರಿಂದ 6


Share