ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ

377
Share

ಇಂದಿನ ದಲ್ಲಾಳಿ ರಾಜಕಾರಣದ ಶುದ್ಧೀಕರಣಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ರಂತಹ ಯುವ ರಾಜಕಾರಣಿಗಳು ಅನಿವಾರ್ಯಡಾ. ಬಿಜೆವಿ

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ವರುಣ ವಿಧಾನಸಭಾ ಕಾಂಗ್ರೆಸ್- ವೇದಿಕೆ.

ದಿನಾಂಕ 27. 6. 2020. ಮೈಸೂರು.

ದಿನದಿಂದ ದಿನಕ್ಕೆ ರಾಷ್ಟ್ರದ ಮತ್ತು ರಾಜ್ಯದ ರಾಜಕಾರಣ ದಲ್ಲಾಳಿ ಮತ್ತು ಮಾರುಕಟ್ಟೆ ರಾಜಕಾರಣಕ್ಕೆ ಬಲಿಯಾಗುತ್ತಿರುವುದರಿಂದ, ಅಷ್ಟೇ ಅಲ್ಲದೆ ಜನವರ್ಗದ ಕಲ್ಯಾಣದ ಬದಲಾಗಿ ಸ್ವಾರ್ಥ ಮತ್ತು ಜಾತಿ ಆಧಾರಿತ ರಾಜಕಾರಣ ವಿಜೃಂಭಿಸುತ್ತಿರುವುದರಿಂದ ಇದರ ಮಲಿನತೆಯ ಶುದ್ಧೀಕರಣಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಅಂತಹ ಯುವ ರಾಜಕಾರಣಿಗಳು ಅನಿವಾರ್ಯ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಾಡನಹಳ್ಳಿ ರಸ್ತೆಯಲ್ಲಿರುವ ವಯೋವೃದ್ಧರ ಶ್ರೀ ವಾಸವಿ ಶಾಂತಿ ಧಾಮ ವೃದ್ಧಾಶ್ರಮದಲ್ಲಿ ವರ್ಣ ವಿಧಾನಸಭಾ ಕಾಂಗ್ರೆಸ್ ವೇದಿಕೆ , ಶಾಸಕರ ಜನ್ಮದಿನದ ಅಂಗವಾಗಿ ಹಣ್ಣು ಹಂಪಲು ಹಾಗೂ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಡಾ.ಬಿಜೆವಿ ನಂಬಿಕೆ ಹಾಗೂ ಮೌಲ್ಯಾಧಾರಿತ ರಾಜಕಾರಣದ ಸಾವಿಗೆ ಸಂಪತ್ತು ಮತ್ತು ಸಂಪಾದನೆಯ ಮನೋಧರ್ಮದ ರಾಜಕಾರಣಿಗಳೆ ಮೂಲ ಕಾರಣ. ದೇಶದ ಸಂವಿಧಾನ ಅಪಾಯದ ಅಂಚಿನಲ್ಲಿದೆ, ಪ್ರಜಾತಂತ್ರದ ವ್ಯವಸ್ಥೆ ಬದಲಾಗಿ ನಿರಂಕುಶ ಪ್ರಭುತ್ವದ ಮುನ್ಸೂಚನೆಗಳು ಜನವರ್ಗವನ್ನು ದಿಕ್ಕುತಪ್ಪಿಸುತ್ತಿದೆ. ಇದರ ರಕ್ಷಣೆಗೆ ಸಮಾಜಮುಖಿ ವಿದ್ಯಾವಂತ ಯುವ ರಾಜಕಾರಣಿಗಳು ಹಾಗೂ ಬದ್ಧತೆ ಇರುವ ಮತದಾರ ಒಟ್ಟಿಗೆ ಸೇರಿ ಜನಾಂದೋಲನವನ್ನು ತುರ್ತಾಗಿ ಕಟ್ಟುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ. ಭಾರತೀಯ ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ಸಾಕಷ್ಟು ತಿದ್ದುಪಡಿಗಳು ಆಗಬೇಕಾಗಿದೆ. ದೇಶದಲ್ಲಿ ಶಾಸನಸಭೆಗಳ ಚರ್ಚೆ ಸಮಾಜದ ಹಿತಾಸಕ್ತಿ ಬದಲಾಗಿ ಪಕ್ಷದ ಹಿತಾಸಕ್ತಿ ಮತ್ತು ಕುಟುಂಬದ ಸ್ವಾರ್ಥ ಹಿತಾಸಕ್ತಿಗೆ ಬಲಿಯಾಗುತ್ತಿದೇ ಎಂದರು.

ಸಮಾರಂಭದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹದಿನಾರು ನಂಜಪ್ಪ, ತಾಲೂಕು ಪಂಚಾಯಿತಿ ಸದಸ್ಯರಾದ ದಾಸನೂರು ಪದ್ಮನಾಭ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರವಿಕುಮಾರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕುಪ್ಪರವಳ್ಳಿ ಮುನಿಯಪ್ಪ, ವೇದಿಕೆಯ ಸಂಚಾಲಕರಾದ ವಕೀಲ ಎಂ. ಶಿವಪ್ರಸಾದ್, ಮಳಿಯೂರು ಸಂತೋಷ್, ಕಾಡಿನಳ್ಳಿ ಕೆ.ಪಿ. ಚಿಕ್ ಸ್ವಾಮಿ, ಹೇಮಂತ್, ಅಪ್ಪು, ಜೈರಾಮ್, ಗಿಣಿ ಸ್ವಾಮಿ, ತಿಮ್ಮರಾಜು, ಹಾಗೂ ಶ್ರೀ ವಾಸವಿ ಶಾಂತಿಧಾಮ ದ ಟ್ರಸ್ಟಿ ಜಿ. ವಿ. ಮಂಜುನಾಥ ಇತರರು ಸಮಾರಂಭದಲ್ಲಿ ಪಾಲ್ಗೊಂಡರು.


Share