ವೈರಮುಡಿ ವಿಶೇಷ ಕಲ್ಯಾಣೋತ್ಸವ : ವೀಕ್ಷಿಸಿ

Share

 

ಮೇಲುಕೋಟೆಯ ವಿಶ್ವ ವಿಖ್ಯಾತ ವೈರಮುಡಿ ಉತ್ಸವದಲ್ಲಿ ನಿನ್ನೆ ವಿಜೃಂಭಣೆಯಿಂದ ಅಂಕುರಾರ್ಪಣೆ ಕಾರ್ಯಕ್ರಮ ನಡೆಯಿತು. ಇಂದು ಬೆಳಗ್ಗೆ ಶ್ರೀ ಚೆಲುವರಾಯಸ್ವಾಮಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ಪಲ್ಲಕ್ಕಿಯ ಉತ್ಸವದಲ್ಲಿ ಮೊದಲ ಅಮ್ಮನವರನ್ನು ಕಲ್ಯಾಣಿಯಲ್ಲಿ ಬಿಜಯ ಮಾಡಿ ನಂತರ ಶ್ರೀ ಚೆಲುವರಾಯಸ್ವಾಮಿ ಹಾಗೂ ರಾಮಾನುಜಾಚಾರ್ಯರ ಸಮೇತ ಕಲ್ಯಾಣಿಗೆ ಉತ್ಸವದಲ್ಲಿ ಹೋಗಿ ಅಮ್ಮನವರ ಎದುರಿಗೆ ಬಿಜಯ ಮಾಡಿಸಿದ ನಂತರ ಆಚಾರ್ಯರಿಂದ ಸಂಬಂಧ ಮಾಲಾರ್ಪಣೆ, ಲಾಜಾ ಹೋಮ ನಡೆದು ನಂತರ ಧಾರೆ ನೆರವೇರಿತು. ಕಡೆಯಲ್ಲಿ ಫಲ ತಾಂಬೂಲ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಿದ ನಂತರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಅಮ್ಮನವರನ್ನು, ಶ್ರೀ ಚೆಲುವನಾರಾಯಣ ಸ್ವಾಮಿಯನ್ನು ಕರೆತರಲಾಯಿತು.
ವೀಡಿಯೊ ಕೃಪೆ : ಮಮತ ಮಂಜುನಾಥ್


Share