ಹಿಮಾಲಯ ಫೌಂಡೇಷನ್ ವತಿಯಿಂದ ವಿಶ್ವ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ಖ್ಯಾತ ವ್ಯಂಗ್ಯ ಚಿತ್ರಕಾರ ಹಾಗೂ ಫುಲ್ ಬ್ರೈಟ್ ರಾ ಎಂ ವಿ ನಾಗೇಂದ್ರ ಬಾಬು ಅವರ ಕಾರ್ಟೂನ್ ಕಣ್ಣಲ್ಲಿ ಕೂರೂನಾ ಎಂಬ ಕಾರ್ಯಕ್ರಮವೂ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಯಲ್ಲಿ ಶಾಸಕರಾದ ಎಲ್ ನಾಗೇಂದ್ರ ಅವರ ಕಚೇರಿಯಲ್ಲಿ
ಕಾರ್ಟೂನ್ ಗಳ ಬಿಡುಗಡೆ ಗೊಳಿಸಲಾಯಿತು ನಂತರ ಮಾತನಾಡಿದ ಶಾಸಕ ಎಲ್ ನಾಗೇಂದ್ರ ಸಮಾಜದಲ್ಲಿ ಸಾಂದರ್ಭಿಕ ಘಟನೆಗಳನ್ನು ಸೂಕ್ಷ್ಮವಾಗಿ ವಿಸ್ತೃತವಾಗಿ ಅಭಿವ್ಯಕ್ತಿಗೊಳಿಸುವ ಕಲೆ ವ್ಯಂಗ್ಯಚಿತ್ರ ಎಂದು ಅಭಿಪ್ರಾಯಪಟ್ಟರು ಮೈಸೂರಿನಲ್ಲಿ ನಿರಂತರವಾಗಿ ಕಳೆದ 29ವರ್ಷಗಳಿಂದ ವ್ಯಂಗ್ಯಚಿತ್ರ ಕಲಾ ಸೇವೆಯನ್ನು ತೊಡಗಿಸಿಕೊಂಡಿರುವ ಬಾಬು ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಆರ್ ಕೆ ಲಕ್ಷ್ಮಣ್ ಅವರ ನಂತರ ಇದೇ ಕೆರೆಯನ್ನು ಮುಂದುವರಿಸಿಕೊಂಡು ಬಂದಿರುವ ನಾಗೇಂದ್ರ ಬಾಬು ಅವರ ಕೈಯಲ್ಲಿ ಮೂಡಿಬಂದಿರುವ ಕೂರೂನಾ ಪ್ರಸ್ತುತ ವಿದ್ಯಮಾನದ ಜಾಗೃತಿ ಮೂಡಿಸುವಲ್ಲಿ ವ್ಯಂಗ್ಯಚಿತ್ರಗಳು ಪ್ರಾಬಲ್ಯ ವಾಗಿದೆ ಎಂದರು
ನಂತರ ಮಾತನಾಡಿದ ಬಿಜೆಪಿ ಮುಖಂಡರಾದ ಕೌಟಿಲ್ಯ ರಘು ವ್ಯಂಗ್ಯಚಿತ್ರ ಕಲೆ ಅನ್ನುವುದು ಬಹುಷಃ ವಿಶಿಷ್ಟ ದಲ್ಲಿ ವಿಶಿಷ್ಟ
ವ್ಯಂಗ್ಯ ಚಿತ್ರಕಲೆ ಸಂದರ್ಭೋಚಿತವಾಗಿ ಸಮಾಜಮುಖಿಯಾಗಿ ಕೇವಲ ಚಿತ್ರಗಳ ಮೂಲಕ ವಿಡಂಬನಾತ್ಮಕವಾಗಿ ಅಕ್ಷರದ ಅರಿವಿಲ್ಲದವರಿಗೆ ಅರಿವು ಮೂಡಿಸುವ ವಿಶಿಷ್ಟ ಕಲೆ ಸಮಾಜದಲ್ಲಿ ಎಷ್ಟೇ ತಂತ್ರಜ್ಞಾನ ಹೊಸ ಹೊಸ ಆವಿಷ್ಕಾರಗಳು ಆದರೂ ವ್ಯಂಗ್ಯ ಚಿತ್ರಕಲೆ ನಿತ್ಯ ನಿರಂತರ ಅಮರ ಎಂದರಲ್ಲದೆ ಆರ್ ಕೆ ಲಕ್ಷ್ಮಣ್ ರಂತಹ ಪರಂಪರೆಯಲ್ಲಿ ಸಾಗುತ್ತಿರುವ ಖ್ಯಾತ ವ್ಯಂಗ್ಯ ಚಿತ್ರಕಾರ ನಾಗೇಂದ್ರ ಬಾಬು ಅವರು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅದ್ಭುತ ಸಂಭಾಷಣೆಯೊಂದಿಗೆ ಕೋರೋಣ ಅರಿವು ಮೂಡಿಸುವ ವ್ಯಂಗ್ಯ ಚಿತ್ರಗಳನ್ನು ರಚಿಸಿ ಬಿಡುಗಡೆಗೊಳಿಸಿರುವುದು ಸಾಂದರ್ಭಿಕ ವಾಗಿದೆ ಎಂದು ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಶಾಸಕರಾದ ಎಲ್ ನಾಗೇಂದ್ರ, ಬಿಜೆಪಿ ಮುಖಂಡರಾದ ಕೌಟಿಲ್ಯ ಆರ್ ರಘು ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಡ್ಡಿಕೇರೆ ಗೋಪಾಲ್ ,
ವ್ಯಂಗ್ಯ ಚಿತ್ರಕಾರರಾದ ಎಂ ವಿ ನಾಗೇಂದ್ರ ಬಾಬು ,ಹಿಮಾಲಯ ಫೌಂಡೇಷನ್ ನ ಅಧ್ಯಕ್ಷರು ಎನ್ ಅನಂತ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಧಾರ್ಮಿಕ ಚಿಂತಕರು ಯೋಗಾನರಸಿಂಹ (ಮುರಳಿ),ಚಾಮರಾಜಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರಾದ ಕುಮಾರ್ ಗೌಡ , ರಾಜಕೀಯ ರವಿ ,ಹಾಗೂ ಇನ್ನಿತರರು ಉಪಸ್ಥಿತರಿದ್ದರು