ಶಾರದಾವಿಲಾಸ ವಿದ್ಯಾ ಸಮಸ್ತೆ: ನಾಳೆ ಹೊಸ ಕೋರ್ಸ್ ಗಳ ಉದ್ಘಾಟನೆ.

Share

ಮೈಸೂರು. ಖ್ಯಾತ ಶಾರದಾ ವಿಲಾಸ ವಿದ್ಯಾ ಸಮಸ್ತೆ ವತಿಯಿಂದ ಕೌಶಲ್ಯ ಆಧಾರಿತ ಶೈಕ್ಷಣಿಕ ಕೋರ್ಸುಗಳನ್ನು ಆರಂಭ ಮಾಡಲಾಗುತ್ತಿದೆ ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿಎಸ್ ಪಾರ್ಥಸಾರಥಿಯವರು ತಿಳಿಸಿದರು.
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಕೋರ್ಸುಗಳ ಉದ್ಘಾಟನೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮವು ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಾಳೆ 3:00 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.


Share