ಶಾಸಕರಿಂದ ಶ್ರದ್ಧಾಂಜಲಿ ಕಾರ್ಯಕ್ರಮ

ಮೈಸೂರು ,ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ಕಾಡಾ ಕಛೇರಿಯ ಆವರಣದಲ್ಲಿ ಇರುವ ಶಾಸಕರ ಕಛೇರಿಯಲ್ಲಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾಧ ಯೋಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು
ಭಾರತ-ಚೀನಾ ಗಡಿಪ್ರದೇಶದ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಘಟನೆಯಲ್ಲಿ ಭಾರತೀಯ ಸೇನೆಯ ಚೀನಾದ ಕುತಂತ್ರದಿಂದಾಗಿ ಕರ್ನಲ್ ಸೇರಿದಂತೆ ಇಪ್ಪತ್ತು ಯೋಧರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಮೂಲಗಳ ಪ್ರಕಾರ ಚೀನಾದ 43 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಭಾರತೀಯ ವೀರ ಯೋಧರ ಸಾವು ಇಡೀ ದೇಶವನ್ನ ನೋವಿನ ಕಡಲಿಗೆ ತಳ್ಳಿದೆ. ಎಲ್ಲೆಡೆ ಶ್ರದ್ದಾಂಜಲಿ ನಡೆಯುತ್ತಿದೆ. ಗಡಿಯಲ್ಲಿ ದೇಶಕ್ಕಾಗಿ ಪ್ರಾಣತ್ತೆತ್ತ ಎಲ್ಲಾ 20 ಯೋಧರ ಆಪ್ತರಿಗೆ ಮತ್ತು ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ನೀಡಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹುತಾತ್ಮರಾದ ಯೋಧರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸೈನಿಕರನ್ನು ಕೊಲ್ಲೊದಿಕ್ಕೆ ಅವಕಾಶ ಆಗಿರುವಂತದ್ದು ಭಾರತದ ಒಳಗೆ ಚೈನಾದ ಸಾವಿರಾರು ಪದಾರ್ಥಗಳನ್ನು ನಾವು ಕೊಂಡುಕೊಳ್ಳುತ್ತಿದ್ದೇವೆ ಇದರಿಂದ ಅವರಿಗೆ ಹೆಚ್ಚಿನ ಲಾಭವಾಗುತ್ತದೆ ನಮ್ಮದೇ ಹಣವನ್ನು ನಮ್ಮ ಸೈನಿಕರನ್ನು ಸೋಲಿಸಲು ಉಪಯೋಗಿಸುತ್ತಾರೆ . ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಚೈನ ದೇಶದ ಯಾವುದೇ ಪದಾರ್ಥಗಳನ್ನು ನಾವು ತೆಗೆದು ಕೊಳ್ಳ ಬಾರದು, ನಮ್ಮ ಮೈಸೂರಿನ ಜನತೆಗೆ ಈ ವಿಷಯದ ಅರಿವು ಮೂಡಿಸಿ ಭಾರತ ದೇಶದಲ್ಲಿ ತಯಾರಾಗುವ ಪದಾರ್ಥಗಳನ್ನು ಮಾತ್ರ ಉಪಯೋಗಿಸುವ ಮೂಲಕ ಚೈನಾ ಮುಕ್ತ ಮೈಸೂರು ಆಗಬೇಕು ಎಂದು ಸಂಕಲ್ಪ ಮಾಡೋಣ ಎಂದು ಶಾಸಕರು ತಿಳಿಸಿದರು.