ಶಾಸಕರ ಅನುದಾನದಲ್ಲಿ ಗುದ್ದಲಿ ಪೂಜೆ

431
Share

ಶಾಸಕರ ಎಸ್.ಎಫ್.ಸಿ ಅನುದಾನದಲ್ಲಿ ಕೈಗೊಂಡಿರುವ ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಭೂಮಿ ಪೂಜಾ ಕಾರ್ಯಕ್ರಮಗಳನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ-04 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಪೈಲ್ವಾನ್ ಶ್ರೀನಿವಾಸ್ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು.

  1. ಬೆ: 9.30 ಕ್ಕೆ ವಾರ್ಡ್ ನಂ-04 ರ ಲೋಕನಾಯಕನಗರ ರುದ್ರಭೂಮಿಗೆ ಹೋಗುವ ರಸ್ತೆಯ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿ ಮೊತ್ತ ರೂ 25.00 ಲಕ್ಷಗಳ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಯಿತು.
  2. ಬೆ: 10.00 ಕ್ಕೆ ನಂ-07 ರ ಕರಕುಶಲನಗರದ ಐ.ಓ.ಸಿ.ಎಲ್ ಹತ್ತಿರದ ಅಡ್ಡರಸ್ತೆಗಳ ಅಭಿವೃದ್ದಿ ಕಾಮಗಾರಿ ಮೊತ್ತ ರೂ 25.00 ಲಕ್ಷಗಳ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಈ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ವಾರ್ಡ್ ನಂ-04 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಪೈಲ್ವಾನ್ ಶ್ರೀನಿವಾಸ್ ರವರು, ಮೈಸೂರು ಭಾ.ಜ.ಪ ನಗರ ಪ್ರಧಾನ ಕಾರ್ಯದರ್ಶಿ ಶ್ರೀ ವಾಣೀಶ್ ಕುಮಾರ್, ಚಾಮರಾಜ ಕ್ಷೇತ್ರದ ಭಾ.ಜ.ಪ ಉಪಾಧ್ಯಕ್ಷರಾದ ಶ್ರೀ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀ ಪುನೀತ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ತನುಜಾ ಮಹೇಶ್, ಶ್ರೀ ರಾಮೇಗೌಡರವರು, ಶ್ರೀ ದಾಸೇಗೌಡರವರು, ಶ್ರೀ ಮಂಜು, ಶ್ರೀ ಸಂಜೀವಿನಿ ಕುಮಾರ್, ಶ್ರೀ ಅರುಣ್, ಪೋಲಿಸ್ ಅಧಿಕಾರಿಗಳು, ಮಹಾನಗರಪಾಲಿಕೆ ಅಧಿಕಾರಿಗಳು, ಇಂಜಿನಿಯರುಗಳು ಮುಂತಾದವರು ಹಾಜರಿದ್ದರು.


Share