ಶಾಸಕ ಜಿಟಿಡಿ ಅವರಿಂದ ಕಿಟ್ ವಿತರಣೆ

Share

ಹಂಚ್ಯಾ ಗ್ರಾಮದಲ್ಲಿ ಕಿಟ್ ವಿತರಣೆ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ವೈಯಕ್ತಿಕ ಹಣದಿಂದ ಹಂಚ್ಯಾ ಗ್ರಾಮ ಪಂಚಾಯತಿ ಗೆ ನೀಡಿದ್ದ ವಿಶೇಷ ಕಿಟ್ ಅನ್ನು ಗುರುವಾರ ಜನರಿಗೆ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ಗ್ರಾಮದ ಬಡವರಿಗೆ ಕಿಟ್ ವಿತರಿಸುವ ಬಗ್ಗೆ ಶಾಸಕರನ್ನು ಕೇಳಿಕೊಂಡಿದ್ದೇವು. ಆಗ ಶಾಸಕರು ಹಾಗೂ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡರು ೬೫೦ ದಿನಸಿ ಕಿಟ್ ಗಳನ್ನು ಬಡವರಿಗೆ ಹಂಚಲು ಕಳುಹಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಡವರನ್ನು ಆಯ್ಕೆ ಮಾಡಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಟ್ಟತಾಯಮ್ಮ ಪತಿ ತಮ್ಮೇಗೌಡ, ಗ್ರಾ.ಪಂ‌. ಸದಸ್ಯರಾದ ಚೆನ್ನಯ್ಯ, ಮುಖಂಡರಾದ ಶ್ರೀನಿವಾಸ್ ಗೌಡ, ಶಿವು, ಯೋಗೇಶ್, ದಾಸೇಗೌಡ, ನಂದೀಶ್,ಕುಮಾರ, ವಕೀಲ ಕೃಷ್ಣೇಗೌಡ, ಚಂದ್ರು, ದೇವರಾಜ, ಮನು, ಶ್ರೀಧರ್ ಗೌಡ ಇನ್ನಿತರರು ಉಪಸ್ಥಿತರಿದ್ದರು.


Share