ಶಾಸಕ ರಾಮದಾಸ್ ಕಾರ್ಯ ಶ್ಲಾಘನೀಯ!! ಬಡವರಿಗೆ ಆಹಾರ ವಿತರಣೆ ಬಗ್ಗೆ ಸಚಿವ ಸೋಮಶೇಖರ್ ಪ್ರಶಂಸೆ

463
Share

ಮೈಸೂರು: ಇಲ್ಲಿನ ವಿವೇಕಾನಂದ ನಗರದ ವಿವೇಕಾನಂದ ವೃತ್ತದಲ್ಲಿ ಸಮೀಪ ಕೊರೋನಾ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗದವರಿಗಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿರುವ ಆಹಾರ ತಯಾರಿಸುವ ಅಡುಗೆ ಕೋಣೆಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರಿಶೀಲಿಸಿದರು.

ಮಾಜಿ ಸಚಿವರು ಹಾಗೂ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ಕಾರ್ಮಿಕರಿಗಾಗಿ ಕೈಗೊಂಡಿರುವ ಆಹಾರ ನೀಡುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಸಚಿವರು, ಶಾಸಕರು ಕ್ಷೇತ್ರದ ಜನತೆಗೋಸ್ಕರ ಸಾಕಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರತಿದಿನ 4 ಸಾವಿರ ಜನರಿಗೆ ಕೊಡುತ್ತಿದ್ದಾರೆ. ನೂರಾರು ಜನ ಸ್ವಯಂ ಸೇವಕರಿಂದ ಅಚ್ಚುಕಟ್ಟಾಗಿ ಆಹಾರ ತಯಾರಿ ಹಾಗೂ ವಿತರಣೆಯನ್ನು ಮಾಡುತ್ತಿದ್ದಾರೆ. ಇವರ ಈ ಮಹತ್ಕಾರ್ಯಕ್ಕೆ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.


Share