ಶಾಸಕ ರಾಮದಾಸ್ ಪಕ್ಷೇತರವಾಗಿ ಸ್ಪರ್ಧೆ ಸಂಭವ

Share

ಮೈಸೂರು- ನಗರದ ಕೆಆರ್ ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ರವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಗಳು ಇದ್ದರು ಪಕ್ಷ ಬಿಡದೆ ಇರುವ ಸಂಭವ ಹೆಚ್ಚಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ರಾಮದಾಸ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಕಳೆದ ಕೆಲವು ದಿನದ ಹಿಂದೆ ಒಂದು ವೇಳೆ ಪಕ್ಷ ಟಿಕೆಟ್ ಕೊಡದೆ ಇದ್ದರೆ ನಾವುಗಳು ಪಕ್ಷೇತರ ಸ್ಥಾನದಲ್ಲಿ ನಿಲ್ಲಿಸಿ ಗೆಲ್ಲಿಸಿ ಕೊಂಡು ಬರುತ್ತೇವೆ ಎಂದು ತಿಳಿಸಿರುವುದು ಇಲ್ಲಿ ಗಮನಿಸಬೇಕಾಗಿದೆ.

 ಮತ್ತೊಂದು ಮಾಹಿತಿ ಪ್ರಕಾರ ಹಾಲಿ ಶಾಸಕ ಸಾರಾ ಮಹೇಶ್ ರವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಜನತಾದಳ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಭಾರತೀಯ ಜನತಾ ಪಕ್ಷವನ್ನು ರಾಮದಾಸ್ ರವರು ಮಾತೃಸ್ಥಾನಕ್ಕೆ ಹೋಲಿಸಿದ್ದು ಅವಲೋಕಿಸಿದರೆ ಪಕ್ಷ ಬಿಡುವ ಸಾಧ್ಯತೆಗಳು ಇಲ್ಲ ಎಂದು ಕೂಡ ಇದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ರಾಮದಾಸ್ ರವರು ನೆನ್ನೆ  ಸಂಜೆಯಿಂದ ಕಾರ್ಯಕರ್ತರ ಜೊತೆ ಹಿತೈಷಿಗಳು ಜೊತೆ ಸಭೆಯನ್ನು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ ಇನ್ನು ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಲಾಗಿದೆ.
ನೆನ್ನೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಇಂದು ಸಂಜೆ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಅವರು ಹೇಳಿರುವುದು ಇಲ್ಲಿ ಸ್ಮರಿಸಬಹುದಾಗಿದೆ

Share