ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ: ವಿಶ್ವನಾಥ್

Share

ರಾಜಗುರು ತಿಲಕ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 105ನೇ ಜನ್ಮ ದಿನಾಚರಣೆ ಡಾ.ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸುತ್ತೂರು ಶ್ರೀಶಿವರಾತ್ರೀಶ್ವರ ಪಂಚಾಂಗ ಕರ್ತೃ ಸಿದ್ಧಾಂತಿ ಡಾ.ಕೆ.ಜಿ.ಪುಟ್ಟಹೊನ್ನಯ್ಯ, ಉಪಪೊಲೀಸ್ ವರಿಷ್ಠಾಧಿಕಾರಿ ಅರುಣ್ ನಾಗೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಸಮಾಜಸೇವಕ ಎಸ್.ಎಂ.ಶಿವಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನಿಸಿದರು.
ಈ ಸಂದರ್ಭ ಮಾಜಿ ಶಾಸಕ ವಾಸು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಎಂ ಚಂದ್ರಶೇಖರ, ಯು.ಎಸ್.ಶೇಖರ, ಡಾ.ಕೆ.ವಸಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಬಾರಿ ದಸರಾ ಸರಳವಾಗಿರಲಿ ;ಹೆಚ್ ವಿಶ್ವನಾಥ್ ಸಲಹೆ

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಈ ಬಾರಿ ದಸರಾ ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆಯಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರುವುದು ಒಳ್ಳೆಯದಲ್ಲ. ಹೆಚ್ಚು ಜನ ಸೇರಿದರೇ ನಾವೇ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಸರಳವಾಗಿ ದಸರಾ ಆಚರಣೆ ಮಾಡುವುದೇ ಸೂಕ್ತ ಎಂದರು. ಚಾಮುಂಡೇಶ್ವರಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಿ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ಶಾಲೆ ಆರಂಭಕ್ಕೆ ಅವಸರ ಬೇಡ ಎಂದು ಸಲಹೆ ನೀಡಿದ ಅವರು ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ ಆಗುತ್ತಿದೆ. ಶಾಲಾ,ಕಾಲೇಜು, ಆಡಳಿತ ಮಂಡಳಿಯವರನ್ನು ಶಿಕ್ಷಣ ತಜ್ಞರು ಎಂದು ಭ್ರಮಿಸಬೇಡಿ. ಹೆಚ್ಚು ಶಾಲಾ ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ. ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ ಶಿಕ್ಷಣ ನೀತಿ ಸಮರ್ಪಕ ಜಾರಿಯಾಗಬೇಕಾದರೆ ಸಮುದಾಯದ ಎಲ್ಲರೂ ಸಮಿತಿಯಲ್ಲಿರಬೇಕು. ಶಿಕ್ಷಣ ಮಾರುವವರನ್ನು ಸಮಿತಿಗೆ ಕರೆಯಬೇಡಿ. ಶಿಕ್ಷಣ ಕಲಿಸುವವರನ್ನು ಕರೆದು ಮಾತನಾಡಿ. ಅರ್ಥಪೂರ್ಣ ಚರ್ಚೆ ನಡೆಸಿ ನಿರ್ಧಾರ ಮಾಡಿ ಎಂದರು.
ಅದೇ ರೀತಿ ಶಾಲೆ ಆರಂಭಕ್ಕೂ ಅವಸರ ಬೇಡ. ಶಾಲೆ ಪುನಾರರಂಭಕ್ಕೆ ಪೋಷಕರಾಗಲಿ, ಮಕ್ಕಳಾಗಲಿ ಕೇಳುತ್ತಿಲ್ಲ. ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿಯಬೇಡಿ. ಶಾಲೆಗಳು ಹಾಗೂ ಆಸ್ಪತ್ರೆಗೆ ನಡೆಸೋರು ನಮ್ಮ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಅವರ ಅಭಿಪ್ರಾಯ ಕೇಳಿದರೆ ಶಿಕ್ಷಣ ದುರಂತ ಕಾಣಬೇಕಾಗುತ್ತದೆ ಎಂದರು.


Share