ಶೋಂಪೆನ್ ಬುಡಕಟ್ಟು ಜನಾಂಗದಿಂದ ಮೊದಲ ಬಾರಿ ಮತದಾನ : ಇತಿಹಾಸ ನಿರ್ಮಾಣ

135
Share

 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬುಡಕಟ್ಟು ಸಮುದಾಯಗಳಿಗೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದಾರೆ. ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟು ಜನಾಂಗದವರು #GeneralElections2024 ರಲ್ಲಿ ಮೊದಲ ಬಾರಿಗೆ ತಮ್ಮ ಮತ ಚಲಾಯಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಮಿಜೋರಾಂನಲ್ಲಿ, ವೃದ್ಧ ದಂಪತಿಗಳು ಒಟ್ಟಾಗಿ ಮತ ಚಲಾಯಿಸುವ ಪ್ರತಿಜ್ಞೆಯನ್ನು ಈಡೇರಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿ ಮತದಾನ ಮಾಡುವ ಸೌಲಭ್ಯವಿದ್ದರೂ ಸ್ವಯಂ ಪ್ರೇರಿತರಾಗಿ ಮತದಾನ ಕೇಂದ್ರಕ್ಕೆ ಚಾರಣ ಮಾಡಿ ಬಂದಿದ್ದಾರೆ ಎಂದು ಚುನಾವಣಾ ಆಯೋಗವು ತಿಳಿಸಿದೆ.


Share