ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವರ್ಧಂತಿ: ವಿಶೇಷಚೇತನರಿಗೆ ಉಪಕರಣ‌ ವಿತರಣೆ

Share

 

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವರ್ಧಂತಿ: ವಿಶೇಷಚೇತನರಿಗೆ ಉಪಕರಣ‌ ವಿತರಣೆ

ಮೈಸೂರು, ಮೇ.25: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ವರ್ಧಂತಿ ಪ್ರಯುಕ್ತ ವಿಶೇಷ ಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಯಿತು.

ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀಗಳು ವಿಶೇಷ ಚೇತನರ ಬಳಿಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಸಲಕರಣೆ ವಿತರಿಸಿದರು.

ಈ‌ ವೇಳೆ ಆಶೀರ್ವಚನ ನೀಡಿದ ಸ್ವಾಮೀಜಿಯವರು ವಿಶೇಷ ಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶೀರ್ವದಿಸಿದರು.

ಇಂಥವರ ಸೇವೆ ಮಾಡುವುದು ನಿಜಕ್ಕೂ ಪುಣ್ಯ, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು, ಎಂದು ಹೇಳಿದರು.

ದೇವರು ಇವರೆಲ್ಲರಿಗೂ ಆಯಸ್ಸು ಆರೋಗ್ಯ ಕೊಟ್ಟು ಒಳ್ಳೆಯದು ಮಾಡಲಿ ಭಕ್ತರಿಗೂ ಒಳಿತಾಗಲಿ ಎಂದು ಶ್ರೀಗಳು ಆಶೀರ್ವಚನ ನೀಡಿದರು.

40 ವ್ಹೀಲ್‌ಚೇರ್ಸ್,8ವಾಕರ್ಸ್,
10ಕ್ರಚರ್ಸ್,5 ಸ್ಟಿಕ್ ಗಳು ಸೇರಿ ಒಟ್ಟು 82 ಉಪಕರಣಗಳನ್ನು ವಿಕಲಚೇತನರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿತರಿಸಿದರು.

ನಂತರ ನಾದಮಂಟಪದ 26 ನೇ ವಾರ್ಷಿಕೋತ್ಸವ ಮತ್ತು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ಜನ್ಮದಿನೋತ್ಸವ ಪ್ರಯುಕ್ತ ಅವಧೂತ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸ್ವಾಮೀಜಿ ಯವರು ಶ್ರೀ ಚಕ್ರಪೂಜೆ ಮತ್ತು ಹೋಮಗಳು ನೆರವೇರಿದವು, ನಂತರ ಆಶ್ರಮದ ಆವರಣದಲ್ಲಿರುವ ತಾಯಿ ರಾಜರಾಜೇಶ್ವರಿ ದೇವಿ ಸೇರಿದಂತೆ‌ ಎಲ್ಲ ದೇವರುಗಳಿಗೆ ಸಮೀಜಿ ಪೂಜೆ ಸಲ್ಲಿಸಿ, ನಂತರ ‌ಶ್ರೀ ಹರಿ ಸನ್ನಿಧಿಯಲ್ಲಿ ಹೋಮಕಾರ್ಯದಲ್ಲಿ ಪಾಲ್ಗೊಂಡರು.

ಇದಕ್ಕೂ ಮೊದಲು ದತ್ತ ಹ್ಯೂಮನ್ ಸರ್ವೀಸಸ್ ಸ್ವಯಂಸೇವಕರ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀಗಳು‌, ಸ್ವಯಂ‌ಸೇವೆ‌ ಅತ್ಯಂತ ಪ್ರಮುಖ ಹಾಗೂ ಶ್ಲಾಘನೀಯವಾದುದು ಎಂದು ಹೇಳಿದರು.

ನಾದಮಂಟಪದಲ್ಲಿ ಲೋಕ ಕಲ್ಯಾರ್ಥವಾಗಿ‌ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ವೈಭವವಾಗಿ ನೆರವೇರಿತು.

ಶ್ರೀ ದತ್ತ ವಿಜಯಾನಂದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನೆರವೇರಿದವು. ನಂತರ ‌ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಈ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

 


Share