“ಶ್ರೀ ಗುರುರಾಯರಿಗೆ ಶ್ರೀಗಂಧದ ಅಲಂಕಾರ

Share

“ಶ್ರೀ ಗುರುರಾಯರಿಗೆ ಶ್ರೀಗಂಧದ ಅಲಂಕಾರ”

ಜಯನಗರ ಐದನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಆಚಾರ್ಯರ ಹಾಗೂ ಜಿ.ಕೆ. ಆಚಾರ್ಯರ ನೇತೃತ್ವದಲ್ಲಿ “ಅಕ್ಷಯ-ತೃತೀಯ” ಪ್ರಯುಕ್ತ ವರ್ಷಕ್ಕೊಮ್ಮೆ ಆಚರಿಸುವಂತಹ ವಿಶೇಷವಾದ ಶ್ರೀಗಂಧದ ಅಲಂಕಾರವನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಸಂಪೂರ್ಣವಾಗಿ “ಲೋಕ- ಕಲ್ಯಾಣಕ್ಕಾಗಿ” ಅಲಂಕರಿಸಲಾಯಿತು. ಈ ದಿನ ಗುರುರಾಯರ ಬೃಂದಾವನಕ್ಕೆ ಅರ್ಚಕರಿಂದ ಫಲಪಂಚಾಮೃತ ಅಭಿಷೇಕ ಹಾಗೂ ಶ್ರೀ ಹರಿವಾಯು ಅಷ್ಟೋತ್ತರ ಸಂಘದವರಿಂದ ಶ್ರೀ ರಾಘವೇಂದ್ರ ಸ್ತೋತ್ರ ಪಾರಾಯಣ, ಶ್ರೀ ಹರಿ ಭಜನೆ, ಶ್ರೀ ರಾಘವೇಂದ್ರಾಷ್ಟಾಕ್ಷರ ಹೋಮ ಮತ್ತು ಉತ್ಸವಗಳು ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯು ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.


Share