ಶ್ರೀ ರಾಘವೇಂದ್ರ 352ನೇ.ಆರಾಧನೆ-ಕಣ್ಣಿನ ತಪಾಸಣಾ ಶಿಬಿರ

 

*ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ*

ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮತ್ತು ನಾಡಪ್ರಭು ಕೆಂಪೇಗೌಡರ ಯುವ ಬಳಗದ ಸಂಯುಕ್ತಾಶ್ರಯದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು
ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ,

ಇಂದು ರಾಯರ ಆರಾಧನೆ ಪ್ರಯುಕ್ತ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಸೆಪ್ಟೆಂಬರ್ 1 ನೇ ತಾರೀಖು ರಾಯರ ರಥೋತ್ಸವವು ನಡೆಯಲಿದೆ, ವೀರಗಾಸೆ, ವಾದ್ಯವೃಂದ , ಡೊಳ್ಳು‌ಕುಣಿತ , ವಿದ್ಯುತ್ ದೀಪಗಳೊಂದಿಗೆ ರಾಯರ ಅದ್ದೂರಿ ರಥೋತ್ಸವವು ನಡೆಯಲಿದೆ ಮೂರು ದಿನಗಳ ಪ್ರಸಾದ ವ್ಯವಸ್ಥೆ ಕೂಡಾ ಎಂದು ದೀಪಕ್ ಗೌಡ ಅವರು ತಿಳಿಸಿದರು

ಇದೆ ಸಂಧರ್ಭದಲ್ಲಿ ಬಾಲು , ಮಧು ಸೂದನ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು