ಶ್ರೀ ರಾಮಾನುಜರ ಜೀವನ ಸಾರ

693
Share

ಶ್ರೀ.ರಾಮಾನುಜರು ಜೀವನಸಾರ.

ಭಾರತೀಯ ಪರಂಪರೆಯಲ್ಲಿ , ವೇದಾಂತ ಶಾಸ್ತ್ರಗಳಲ್ಲಿ ಪ್ರಸಿದ್ಧರಾದ ಮಹಾ ಸಂತ , ವಿದ್ವಾಂಸ ಹಾಗೂ ದಾರ್ಶನಿಕ ಮತ್ತು ಹಿಂದೂಧರ್ಮದ ಶ್ರೀವಿಶಿಷ್ಟಾದ್ವತದ ಪ್ರತಿಪಾದಕರು . ಇವರು ಜನಿಸಿ 1003 ವರುಷಗಳು ಕಳೆದಿವೆ . ಇವರು ಕ್ರಿ.ಶ. 1017 ನೇ ವರ್ಷದಲ್ಲಿ ತಮಿಳು ನಾಡಿನ ಶ್ರೀಪೆರಂಬುದೂರ್‌ನ ಕೇಶವಚಾರ್ಯ ಹಾಗೂ ಕಾಂತಿಮತಿ ದಂಪತಿಗೆ ಜನಿಸಿದವರೇ ಶ್ರೀರಾಮಾನುಜಾಚಾರ್ಯ , ಅವರನ್ನು ಭಗವಾನ್ ಶ್ರೀರಾಮನ ತಮ್ಮ ಲಕ್ಷ್ಮಣ ‘ ಎಂದು ಮಗುವಿಗೆ ಇಳೆಯ ಪೆರುಮಾಳ್ ( ಪುಟ್ಟದೇವರು ) ಎಂದು ಹೆಸರಿಡುತ್ತಾರೆ . ಬಳಿಕ ಈ ಮಗುವೇ ಶ್ರೀರಾಮಾನುಜಾಚಾರ್ಯನಾಗಿ ಪ್ರಸಿದ್ಧಿ ಹೊಂದುತ್ತಾನೆ . ರಾಮಾನುಜಾಚಾರ್ಯರಿಗೆ ಬಾಲ್ಯದಿಂದಲೂ ಜಾತಿ ವ್ಯವಸ್ಥೆಯ ಕುರಿತು ನಂಬಿಕೆ ಇರುವುದಿಲ್ಲ . ಅವರುಜ್ಞಾನ , ವಿದ್ಯೆಗೆ ಪ್ರಾಮುಖ್ಯತೆ ನೀಡುತ್ತಿದ್ದರು . ಒಮ್ಮೆರಸ್ತೆಯಲ್ಲಿ ಹಾಡು ಹಾಡುತ್ತಾ ಬರುತ್ತಿದ್ದ ಬಡ ಬ್ರಾಹ್ಮಣನನ್ನು ಕಂಡು , ಅವನ ಗಾಯನದಲ್ಲಿ ತಲ್ಲೀನರಾಗಿ , ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಊಟೋಪಚಾರ ನೀಡಿದರು . ಈ ನಡವಳಿಕೆಯನ್ನು ಅವರ ತಂದೆ ವಿರೋಧಿಸಿದರು , ಆದರೂ ತಂದೆಯ ವಿರುದ್ದವಾಗಿಯೇ ನಡೆದು , ತಂದೆಯ ಕೋಪಕ್ಕೆ ಗುರಿಯಾಗುತ್ತಾರೆ .

ತಮ್ಮ 16 ನೇ ವಯಸ್ಸಿನಲ್ಲಿಯೇ ವೇದ ಶಾಸ್ತ್ರಗಳ ಪರಿಣಿತಿ ಪಡೆದು , 17 ನೇ ವಯಸ್ಸಿನಲ್ಲಿ ತಂಜಮ್ಮಾಳ್ ಎಂಬ ಕನೈಯೊಡನೆ ಇವರ ವಿವಾಹವಾವಾಗುತ್ತದೆ . ಇವರ ವಿದ್ಯೆ , ಜ್ಞಾನ , ಹಾಗೂ ಮಹಿಮೆಯನ್ನು ಅರಿಯದ ಪತ್ನಿಯೊಂದಿಗಿನ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರುವುದಿಲ್ಲ . ವಿವಾಹದ ಬಳಿಕ ಶ್ರೀರಾಮನುಜರ ತಂದೆ ಕೇಶವಾಚಾರ್ಯ ತೀವ್ರ ಅನಾರೋಗ್ಯದಿಂದ ತೀರಿಕೊಂಡರು . ಬಳಿಕ ತಮ್ಮ ಶಿಕ್ಷಣ ಮುಂದುವರಿಸಲು , ಅದೈತ ಪೂರ್ವ ಪಕ್ಷದ ಅಧ್ಯಯನಕ್ಕೆಂದು ಯಾದವಪ್ರಕಾಶಕರ ಶಿಷ್ಯತ್ವ ಪಡೆಯುತ್ತಾರೆ . ಆದರೆ ಗುರುಗಳು ವೈದಿಕತತ್ವದ ಕುರಿತಾಗಿ ಹೇಳುವ ತಪ್ಪು ಮಾಹಿತಿಗಳನ್ನು ತಿದ್ದುತ್ತಿದರಿಂದ ಗುರುಗಳು ರಾಮನುಜರನ್ನು ನಾಶಮಾಡಲು ತೀರ್ಮಾನಿಸುತ್ತಾರೆ . ತೀರ್ಥಯಾತ್ರೆಗೆ ತೆರಳಿದ ರಾಮಾನುಜರನ್ನು ಗಂಗೆಯಲ್ಲಿ ಮುಳುಗಿಸುವ ಯೋಜನೆಯೂ ರೂಪುಗೊಳ್ಳುತ್ತದೆ . ಆದರೆ ತಮ್ಮ ಬಂಧುಗಳಿಂದ ಮಾಹಿತಿ ಪಡೆದ ರಾಮಾನುಜರು ಮೃತ್ಯುವಿನಿಂದ ಪಾರಾಗುತ್ತಾರೆ . ಬಳಿಕ ಕಾಂಚೀಪೂರ್ಣರಿಂದ ಶಿಷ್ಯತ್ವ ಪಡೆದ ರಾಮಾನುಜರಿಗೆ ಭಗವಾನ್ ವರದರಾಜರು ಗುರುಪೆರಿಯನಂಬಿ ಅವರಿಗೆ ಶರಣಾಗಲು ತಿಳಿಸುತ್ತಾರೆ . ಶ್ರೀರಂಗಂನಲ್ಲಿ ಗುರುಪೆರಿಯನಂಬಿ ಅವರು ರಾಮಾನುಜರಿಗೆ ಪಂಚ ಸಂಸ್ಕಾರ ಮಾಡಿಸಿ , ರಾಮಾನುಜರಿಗೆ ರಹಸ್ಯ ಮಂತ್ರಗಳನ್ನು ನೀಡಿದರು . ಈ ಮಂತ್ರಗಳನ್ನು ಯಾರಿಗೂ ಬಹಿರಂಗ ಪಡಿಸಬಾರದೆಂದು ತಿಳಿಸಿದ್ದರು . ಬಹಿರಂಗ ಪಡಿಸಿದಲ್ಲಿ ನರಕ ಪ್ರಾಪ್ತಿಯಾಗಲಿದೆ ಎಂದು ಎಚ್ಚರಿಸಿದ್ದರು .

“ ಓಂ ನಮೋ ನಾರಾಯಣಾಯ ”

“ ಶ್ರೀಮದ್ ನಾರಾಯಣಮ್ ಶರಣಮ್ ಪ್ರಪದ್ಯೆ ಶ್ರೀಮತೇ ನಾರಾಯಣಾಯ ನಮಃ ‘ ,

‘ ಸರ್ವಧರ್ಮಾಣಿ ಪರಿತ್ಯಜ್ಯ ಮಾಂ ಏಕಂ ಶರಣಂ ವಜ , ಅಹಂ ತ್ವಾಂ ಸರ್ವಪಾಪೇಭ್ಯ ಮೋಕ್ಷಯಿಷ್ಯಾಮಿ ಮಾ ಶುಚಃ ‘

ಎಂಬ ಮೂರು ಮಂತ್ರಗಳನ್ನು ಬೋಧಿಸಿ ಅವರಿಗೆ ರಾಮಾನುಜನ್ ಎಂದು ನಾಮಕರಣ ಮಾಡುತ್ತಾರೆ . ಆದರೆ ರಾಮಾನುಜರು ಗುರುಗಳು ಬೋಧಿಸಿದ ಅಷ್ಟಾಕ್ಷರಿ ಮಂತ್ರವನ್ನು ಇಡೀ ಮನುಕುಲಕ್ಕೆ ನೀಡಬೇಕೆಂದು ಶ್ರೀರಂಗನ ದೇವಸ್ಥಾನದ ಗೋಪುರವನ್ನು ಹತ್ತಿ ಸುತ್ತಲಿನ ಜನರಿಗೆ ಮಂತ್ರೋಪದೇಶ ಮಾಡಿದರು . ಗುರುಗಳ ಮಾತನ್ನು ಅನುಸರಿಸದ ಕಾರಣ ಕುಪಿತಗೊಂಡ ಗುರುಗಳು ಪ್ರಶ್ನಿಸಿದಾಗ ರಾಮಾನುಜರು , ಮನುಕುಲದ ಉದ್ಧಾರಕ್ಕಾಗಿ ತಾನೊಬ್ಬ ನರಕಕ್ಕೆ ತೆರಳಲು ಸಿದ್ಧರಿರುವುದಾಗಿ ಹೇಳಿದರು . ಈ ಉತ್ತರಕ್ಕೆ ಗುರುಗಳು ಸಂತೋಷದಿಂದ ಪ್ರಶಂಸೆ ವ್ಯಕ್ತಪಡಿಸಿದರು .

ರಾಮಾನುಜರು ಇದೀಗ ತಮ್ಮ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸ ಪಡೆದು ಶ್ರೀವೈಷ್ಣವ ಧರ್ಮಕ್ಕೆ ಪ್ರತಿಪಾದಕರಾಗುತ್ತಾರೆ . ರಾಮಾನುಜರ ಪೂರ್ವ ಗುರುಗಳಾದ ಯಾದವ ಪ್ರಕಾಶಕರು ಕಾಂಚಿಗೆ ಬಂದು ರಾಮಾನುಜರಿಂದ ಶಿಷ್ಯತ್ವ ಪಡೆದು ಶ್ರೀವೈಷ್ಣವರಾಗುತ್ತಾರೆ . ರಾಮನುಜರು ಮಾತ್ರ ಸರಳ , ನಿರಹಂಕಾರಿಯಾಗಿ ಮಾನವ ಕುಲಕ್ಕೆ ಮೋಕ್ಷ ನೀಡುವುದಕ್ಕಾಗಿ ತಮ್ಮ ಗುರುವಿತ್ತ ಮಂತ್ರವನ್ನು ಜನರಿಗೆ ತಿಳಿಸಿದ ಮಹಾ ದಾರ್ಶನಿಕರು . ವೈಷ್ಣವ ಸಿದ್ದಾಂತಗಳನ್ನು ಜನರಿಗೆ ತಿಳಿಸಲು ದೇಶಾದ್ಯಂತ ಸಂಚರಿಸಿದ ಮಹಾ ಸಂತ ರಾಮನುಜ . ಬಳಿಕ ವೇದವ್ಯಾಸರ ವಿಚಾರಧಾರೆಯನ್ನರಿತು ಶಂಕರ , ಭಾಸ್ಕರ , ಯಾದವರುಗಳ ವಿಚಾರಕ್ಕೆ ಅನುಗುಣವಾಗಿ ವೇದಗಳನ್ನು ಸಂಗ್ರಹಿಸಿದರು . ಹಿಂದೂ ಪವಿತ್ರ ಗ್ರಂಥಗಳಾದ ವೇದಸಂಹಿತೆ , ಬ್ರಾಹ್ಮಣ , ಅರಣ್ಯಕಗಳನ್ನು ನೀಡಿದರು . ರಾಮಾನುಜರ ಪ್ರಿಯ ಶಿಷ್ಯರಾದ ಕೂರೇಶರಿಂದ ರಹಸ್ಯವಾಗಿದ್ದ ಬೋಧಾಯನ ವೃತ್ತಿಯನ್ನು ಅವಲೋಕಿಸಿ , ವ್ಯಾಸರ ಬ್ರಹ್ಮ ಸೂತ್ರಗಳಿಗೆ ವಿಶಿಷ್ಟಾದ್ವತದ ರೂಪದಲ್ಲಿ ರಾಮಾನುಜರು ವಿಸ್ತಾರವಾಗಿ ಹಾಗೂ ಸಂಪೂರ್ಣವಾಗಿ 4 ಅಧ್ಯಾಯಗಳಲ್ಲಿ ವಿವರಣೆ ನೀಡಿರುವುದೇ ಶ್ರೀಭಾಷ್ಯ . ಜಗತ್ತಿನ ಮೂರು ತತ್ವಗಳಾದ ಚಿತ್ ( ಪುರುಷ ) , ಅಚಿತ್ ( ಪ್ರಕೃತಿ ) ಹಾಗೂ ಈಶ್ವರ ( ಪುರುಷೋತ್ತಮ ) . ಈ ಮೂರು ತತ್ವಗಳ ವಿವರಣೆಯನ್ನು ರಾಮಾನುಜರು ವೇದಾಂತ ಸೂತ್ರ ಅಥವಾ ಬ್ರಹ್ಮ ಸೂತ್ರ ಭಾಷ್ಯರೂಪಕದಲ್ಲಿ ತಿಳಿಸಿದ್ದಾರೆ .

ಪ್ರಪತ್ತಿ ( ಶರಣಾಗತಿ )

ಮಾನವನು ತನ್ನ ಎಲ್ಲಾ ಕರ್ಮಗಳನ್ನು , ತನ್ನ ಎಲ್ಲಾ ಸಾಧನೆಗಳನ್ನು , ಅಹಂಕಾರವನ್ನು ತ್ಯಜಿಸಿ , ನಿಷ್ಕಲ್ಮಶ ಮನಸ್ಸಿನಿಂದ ನಿರ್ಭೀತಿಯಿಂದ ಪರಮಾತ್ಮನ ಧ್ಯಾನ , ಪೂಜೆ , ಕೈಂಕರ್ಯಗಳಲ್ಲಿ ತೊಡಗಿಸಿಕೊಂಡು ತನ್ನದೆಲ್ಲವನ್ನು ಮಾನಸಿಕವಾಗಿಯೇ ಪರಮಾತ್ಮನ ಪಾದ ಕಮಲಗಳಿಗೆ ಅರ್ಪಿಸುವುದೇ ಪ್ರಪತ್ತಿ . ಪೂಜೆ : ಭೂಮಿಯಲ್ಲಿ ನೆಲಸಿರುವ ಇಹಲೋಕದ ಪರಬ್ರಹ್ಮನಿಗೆ ಪ್ರತಿನಿತ್ಯದ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಲು ಸೂಕ್ತವಾದ ಸ್ಥಳವೇ ದೇವಾಲಯಗಳಾಗಿದೆ .

ಜೀವನ ಸಂದೇಶಗಳು ರಾಮಾನುಜರ ಮೊದಲ ಗುರುಗಳಾದ ಯಾದವ ಪ್ರಕಾಶಕರೇ ರಾಮಾನುಜರ ಶಿಷ್ಯತ್ವ ಪಡೆಯುತ್ತಾರೆ .

ಗುರುಗಳಾದ ಪೆರಿಯನಂಬಿ ಅವರು ದೀಕ್ಷಾ ಸಮಯದಲ್ಲಿ ಇವರಿಗೆ ರಾಮಾನುಜನ್ ಎಂದು ಹೆಸರಿಡುತ್ತಾರೆ .

ಶ್ರೀರಂಗಂಗೆ 18 ಭಾರಿ ತೆರಳಿ ಗೋಷ್ಠಿಪೂರ್ಣರಿಂದ ರಹಸ್ಯ ಮಂತ್ರವನ್ನು ಪಡೆದು ಸಕಲ ಜೀವಿಗಳ ಉದ್ದಾರಕ್ಕಾಗಿ ಅದನ್ನು ಎಲ್ಲರಿಗೂ ಉಪದೇಶಿಸಿದರು .
ಈ ಬಗ್ಗೆ ಕೋಪಗೊಂಡ ಗುರುಗಳಿಗೆ ರಾಮಾನುಜರ ಕಾರುಣ್ಯ ಮಹತ್ವವೆಂದು ತಿಳಿದು ರಾಮಾನುಜರಿಗೆ ಶುಭ ಹರಸಿದರು .

ಸಮಾಜದ ಉದ್ದಾರಕ್ಕಾಗಿ ರಾಮಾನುಜರು ತಮ್ಮ ದಾಂಪತ್ಯ ಜೀವನವನ್ನು ತೊರೆದರು .

ಸ್ನಾನಕ್ಕೆ ತೆರಳುವಾಗ ರಾಮಾನುಜರು ದಾಶರಥಿಯ ಜೊತೆಗೆ ತೆರಳುತ್ತಿದ್ದರು ಆದರೆ ಸ್ನಾನ ಮುಗಿಸಿ ಬರುವಾಗ ಧನುರ್ದಾಸನ ಹೆಗಲ ಮೇಲೆ ಕೈಹಾಕಿ ಬರುತ್ತಿದ್ದರು . ಈ ಕುರಿತು ಪ್ರಶ್ನಿಸಿದ ಜನರಿಗೆ ರಾಮಾನುಜಾಚಾರ್ಯರು , ಬ್ರಹ್ಮಜ್ಞಾನ ಉಳ್ಳವನು ಬ್ರಾಹ್ಮಣನಾಗುತ್ತಾನೆ . ಜ್ಞಾನಕ್ಕೆಜಾತಿ ಕುಲಗಳ ಅಗತ್ಯವಿಲ್ಲ . ಯಾರಲ್ಲಿ ನಾನು ಎಂಬ ಅಹಂ ನಾಶವಾಗುತ್ತದೆಯೋ ಅವನು ಪರಿಶುದ್ಧನಾಗುತ್ತಾನೆ .

ತಿರುಪತಿ ದೇವಾಲಯದಲ್ಲಿ ಎಲ್ಲಾ ಕುಲದ ಮತದ ಭಕ್ತರನ್ನು ದರ್ಶನಕ್ಕೆ ಅವಕಾಶ ರೂಪಿಸಿಕೊಟ್ಟ ಮಹಾಪುರುಷ ರಾಮಾನುಜರು .

ಸರಳ , ಸಜ್ಜನತೆ , ವೇದ ಶಾಸ್ತ್ರಗಳಲ್ಲಿ ಪರಿಣತಿ ಹೊಂದಿದ ರಾಮಾನುಜರು ಮಾನವನಿಗೆ ಅರ್ಥವಾಗುವಂತೆ ಶ್ರೀಭಾಷ್ಯವನ್ನು ನೀಡಿದರು , ಜನರಿಗಾಗಿ ವೇದಗಳ ಸಂಗ್ರಹ ಮಾಡಿದರು .

ರಾಮಾನುಜರು ಶ್ರೀ ವೈಷ್ಣವ ಸಿದ್ದಾಂತದ ಪ್ರತಿಪಾದಕರಾಗಿ ಭಕ್ತಿ ಮತ್ತು ಪ್ರಪತ್ತಿ ( ಶರಣಾಗತಿ ) ಗಳ ಕುರಿತು ಪ್ರಚಾರ ಮಾಡಿದರು .

ಮೇಲುಕೋಟೆಯಲ್ಲಿ ಹಿಂದುಳಿದ ಹಿಂದುಗಳು ಅಥವಾ ಅಸ್ಪೃಶ್ಯ ಹಿಂದುಗಳನ್ನು ಒಗ್ಗೂಡಿಸಿ ಅವರನ್ನು ಶ್ರೀವೈಷ್ಣವ ಧರ್ಮಕ್ಕೆ ಕರೆತಂದರು .

ಪ್ರಪತ್ತಿಗೆ ( ಶರಾಣಗತಿ ) ಯಾವುದೇಜಾತಿ , ಕುಲ , ಭಾಷೆ , ಮತಗಳಲ್ಲಿನ ಭೇದಭಾವ ಇರುವುದಿಲ್ಲ . ಪ್ರತಿಯೊಂದುಜೀವಿಗೂ ಮೋಕ್ಷ ಪಡೆಯುವ ಅರ್ಹತೆಇದೆ ಎಂದು ಸಾರಿಹೇಳಿದರು .

ಕರ್ಮ , ಜ್ಞಾನ , ಭಕ್ತಿ , ಪ್ರಪತ್ತಿಗಳು ಶ್ರೀರಾಮಾನುಜಾಚಾರ್ಯರ ಪರಮ ಆಧ್ಯತೆ .

ದೇವಸ್ಥಾನಗಳಲ್ಲಿನ ರಥೋತ್ಸವಗಳಲ್ಲಿ ಕೆಳವರ್ಗದ ಜನರಿಗೂ ಪ್ರವೇಶ ಒದಗಿಸಿದರು ರಾಮಾನುಜರು .

ಪರಮಾತ್ಮನಲ್ಲಿ ಐಕ್ಯ

120 ವರ್ಷಗಳಕಾಲ ತಮ್ಮಜೀವನವನ್ನು ಜ್ಞಾನ , ಭಕ್ತಿ , ಪ್ರಪತ್ತಿಗಳಿಗೆ ಮೀಸಲಿಟ್ಟ ಶ್ರೀರಾಮಾನುಜರು ಕ್ರಿ.ಪೂ .1137 ರಲ್ಲಿ ದಿವ್ಯಪ್ರಬಂಧಗಳನ್ನು ಆಲಿಸುತ್ತ ಪರಮಾತ್ಮನಲ್ಲಿ ಐಕ್ಯರಾದರು .

ಶ್ರೀರಂಗಂ ದೇವಾಲಯದ ಐದನೇ ಪ್ರಾಕಾರದಲ್ಲಿ ನೈರುತ್ಯ ದಿಕ್ಕಿನಲ್ಲಿ ಶ್ರೀರಾಮಾನುಜರ ಭೌತಿಕದೇಹವವನ್ನು ಇರಿಸಿ ಸಂರಕ್ಷಿಸಲಾಗಿದೆ . ಶ್ರೀವೈಷ್ಣವರ ಪ್ರಮುಖ ದೇವಾಲಯಗಳು ಶ್ರೀರಂಗಂ : ತಮಿಳು ನಾಡಿನಲ್ಲಿ ಇರುವ ಪ್ರಸಿದ್ಧ ದೇವಾಲಯ ಶ್ರೀರಂಗಂ , ಇಲ್ಲಿ ಶ್ರೀ ರಂಗನಾಥ ಸ್ವಾಮಿಯದೇವಾಲಯವಿದ್ದು , ಗೋದಾದೇವಿ / ಆಂಡಾಳ್ ವಿಷ್ಣುರೂಪದಲ್ಲಿ ಬಂದ ಶ್ರೀರಂಗನಾಥ ಸ್ವಾಮಿಯನ್ನು ಮದುವೆಯಾದಳು .

ಬಳಿಕ ಆಂಡಾಳ್ ಇಲ್ಲೇ ಪರಮಾತ್ಮನಲ್ಲೇ ಐಕ್ಯಳಾದಳು . ತಿರುಮಲ : ಆಂಧ್ರಪ್ರದೇಶದಲ್ಲಿರುವ ತಿರುಪತಿಯ ನಿವಾಸಿ , ಶ್ರೀನಿವಾಸ , ವೆಂಕಟೇಶ್ವರನು ಇಲ್ಲಿ ನೆಲಸಿದ್ದಾನೆ . ಇಲ್ಲಿ ವೆಂಕಟೇಶ್ವರನುತನ್ನ ಶಂಖ , ಚಕ್ರ , ಶೂಲಂ ಗಳನ್ನು ರಾಜಾತೊಂಡನಿಗೆ ನೀಡಿರುವುದರಿಂದ ಪರಮಾತ್ಮನನ್ನು ಮತದ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು . ಬಳಿಕ ಶ್ರೀರಾಮಾನುಜರು ಪ್ರಾರ್ಥಿಸಿದಂತೆಯೇ ಪರಮಾತ್ಮನುತನ್ನ ಶಂಖ , ಚಕ್ರಗಳನ್ನು ಧರಿಸಿ ಎಲ್ಲರಿಗೂ ದರ್ಶನ ನೀಡಿದನು . ಕಂಚಿ : ಶ್ರೀ ವೈಷ್ಣವ ವಿಶಿಷ್ಟಾದ್ವತ ಸಂಪ್ರದಾಯದ ಸಂರಕ್ಷಣೆ ಮಾಡುತ್ತಿರುವುದು ಶ್ರೀವರದರಾಜ ಸ್ವಾಮಿದೇವಾಲಯದಲ್ಲಿಯೇ .

ಮೋಕ್ಷ ಸಾಧನಗಳು

ವರ್ಣಧರ್ಮ : ಒಬ್ಬ ವ್ಯಕ್ತಿತನ್ನ ವರ್ಣಕ್ಕೆ ಸೇರಿದಕಾರ್ಯವನ್ನು ಮಾಡಿದರೆ , ಎಲ್ಲಾ ವರ್ಣಗಳ ಜನರಿಗೂ ತಮ್ಮ ವೃತ್ತಿಗೆ ಗೌರವ ಲಭಿಸುತ್ತದೆ . ಇದರಿಂದ ಜನರಲ್ಲಿ ನೆಮ್ಮದಿ ಮತ್ತುಕ್ಷೇಮ ಲಭಿಸುತ್ತದೆ . ಇದರಿಂದ ಜನರಿಗೆ ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿಯೂ ಸಹಾಯವಾಗುತ್ತದೆ .

ವರ್ಣಗಳು : ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಆಶ್ರಮಧರ್ಮ : ಇಲ್ಲಿ ಮಾನವ ಸಮಾಜದಲ್ಲಿ ಬೇಕಾದ ನಾಲ್ಕು ಆಯಾಮವಾದ ಬ್ರಹ್ಮಚರ್ಯ , ಗೃಹಸ್ಥ , ವಾನಪ್ರಸ್ಥ , ಸಂನ್ಯಾಸ ಹಂತಗಳನ್ನು ಸುಗಮವಾಗಿಸಿದರೆ ತನ್ನ ಸಾಮಾಜಿಕ ಬದುಕು ಹಾಗೂ ಆಧ್ಯಾತ್ಮಿಕ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸುತ್ತಾರೆ .

ಪಂಚ ಮಹಾಯಜ್ಞಗಳು : ಮಾನವನ ಜೀವನವೇ ಒಂದುಯಜ್ಞ ತನ್ನಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ವಿಶ್ವಕ್ಕೆ ಋಣಿಯಾಗಿ ಬದುಕಬೇಕೆಂದು ನಮ್ಮ ಹಿರಿಯರು ಪಂಚಯಜ್ಞಗಳನ್ನು ನೀಡಿದ್ದಾರೆ . ಈ ಯಜ್ಞಗಳಿಂದ ನಾವು ನಮ್ಮಋಣ ತೀರಿಸಿಕೊಳ್ಳಬಹುದಾಗಿದೆ . ಬ್ರಹ್ಮಯಜ್ಞ ದೇವಯಜ್ಞ ಪಿತೃಯಜ್ಞ ನರಯಜ್ಞ ಭೂತಯಜ್ಞ ದಾನ : ಭಾರತದಲ್ಲಿದಾನ ಮಾಡುವವರ ಸಂಖ್ಯೆ ಪುರಾಣಗಳಿಂದ ಹರಿದುಬಂದಿದೆ .

ಕರ್ಣ , ಹರಿಶ್ಚಂದ್ರ , ರಾಮ , ಶಬರಿ ಸೇರಿದಂತೆ ಸಾಕಷ್ಟುದಾನಶೂರರು ಇದ್ದಾರೆ . ಈಗಿನ ಸಮಾಜದಲ್ಲಿ ಹಣಗಣಿಸುವುದರೊಂದಿಗೆ ಹಣದ ಸಾತ್ವಿಕ ಬಳಕೆಯನ್ನು ಮನದಟ್ಟುಮಾಡುವುದು ಅವಶ್ಯವಿದೆ . ಭಕ್ತಿ : ಮಾನವನುತನ್ನ ಹುಟ್ಟಿನಿಂದಲೇ ಭಾವನಾತ್ಮಕವಾಗಿಯೇ ಬೆಳದಿರುತ್ತಾನೆ . ಅವನಿಗೆ ಪರಬ್ರಹ್ಮನಲ್ಲಿ ಭಕ್ತಿಅಪಾರವಾಗಿಯೇಇರುತ್ತದೆ .

ಮನುಷ್ಯನ ಸಾವು ನೋವು , ದೋಷ , ಪಾಪ , ಕಲ್ಮಶಗಳನ್ನು ಹೊರತುಪಡಿಸಿ ದೇವನಲ್ಲಿ ಇರುವ ಪ್ರೀತಿ ಹಾಗೂ ನಂಬಿಕೆಯೇ ಭಕ್ತಿ , ಶ್ರೀ ವೈಷ್ಣವ ಸಂಪ್ರದಾಯದಲ್ಲಿ ಶ್ರೀರಾಮನುಜರು ಭಕ್ತಿಗೆ ಪ್ರಮುಖ ಸ್ಥಾನ ನೀಡಿದ್ದಾರೆ .

ಇದೇ ಸ್ಥಳದಲ್ಲಿ ರಾಮಾನುಜಾಚಾರ್ಯರಿಗೆ ಅದೈತದ ಪಾಠ ನಡೆದಿದೆ .

ಮೇಲುಕೋಟೆ :

ರಾಮಾನುಜರಿಗೆ ಚೋಳರಾಜನಿಂದ ತೊಂದರೆಯನ್ನುಂಟು ಮಾಡಿ , ರಾಮಾನುಜರನ್ನು ಮೇಲುಕೋಟೆಗೆ ಕರೆಸಿ ತನ್ನದರ್ಶನ ನೀಡಿದದೇವನೇ ಶ್ರೀಮನ್ ನಾರಾಯಣ . ಇಲ್ಲಿ ರಾಮಾನುಜರು ಅಸ್ಪೃಷ ಹಿಂದುಗಳಿಗೆ ಶ್ರೀ ವೈಷ್ಣವ ದೀಕ್ಷೆ ನೀಡಿದರು .

?( ಕೃಷ್ಣಸಖಿ ) ಹಿತೈಷಿ


Share