ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ ಭಕ್ತಿ ಅನನ್ಯವಾದುದು:

123
Share

 

 

*ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ ಭಕ್ತಿ ಅನನ್ಯವಾದುದು: ಹೆಚ್. ವಿ ರಾಜೀವ್*

ಶ್ರೀ ಶಂಕರಾಚಾರ್ಯರ ಧರ್ಮನಿಷ್ಠೆ ಶ್ರದ್ಧೆ ಭಕ್ತಿ ಛಲ ಅನನ್ಯವಾದುದು. ಅವುಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದಲ್ಲಿ ಅಳವಡಿಸಿಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾದುದು ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಮೂಡ ಮಾಜಿ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಕರೆ ನೀಡಿದರು.

ನಗರದ ಕನಕಗಿರಿಯಲ್ಲಿರುವ
ಭಾರತಿ ವೃದ್ಧಾಶ್ರಮದಲ್ಲಿ
ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದಿಂದ ವಿಜ್ಞಾನಿ, ವಿಮರ್ಶಕ ವಿಚಾರವಾದಿ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು, ಹಾಗೂ ಸಾಮಾಜಿಕ ಕ್ರಾಂತಿಯ ಸಂತ ಶ್ರೀ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ
ಆಚಾರ್ಯತ್ರಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಅನ್ನುವ ಹಂಪಲು ವಿತರಿಸಿ ಮಾತನಾಡಿದ ಅವರು
ಸನಾತನ ಧರ್ಮಕ್ಕೆ ಮೂಲಶಕ್ತಿ ನೀಡಿದವರು ಶಂಕರಾಚಾರ್ಯರು. ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವನ್ನ ಎಲ್ಲೆಡೆ ವ್ಯಾಪಿಸಿದರು. ವ್ಯಾಪಕ ಶಕ್ತಿಯ ಶಂಕರ ತತ್ವಗಳ ಪರಿಪಾಲನೆ ಇಂದಿಗೆ ಅಗತ್ಯವಾಗಿದೆ’ ಎಂದರು.
ಶಂಕರ ಭಗವತ್ಪಾದರು ಅದ್ವೈತ ಸಿದ್ಧಾಂತ ಪ್ರತಿಪಾದಿಸಿ ಜಗದ್ಗುರು ಎನಿಸಿಕೊಂಡವರು. ಧರ್ಮದ ತಿರುಳೇ ಅಧ್ಯಾತ್ಮವಾಗಿದೆ ಎಂದು ತಿಳಿಸಿದ ಶಂಕರರನ್ನು ಕೃತಜ್ಞತೆ ದೃಷ್ಟಿಯಲ್ಲಿ ನೋಡಬೇಕು. ಜತೆಗೆ ಅವರ ಸಂದೇಶ ಅರಿವಿಗೆ ತಂದುಕೊಳ್ಳಲು ಸ್ಮರಣೆ ಮಾಡಬೇಕು. ಶಂಕರರ ಭಾಷ್ಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಭವಿಷ್ಯದ ಸಾವಿರಾರು ವರ್ಷಗಳ ಕಾಲವೂ ಇರುವಷ್ಟು ಸತ್ವಯುತವಾಗಿವೆ. ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮಗಳ ದಿವ್ಯ ವ್ಯಕ್ತಿತ್ವ ಅವರನ್ನು ಎಲ್ಲರಲ್ಲಿಯೂ ಸ್ಥಾಯಿ ಮಾಡಿಸಿದೆ’ ಎಂದು ತಿಳಿಸಿದರು.

ನಂತರ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ರವರು ಮಾತನಾಡಿ
ಶ್ರೀ ರಾಮನುಜಾಚಾರ್ಯರ ಕೊಡುಗೆ ಸಮಾಜಕ್ಕೆ ಅಪಾರವಾದುದು, 130 ವರ್ಷಗಳ ಕಾಲ ಬದುಕಿದ್ದ ರಾಮಾನುಜರು ಮೇಲುಕೋಟೆಗೆ ಭೇಟಿ ನೀಡಿ ಹಿಂದೂ ಧರ್ಮ ಮಹತ್ವವನ್ನ ಸಾರಿದರು ತಣ್ಣೂರು ಕೆರೆ ನಿರ್ಮಿಸಿದರು, ಸಮಾಜದ ಎಲ್ಲಾ ಜಾತಿಯವರಿಗೂ ಸಂಸ್ಕೃತಿ ಸಂಸ್ಕಾರಗಳನ್ನ ಪರಿಚಯಿಸಿಕೊಟ್ಟರು ಸಂಸ್ಕೃತಿಯಿಂದ ಆರೋಗ್ಯ ಶಿಕ್ಷಣ ವಿಜ್ಞಾನದ ಉಪಯೋಗದ ಮಹತ್ವವನ್ನ ತಿಳಿಸಿಕೊಟ್ಟರು

ಇದೇ ಸಂದರ್ಭದಲ್ಲಿ ಶಾಸಕರಾದ ಹರೀಶ್ ಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮಾಜಿನಗರ ಪಾಲಿಕಾ ಸದಸ್ಯರಾದ ಸೌಭಾಗ್ಯಮೂರ್ತಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷರಾದ ವಿನಯ್ ಕಣಗಾಲ್, ರವಿತೇಜ, ಕಡಕೋಳ ಜಗದೀಶ್, ರಾಕೇಶ್, ದುರ್ಗಾ ಪ್ರಸಾದ್, ಪವನ್, ಗುರು, ಜ್ಯೋತಿ, ಹಾಗೂ ವೃದ್ಧಾಶ್ರಮದ ವೃದ್ಧರು ಹಾಜರಿದ್ದರು


Share