ಷರತ್ತು ಬದ್ಧವಾಗಿ ದೇವಾಲಯ ತೆರೆಯಲಿ

ಆನ್ಲೈನ್ ದೇಣಿಗೆ ಸಂಗ್ರಹ ಅರ್ಚಕರ ವಿರೋಧ — ರಾಜ್ಯದ ಮುಜರಾಯಿ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಆನ್ಲೈನ್ನಲ್ಲಿ ದೇಣಿಗೆ ಸಂಗ್ರಹಿಸಲು ಕ್ರಮ ಜರುಗಿಸಿದೆ .ಸರ್ಕಾರ ಇಂತಹ ಕ್ರಮ ಕೈಗೊಂಡರೆ ತಮಗೆ ಬಹಳ ಕಷ್ಟವಾಗುವುದು ಎಂದು ಪುರೋಹಿತ/ಅರ್ಚಕರ ವರ್ಗ ವಿರೋಧಿಸಿದೆ .ಕಡಿಮೆ ಸಂಬಳ ಪಡೆಯುವ ಕೆಲ ಅರ್ಚ ಕರುಗಳಿಗೆ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಂದ ಅನುಕೂಲವಾಗುತ್ತಿತ್ತು ..ಈಗ ಆನ್ಲೈನ್ ಸಂಗ್ರಹ ಪ್ರಾರಂಭಿಸಿದರೆ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಕಡಿಮೆಯೂ ಆಗುತ್ತದೆ ಎಂದು ಅವರುಗಳು ಆತಂಕ ವ್ಯಕ್ತಪಡಿಸಿದ್ದಾರೆ .ತಿರುಪತಿ ದೇವಸ್ಥಾನದಿಂದ ವರದಿಯಾಗಿರುವಂತೆ ಎರಡು ತಿಂಗಳಿಂದ ಹುಂಡಿಗೆ ಬೀಳುವ ಹಣಕ್ಕಿಂತ ಆನ್ಲೈನ್ನಲ್ಲಿ ಹರಿದು ಬರುತ್ತಿರುವ ಹಣವೇ ಹೆಚ್ಚಾಗಿದೆ ಯಂತೆ ಕಳೆದ ಎರಡು ತಿಂಗಳಿಂದ ಕರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಬಾಗಿಲು ಹಾಕಿಸಿರುವ ಸರಕಾರ ಕೂಡಲೇ ಷರತ್ತುಬದ್ಧವಾಗಿ ಇದನ್ನು ಭಕ್ತಾದಿಗಳಿಗೆ ತೆರೆದರೆ ಇಬ್ಬರಿಗೂ ಅನುಕೂಲವಾಗಬಹುದು . ಸರ್ಕಾರ ಇದರ ಬಗ್ಗೆ ಕಾರ್ಯೋನ್ಮುಖವಾಗಲಿ.