ಸಂಗೀತ ಸಾಧಕರು ಗಳಿಗೆ ಸನ್ಮಾನ

ಮೈಸೂರಿನಲ್ಲಿ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿ ಇರುವ ಚಾಮುಂಡಿಪುರಂ ಸಮೀಪ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಗೀತದಿಂದ ಆರೋಗ್ಯ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು ,
ಸನ್ಮಾನ ಸ್ವೀಕರಿಸಿದ

1)ವಿದ್ವಾನ್.. ಅಂಬಾ ಪ್ರಸಾದ್. (ಫಿಟಿಲು )
2)ವಿದ್ವಾನ್.. ಶಂಕರ್(ವೀಣೆ )
3)ವಿದ್ವಾನ್.. ವಿಶ್ವನಾಥ್ (ಮ್ಯಾಂಡೊಲಿನ್ )
4)ವಿದ್ವಾನ್.. ಇಂದು ಶೇಖರ್ (ತಬಲಾ )
5)ವಿದೂಷಿ.. ಶ್ರೀಮತಿ ನಾಗಲಕ್ಷ್ಮಿ. (ಗಾಯಕಿ )
6)ವಿದೂಷಿ.. ಇಂದ್ರಾಣಿ ಅನಂತರಾಮ್. (ಗಾಯಕಿ )
7)ವಿದೂಷಿ.. ರಶ್ಮಿ ರಘುರಾಮ್.(ಗಾಯಕಿ)
ಅವರಿಗೆ ಸನ್ಮಾನಿಸಲಾಯಿತು
ಸನ್ಮಾನಿಸಿ ನಂತರ ಮಾತನಾಡಿದ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಚ್ ಚನ್ನಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದರೆ ಆಸ್ಪತ್ರೆ ಇದ್ದ ಹಾಗೆ ಕಲಾವಿದರಿಗೆ ತೊಂದರೆ ಆದಾಗ ಇಲ್ಲಿಗೆ ಬಂದರೆ ಅದನ್ನು ನಿವಾರಿಸುವ ಶಕ್ತಿ ನಮ್ಮ ಇಲಾಖೆಗೆ ಇದೆ ಹಾಗಾಗಿ ಹೊಂದಿರುವ ಬಡ ಕಲಾವಿದರು ಆಗಾಗ ಬರುತ್ತಿರಬೇಕು ಎಂದು ಹೇಳಿದರು,
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್
ಸಾಂಸ್ಕೃತಿಕ ರಾಜಧಾನಿ
ಮೈಸೂರು ಕಲಾವಿದರ ತವರೂರು ಇದಕ್ಕೆ ಸಂಗೀತದ ಶಕ್ತಿಯೇ ಕಾರಣ ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ .ಶಂಖನಾದ ಶಾಸ್ವಕೋಶ ಶುದ್ಧಿ ಮಾಡುತ್ತದೆ ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಇಂದಿನ ಕಾಲದಲ್ಲಿ ಆಕಾಶವಾಣಿ ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳು ಜನಸಾಮಾನ್ಯರು ಅವಲಂಬಿತರಾಗಿದ್ದರು ಅದು ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತದೆ ಎಂದು ಸ್ಮರಿಸಿದರು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ಮಾತನಾಡಿ
ಸಂಗೀತ ಕಾರ್ಯಕ್ರಮಗಳು ಕಲಾಭಿಮಾನಿಗಳಿಗೆ ನೆಮ್ಮದಿಯ ಔಷಧಿ ನೀಡುತ್ತದೆ ದೇವರ ನಾಮ ಭಜನೆ ಸುಗಮ ಸಂಗೀತದಿಂದ ಹಿರಿಯ ನಾಗರಿಕರಿಗೆ ಬದುಕಿನ ಶಕ್ತಿ ಸಿಗುತ್ತದೆ ಆಕಾಶವಾಣಿ ದೂರದರ್ಶನ ಸಂಗೀತ ವಿಶ್ವವಿದ್ಯಾನಿಲಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಾಮಾಜಿಕ ಜಾಲತಾಣದ ಮೂಲಕ ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಕಲಾಭಿಮಾನಿಗಳಿಗೆ ಪರಿಚಯಿಸಲು ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು
ಪರಮ ಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಚ್ ಚಿನ್ನಪ್ಪ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ,ವಿದ್ವಾಂಸರಾದ ಡಾ ರಾಜ್ ಕುಮಾರ್ ,ರಾಷ್ಟ್ರ ಪ್ರಶಸ್ತಿ ವಿಜೇತರು ಗಣೇಶ ಈಶ್ವರ ಭಟ್ ,ನಗರ ಪಾಲಿಕೆ ಸದಸ್ಯರಾದ ವಿ ರಾಮಪ್ರಸಾದ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರಥಿ ,ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿದೇವಿ ,ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ,ರಾಘವೇಂದ್ರ ಪ್ರಸಾದ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಸುಚೀಂದ್ರ, ‘ಜಯಸಿಂಹ ಶ್ರೀಧರ್ ,ಕಡಕೊಳ ಜಗದೀಶ್, ರಾಕೇಶ್ ಕುಂಚಿಟಿಗ ,ಶ್ರೀಕಾಂತ್ ಕಶ್ಯಪ್, ಚಕ್ರಪಾಣಿ ,ಹಾಗೂ ಇನ್ನಿತರರು ಹಾಜರಿದ್ದರು