ಸಂತಸ ಹಂಚಿಕೊಂಡ ಹಿಂದೂ ಪರ ಸಂಘಟನೆ

Share

ಹಿಂದೂಪರ ಸಂಘಟನೆ ವತಿಯಿಂದ ಅಗ್ರಹಾರ ವೃತ್ತದಲ್ಲಿ ಬಾಬ್ರಿ ಮಸೀದಿಯ ಕೇಸಿನಲ್ಲಿ ದೋಷಮುಕ್ತರಾಗಿ ಹೊರ ಬಂದ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಎಲ್ ಕೆ ಅಡ್ವಾಣಿ ಸೇರಿದಂತೆ 32 ಹಿಂದೂ ಮುಖಂಡರು ದೋಷಮುಕ್ತರಾಗಿ ಹೊರಬಂದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಪ್ರದೀಪ್ ಕುಮಾರ್ ಮಾತನಾಡಿ, ಶ್ರೀರಾಮನ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಮಂದಿರಕ್ಕೆ ಹೋರಾಡಿದ ಎಲ್ಲರನ್ನೂ ಕೂಡ ಶ್ರೀರಾಮ ದೋಷಮುಕ್ತರನ್ನಾಗಿ ಮಾಡಿರುವುದು ನ್ಯಾಯಕ್ಕೆ ಸಂದ ಜಯ ರಾಮಮಂದಿರಕ್ಕೆ ಹೋರಾಡಿದ ಎಲ್ಲರ ಜೀವನ ಚರಿತ್ರೆಯನ್ನು ಪುಸ್ತಕದಲ್ಲಿ ಬಿತ್ತರಿಸುವ ಮೂಲಕ ಜಗತ್ತಿಗೆ ಪರಿಚಯಿಸಬೇಕು ಎಲ್ ಕೆ ಅಡ್ವಾಣಿಯವರು ಮಹಾನಾಯಕ ಹಿಂದೂ ಪರ ಹೋರಾಟದಲ್ಲಿ ಎಲ್ಲ ಸಂದರ್ಭದಲ್ಲೂ ಬೆನ್ನೆಲುಬಾಗಿ ನಿಲ್ಲುವಂಥ ನಾಯಕ ನ್ಯಾಯಾಲಯ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಈ ವಿಚಾರವಾಗಿ ನಾವು ಕೂಡ ಸಂಭ್ರಮಿಸುವುದಲ್ಲ ಇಡೀ ದೇಶವೇ ಸಂಭ್ರಮಿಸುತ್ತಿದ್ದೆು ಇನ್ನೊಬ್ಬರಿಗೆ ತೊಂದರೆಯಾಗದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆಕಾರಿಯಾಗಿ ಹೇಳಿಕೆಯನ್ನು ನೀಡದೇ ಶಾಂತ ರೀತಿಯಿಂದ ನ್ಯಾಯಾಲಯ ಕೊಟ್ಟಂತ ತೀರ್ಪನ್ನು ಸ್ವಾಗತಿಸಿ ಮನೆಯಲ್ಲೇ ಇದ್ದು ಶ್ರೀರಾಮನನ್ನು ಪೂಜಿಸಿ ಮನೆಯಲ್ಲಿ ಸಿಹಿ ಮಾಡಿ ಮನೆಯಲ್ಲೇ ಸಂಭ್ರಮಿಸಿ ಕೊಳ್ಳಿ ಎಂದು ಮನವಿ ಮಾಡಿದರು.
ಸಂಭ್ರಮಾಚರಣೆಯಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಬಿಜೆಪಿ ಮಾಧ್ಯಮ ಪ್ರಮುಖ್ ಪ್ರದೀಪ್ ಕುಮಾರ್ ,ಯುವ ಮುಖಂಡರಾದ ಮಧು ಎನ್ ,ಬಿಜೆಪಿ ಯುವಮೋರ್ಚಾ ನಗರ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್ ,ಮಹದೇವಪ್ರಸಾದ್ ,ಪ್ರಶಾಂತ್ ಭಾರದ್ವಾಜ್ , ಹರೀಶ್ ನಾಯ್ಡು ,ದೀಪಕ್ ,ಹಾಗೂ ಇನ್ನಿತರರು ಹಾಜರಿದ್ದರು


Share