ಸಂಪಾದಕೀಯ : ಕರ್ನಾಟಕ ಬಿಜೆಪಿಗೆ ಗುಜರಾತ್ ಮಾಡೆಲ್

Share

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಭಾರತೀಯ ಜನತಾ ಪಕ್ಷದ ವರಿಷ್ಠರು ದೊಡ್ಡ ಸರ್ಕಸ್ಸನ್ನೇ ಮಾಡುತ್ತಿದ್ದು ಗುಜರಾತ್ ಮಾದರಿ ಕರ್ನಾಟಕ ದ ಭಾರತೀಯ ಜನತಾ ಪಕ್ಷದ ಚಿತ್ರಣವನ್ನೇ ಬದಲಿಸಲು ಹೊರಟಿದ್ದಾರೆ.
ಗುಜರಾತಿನಲ್ಲಾದಂತೆ ಬಹುತೇಕ ಹಿರಿಯರು ಹಾಗೂ ಪದೇ ಪದೇ ರಾಜಕೀಯದಲ್ಲೇ ನೆಲೆ ಕಂಡುಕೊಂಡಿರುವವರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರು ದಿಟ್ಟ ಹಾಗೂ ದೃಢ ತೀರ್ಮಾನ ಮಾಡಿರುವುದರಿಂದ ಕರ್ನಾಟಕ ರಾಜ್ಯದಲ್ಲೂ, ಭಾರತೀಯ ಜನತಾ ಪಕ್ಷಕ್ಕೆ ಅಥವಾ ಪಕ್ಷದಿಂದ ಮುಂದಾಗಬಹುದಾದ ಮುಜುಗರಗಳನ್ನು ತಪ್ಪಿಸಲು ಅಥವಾ ಎದುರಿಸಲಾಗದೆ ರಾಜಿನಾಮೆ ಪತ್ರಗಳನ್ನು ಹಿಡಿದು ಹೊರಟಿದ್ದಾರೆ. ಹಲವರು ಈಗಾಗಲೇ ತಮಗೆ ಸ್ಥಾನ ದೊರಕುವುದಿಲ್ಲ ಎಂಬ ಖಚಿತತೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ, ಕೆಲವರು ತಮಗಲ್ಲದಿದ್ದರೆ ತಮ್ಮ ಮಕ್ಕಳಿಗಾದರೂ ಸ್ಥಾನ ಕಲ್ಪಿಸುವ ಕನಸು ಕಾಣುತ್ತಿದ್ದು ಸದ್ಯಕ್ಕೆ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ ಎಂದು ಭಾರತೀಯ ಜನತಾ ಪಕ್ಷದ ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ. ಈಗಾಗಲೇ ಬಿಎಸ್ ಯಡಿಯೂರಪ್ಪ ಪಕ್ಷದ ಕೇಂದ್ರೀಯ ಸ್ಥಾನ ಪಡೆದಿದ್ದು ಸ್ಥಳೀಯ ಚುನಾವಣೆಗಳಲ್ಲಿ ನಿಲ್ಲದ ಹಾಗೆ ಮಾಡಲಾಗಿದೆ. ಎಸ್ಎ ರವೀಂದ್ರ ನಾಥ್. ಶ್ರೀನಿವಾಸ ಶೆಟ್ಟಿ … ರವರುಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ರಾಜೀನಾಮೆ ನೀಡುತ್ತಿರುವುದು ಈಶ್ವರಪ್ಪನವರ ಸರದಿ ಆಗಿದೆ.
ಈಗ ಇನ್ನೂ ಎಷ್ಟು ಜನರು ಇವರುಗಳನ್ನು ಅನುಸರಿಸಿ ರಾಜೀನಾಮೆ ಸಲ್ಲಿಸುವರು? ಎಂದು ಕಾದು ನೋಡಬೇಕಾಗಿದೆ. ಒಟ್ಟಾರೆ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಮನ್ನಣೆ ನೀಡಲು ಪಕ್ಷ ತೀರ್ಮಾನಿಸಿರುವ ಹಾಗೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಒಂದು ಹೊಸ ಆಯಾಮ ಸೃಷ್ಟಿಯಾಗುವ ಲಕ್ಷಣಗಳು ಕಂಡುಬರುತ್ತಿದೆ. ಕರ್ನಾಟಕ ಭಾರತೀಯ ಜನತಾ ಪಕ್ಷದ ಪಾಲಿಗೆ
ಗುಜರಾತ್ ಮಾಡೆಲ್ ಆಗುವ ಸಾಧ್ಯತೆ ಇದೆ.


Share