ಸಂವಿಧಾನದ ಆಶಯಗಳು ಜಾರಿಯಾದಾಗ ಮಾತ್ರ ಸ್ವಾತಂತ್ರ್ಯದ ಅರ್ಥ ಫಲಿಸುತ್ತದೆ. –

 

ಸಂವಿಧಾನದ ಆಶಯಗಳು ಜಾರಿಯಾದಾಗ ಮಾತ್ರ ಸ್ವಾತಂತ್ರ್ಯದ ಅರ್ಥ ಫಲಿಸುತ್ತದೆ. – ಎಂ.ಕೆ.ಸೋಮಶೇಖರ್.

ಹೊಯ್ಸಳ ಆಟೋ ಗ್ಯಾಸ್ ವತಿಯಿಂದ 77ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆ.

ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ಹೊಯ್ಸಳ ಆಟೋ ಗ್ಯಾಸ್ (ಹೊಯ್ಸಳ ಗ್ರೂಪ್ಸ್) ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ರವರು ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು.ಇದೇ ಸಂಧರ್ಭದಲ್ಲಿ ಹೊಯ್ಸಳ ಗ್ರೂಪ್ಸ್ ಮಾಲೀಕರಾದ ಶ್ರೀ ಪಳನಿ ರಾಜೇಶ್,ಕೃಷ್ಣರಾಜೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು(ಬಸಪ್ಪ),ಆಟೋ ರವಿ,ಸಮಾಜ ಸೇವಕರಾದ ವಿಕ್ರಂ ಅಯ್ಯಾಂಗರ್,ಮರಿಸ್ವಾಮಿ,ಪಾನಿಪುರಿ ಸಂತೋಷ್,ಕೆಂಪಣ್ಣ,ಪುರುಷೋತ್ತಮ್ ಪಾಲ್ಗೊಂಡಿದ್ದರು.ಹಿರಿಯ‌ ನಿವೃತ್ತ ಸೇನಾನಿ ಸಿಥಿಕಾಂತ್ ನಿಯೋಗಿ ಯವರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ನೂರಾರು ಸಾರ್ವಜನಿಕರು ಧ್ವಜಾರೋಹಣದಲ್ಲಿ ಭಾಗವಹಿಸಿ ದೇಶಭಕ್ತಿಯ ಪರಾಕಷ್ಠೆ ಮೆರೆದರು.

ನಂತರ ಮಾತನಾಡಿದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿ ಜೀವನವನ್ನೇ ತ್ಯಾಗ ಮಾಡಿದ್ದಾರೆ.ಇಂತಹ ಸ್ವಾತಂತ್ರ್ಯೋತ್ಸವ ಸುಧಿನದಲ್ಲಿ ಅಂತಹ ಮಹಾತ್ಮರನ್ನು ನೆನೆಯುವ ಮೂಲಕ ಅವರ ದೇಶಸೇವೆಯನ್ನು ನೆನೆಯಬೇಕಿದೆ.ಇತ್ತೀಚಿಗೆ ಜಾತಿ,ಧರ್ಮದ ಹೆಸರಿನಲ್ಲಿ ಕೋಮುವಾದವನ್ನು ಹೆಚ್ಚು ಹುಟ್ಟು ಹಾಕುತ್ತಿದ್ದು ರಾಜಕೀಯ ಲಾಭಕ್ಕಾಗಿ ಅಶಾಂತಿ ಉಂಟು ಮಾಡುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ.ಸಂವಿಧಾನದ ಆಶಯಗಳಿಗೆ ಗೌರವ ಕೊಟ್ಟು ದೇಶದ ಕಟ್ಟಕಡೆಯ ವ್ಯಕ್ತಿಗಳಿಗೂ ಬದುಕುವ ಹಕ್ಕು,ಮೂಲಭೂತ ಸೌಕರ್ಯ,ವಸತಿ,ನೀರು,ಆಹಾರವನ್ನು ಒದಗಿಸಿ ಎಲ್ಲರೂ ಸಮಾನತೆಯಿಂದ ಬದುಕುವಂತೆ ಮಾಡಿ ದೇಶದಲ್ಲಿ ಶಾಂತಿಯನ್ನು ಸೃಷ್ಠಿಸಿದಾಗ ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ.ಆಗ ಮಾತ್ರ ಇಂತಹ ಆಚರಣೆಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.