ಸತ್ಯ ಹೇಳಲು ಅಂಜುವುದಿಲ್ಲ: ಅನರ್ಹಗೊಂಡ ರಾಹುಲ್ ನುಡಿ.

Share

ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ನಾನು ನನ್ನ ಕೆಲಸವನ್ನು ಮಾಡುತ್ತೇನೆ, ನಾನು ಸಂಸತ್ತಿನ ಒಳಗಿದ್ದರೂ, ಹೊರಗಿದ್ದರೂ ಪರವಾಗಿಲ್ಲ, ನಾನು ದೇಶಕ್ಕಾಗಿ ಹೋರಾಡುತ್ತೇನೆ,. ಸತ್ಯವನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ನನಗೆ ಆಸಕ್ತಿ ಇಲ್ಲ. ನಾನು ಸತ್ಯವನ್ನು ಮಾತ್ರ ಮಾತನಾಡುತ್ತೇನೆ, ಇದು ನನ್ನ ಕೆಲಸ ಮತ್ತು ನನ್ನನ್ನು ಅನರ್ಹಗೊಳಿಸಿದರೂ ಅಥವಾ ಬಂಧಿಸಿದರೂ ನಾನು ಮೋದಿ ವಿರುದ್ಧ ಮಾತನಾಡುತ್ತೇನೆ.
ಈ ದೇಶವು ನನಗೆ ಎಲ್ಲವನ್ನೂ ನೀಡಿದೆ ಮತ್ತು ಅದಕ್ಕಾಗಿಯೇ ನಾನು ಮಾತನಾಡಲು ಹೆದರುವುದಿಲ್ಲ ಎಂದು ನಿನ್ನೆಯ ದಿನ ಸಂಸದ ಸ್ಥಾನದಿಂದ ಅನಹಗೊಂಡ ರಾಹುಲ್ ಗಾಂಧಿ ಇಂದು ನಡೆಸಿದ ಪತ್ರಿಕಾಗೋಷ್ಠಿಯ ವಿವರ. ಅವರು ಮುಂದುವರೆದು ಮಾತನಾಡುತ್ತ,
ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದಾರೆ, ಅವರ ಕಣ್ಣಲ್ಲಿ ಅದನ್ನು ನೋಡಿದ್ದೇನೆ. ಆದ್ದರಿಂದಲೇ ನಂತರ ಅನರ್ಹ ಮಾಡಿದ್ದಾರೆ. ಇದು ಇಡೀ ನಾಟಕ. ಈ ಬೆದರಿಕೆಗಳು, ಅನರ್ಹತೆಗಳು ಅಥವಾ ಜೈಲು ಶಿಕ್ಷೆಗಳಿಗೆ ನಾನು ಹೆದರುವುದಿಲ್ಲ” ಎಂದರು. ಆದಾನಿ ಸಮುದಾಯದ ಅಕೌಂಟಿಗೆ 20000 ಕೋಟಿ ರೂ ಜಮಾ ಆಗಿರಬಹುದು ಯಾರದು? ಎಂಬ ಸತ್ಯ ಹೊರಬರಬೇಕಾಗಿದೆ ಎಂದು ಗಾಂಧಿ ಆಗ್ರಹಿಸಿದರು.


Share