ಸಮಸ್ಯೆ ಬಗೆಹರಿಸಲು ಮುಂದುವರಿದಿದ್ದೇ ತಪ್ಪಾ ಸ೦ಸದ ಪ್ರತಾಪ್ ಸಿಂಹ

ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು ಅಂದ್ರೆ ಇದೇ ಅಲ್ವ?: ಸಂಸದ ಪ್ರತಾಪ್ ಸಿಂಹ
———————————-

ಸೀವೇಜ್ ಫಾರ್ಮ್ ಗೆ ಆಗಿನ ಉಸ್ತುವಾರಿ ಸಚಿವ ಸೋಮಣ್ಣನವರ ಮುಂದಾಳತ್ವದಲ್ಲಿ ಭೇಟಿ ನೀಡಿದ್ದು ನವೆಂಬರ್ 5, 2019. (ಈ ಸಭೆಗೆ ಶಾಸಕರಾದ ರಾಮದಾಸ್ ರಿಗೆ ಸೋಮಣ್ಣನವರು ಖುದ್ದಾಗಿ ಆಹ್ವಾನಿಸಿದ್ದರು.) ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಸೋಮಣ್ಣನವರು ಸ್ಥಳದಲ್ಲೇ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿ ನವೆಂಬರ್ 25 ರೊಳಗೆ ವರದಿ ನೀಡುವಂತೆ ಸೂಚಿಸಿದರು. ತದನಂತರ 2020 ಜನವರಿ 3 ರಂದು ನಡೆಯುವ ಕೆಡಿಪಿ ಸಭೆಯೊಳಗೆ ಅಂತಿಮ ತೀರ್ಮಾನವಾಗಬೇಕು, ಅಷ್ಟರಲ್ಲಿ ಪ್ಲಾಂಟ್ ಗೆ ಪ್ರತ್ಯಕ್ಷ ಭೇಟಿ ನೀಡಿ ಅಭಿಪ್ರಾಯ ತಿಳಿಸಬೇಕೆಂದು ಸೋಮಣ್ಣನವರು ಹೇಳಿದಾಗ, ಮೇಯರ್, ಡಿಸಿ, ಪಾಲಿಕೆ ಆಯುಕ್ತರ ತಂಡ ಡಿಸೆಂಬರ್ 31 ರಂದು ನಾಗ್ಪುರ ಪ್ಲಾಂಟ್ ಗೆ ಹೋಗಿ ಜನವರಿ 3 ರ ಸಭೆಯಲ್ಲಿ ಸಕಾರಾತ್ಮಕ ಅಭಿಪ್ರಾಯ ಕೊಟ್ಟರು. ತದನಂತರ ಮೂರು ತಿಂಗಳ ಕಾಲ ಸತತವಾಗಿ ನಗರಾಭಿವೃದ್ಧಿ ಖಾತೆ ಮತ್ತು ಹಣಕಾಸು ಇಲಾಖೆಗೆ ಅಲೆದು ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಹಂತಕ್ಕೆ ತಂದಿದ್ದೇವೆ. ಇದನ್ನು ಹೊರತಾಗಿ ಇನ್ನೇನು ಮಾಡಲು ಸಾಧ್ಯವಿದೆ ಹೇಳಿ? ಐದೇ ತಿಂಗಳಲ್ಲಿ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದೆ ತಪ್ಪಾ? ನೀವೇ ಹೇಳಿ?

ವಿ.ಸೂ: 1) ಈ ಎಲ್ಲ ಸಭೆಗಳಿಗೂ ಶಾಸಕರಾದ ರಾಮದಾಸ್ ರಿಗೆ ಅಹ್ವಾನ ನೀಡಲಾಗಿತ್ತು.

2) ಆ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಮುಕ್ತ ಅವಕಾಶವಿತ್ತು.

3) ಮೈಸೂರಿನ ಕಸವೆಲ್ಲ ಸೀವೇಜ್ ಫಾರ್ಮ್ ಗೆ ಬರುವುದನ್ನು ತಡೆಯಲು ಕೆಸರೆ, ರಾಯನಕೆರೆ, ವಿದ್ಯಾರಣ್ಯಪುರ ಹೀಗೆ ಮೂರೂ ಕಡೆಯೂ ಪ್ರತ್ಯೇಕ ಪ್ಲಾಂಟ್ ಹಾಕಲೂ ಯೋಜನೆ ಸಿದ್ಧವಾಗಿದೆ. ಇದರಿಂದ ಬೇರೆಕಡೆ ಕಸವನ್ನು ನಮ್ಮಲ್ಲಿಗೇಕೆ ತರುತ್ತೀರಿ ಎಂದು ಪರಸ್ಪರ ಕಿತ್ತಾಡುವುದು ತಪ್ಪುತ್ತದೆ.

4) ಟೆಂಡರ್ನಲ್ಲಿ ಝಿಗ್ಮ್ಯಾ ಮಾತ್ರವಲ್ಲ ಅನುಭವವಿರುವ ಜಗತ್ತಿನ ಯಾವುದೇ ಕಂಪನಿ ಬೇಕಾದರೂ ಭಾಗಿಯಾಗಬಹುದು.


ಕಳೆದ 30-35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರೂ ಯಾರಿಂದಲೂ ಪರಿಹಾರ ಕಾಣದ ಮೈಸೂರಿನ ವಿದ್ಯಾರಣ್ಯಪುರಂ ಸೀವೇಜ್ ಫಾರಂನ ದುರ್ವಾಸನೆ ಬೀರುವ ಎರಡೂವರೆ ಲಕ್ಷ ಟನ್ ಕಸದ ನಿರ್ಮೂಲನೆಗೆ ಈ ಹಿಂದಿನ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣನವರ ಮುಂದಾಳತ್ವದಲ್ಲಿ ಕಳೆದ 5 ತಿಂಗಳಿನಿಂದ ಮಾಡಿದ ಪ್ರಾಮಾಣಿಕ ಹಾಗು ಪಾರದರ್ಶಕ ಪ್ರಕ್ರಿಯೆಯ ಸಚಿತ್ರ ಪತ್ರಿಕಾ ವರದಿ ನೋಡಿ.