ಸರ್ಕಾರಕ್ಕೆ ಕನ್ನಡ ಪ್ರಾಧಿಕಾರ ಅಧ್ಯಕ್ಷರ ಪತ್ರ ಕನ್ನಡಿಗರಿಗೆ ಕೆಲಸ ನೀಡಲು ಆಗ್ರಹ ನಾಗಾಭರಣ

Share

ಮೈಸೂರು, ಕನ್ನಡಿಗರಿಗೆ ಉದ್ಯೋಗ ನೀಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ ವಿವಿಧ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದ ವಲಸೆ ಕಾರ್ಮಿಕರು ಕೊರೋನಾ ಕಾರಣದಿಂದ ತಮ್ಮ ರಾಜ್ಯಕ್ಕೆ ಹಿಂತಿರುಗಿರುವ ಹಿನ್ನೆಲೆಯಲ್ಲಿ ನೈಪುಣ್ಯತೆ ಹೊಂದಿರುವ ಸಾಕಷ್ಟು ಮಂದಿ ಸ್ಥಳೀಯರು ಅವರನ್ನು ಬಳಸಿಕೊಳ್ಳುವಂತೆ ಕನ್ನಡಿಗರಿಗೆ ಉದ್ಯೋಗವಕಾಶ ನೀಡಬೇಕು ಎಂದು ತಾವು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ
ರಾಜ್ಯದ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನೈಪುಣ್ಯತೆಯನ್ನು ಹೊಂದಿರುವವರು ಸಾಕಷ್ಟು ಮಂದಿ ಇದ್ದಾರೆ ಅಲ್ಲವೇ ಮಹಾರಾಷ್ಟ್ರ ಗೋವಾ ಆಂಧ್ರಪ್ರದೇಶ ತೆಲಂಗಾಣ ಮುಂತಾದೆಡೆಗೆ ವಲಸೆ ಹೋಗಿ ಶೋಷಣೆಗೆ ಸಿಲುಕಿರುವ ಕನ್ನಡಿಗರನ್ನು ಕರ್ನಾಟಕ ರಾಜ್ಯದಲ್ಲಿ ಬಳಸಿಕೊಂಡು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಕರ್ನಾಟಕದ ಜನರು ಶ್ರಮಜೀವಿಗಳು ಅವರುಗಳಿಗೆ ಉದ್ಯೋಗ ಕಲ್ಪಿಸಲು ಇದೊಂದು ಉತ್ತಮ ಅವಕಾಶ ಎಂದು ಸರ್ಕಾರಕ್ಕೆ ಸಲಹೆ ಮಾಡುವುದರ ಮೂಲಕ ಮನವಿ ಮಾಡಿದ್ದಾರೆ


Share