ಸರ್ಕಾರದ ಪ್ರತಿನಿಧಿ ನೇಮಕ ಮಾಡಲಿ

542
Share

ಸಂಪಾದಕೀಯ

ಮೈಸೂರಿನಲ್ಲಿ ಕರೊನಾಗೆ ಮೊದಲ ಬಲಿ ,ಕೆಆರ್ ನಗರದ ಎಂಬತ್ತ ಮೂರು ವರ್ಷದ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆಂದು ಒಂದೆಡೆ ವರದಿಯಾದರೆ .ವ್ಯಕ್ತಿಯ ಮೃತದೇಹವನ್ನು ಹರಿಶ್ಚಂದ್ರ ಘಾಟ್ ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತೆಂಬ ಕೆಲ ಚಿತ್ರಗಳು ವಾಟ್ಸಾಪ್ ಮಿಡಿಯಾಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ .ಆದರೆ ಜಿಲ್ಲಾಡಳಿತವು ಇದರ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ .ಜಿಲ್ಲಾಧಿಕಾರಿಗಳನ್ನು ಇದರ ಬಗ್ಗೆ ಸ್ಪಷ್ಟನೆ ಕೇಳಲು ಪ್ರಯತ್ನಿಸಿದಾಗ ,ಮೆಸೇಜ್ ಮೂಲಕ ಈ ರೀತಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ .”ದಯಮಾಡಿ ಪತ್ರಕರ್ತರು ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿರುವ ವ್ಯಕ್ತಿಯ ಬಗ್ಗೆ ವಿವರಣೆ ಕೇಳಿ ಪದೇ ಪದೇ ಫೋನ್ ಮಾಡಬೇಡಿ ಈ ವಿಷಯವು ರಾಜ್ಯ ಕಣ್ಗಾವಲು ಘಟಕದಿಂದ ದೃಢೀಕರಣ ಕೊಳ್ಳಬೇಕಿದೆ ಎಂದು ವಿಷಯಕ್ಕೆ ಸದ್ಯ ತೆರೆ ಎಳೆದಿದ್ದಾರೆ. “ವಸ್ತುಸ್ಥಿತಿಯಲ್ಲಿ ವಿಷಯವೂ ನಿಜವೇ ಆಗಿದ್ದರೂ ಜಿಲ್ಲಾ ಆಡಳಿತವು ಏಕೆ ಹೀಗೆ ತಕ್ಷಣವೇ ಇದರ ಬಗ್ಗೆ ದೃಢಪಡಿಸಲು ತಯಾರಿಲ್ಲ ಎಂಬುದು ಸಂದೇಹ ಮೂಡಿಸುತ್ತದೆ ,ಇದು ಸಹಜವೂ ಕೂಡ ,ಆದರೆ ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿದಾಗ ಅವರ ಮಾತು ನಿಜ ,ಎಂಬುದು ಅಷ್ಟೇ ಸತ್ಯ।.ಇತ್ತೀಚಿನ ದಿನಗಳಲ್ಲಿ ಮಾಧ್ಯಮವು ದಿನದ ಇಪ್ಪತ್ತು ನಾಲ್ಕು ಗಂಟೆಯೂ ಜಾಗೃತವಾಗಿದ್ದು ಯಾವುದೇ ತರಹದ ವಿಷಯವಾಗಲಿ ಅದು ತಮ್ಮಿಂದಲೇ ಒಂದು ಬ್ರೇಕಿಂಗ್ ಸುದ್ದಿಯಾಗಿ ನೀಡಬೇಕೆಂದು ಹಾತೊರೆಯುತ್ತಿರುತ್ತದೆ ,ಇದು ಕೂಡ ತಪ್ಪಲ್ಲ .ಹಾಗಾದರೆ ಮೇಲಿನ ವಿಷಯವನ್ನು ಆಧರಿಸಿ ಹೇಳುವುದೇ ಆದರೆ ,ವ್ಯಕ್ತಿಯ ಅಂತ್ಯ ಕಂಡಿರುವುದು ಖಾಸಗಿ ಆಸ್ಪತ್ರೆಯೊಂದರಲ್ಲಿ ,ಒಂದು ವೇಳೆ ಇದೇ ಸಾವು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಗಿದ್ದರೆ ಅದು ತಕ್ಷಣವೇ ದೃಢೀಕಾರಣ ಗೊಳ್ಳುತ್ತಿತ್ತು . ರಾಜ್ಯ ಸರಕಾರವು ಇತ್ತೀಚೆಗೆ ಕರೋನಾ ಸೋಂಕಿತರ ಪ್ರಕರಣಗಳು ನಾಗಾಲೋಟದಲ್ಲಿ ಓಡುತ್ತಿರುವುದರಿಂದ ತಮ್ಮ ನಿಲುವನ್ನು ಬದಲಿಸಿ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ನಿಯಮಾವಳಿಗಳನ್ನು ರೂಪಿಸಿದೆ .ಕೆಲವು ಶ್ರೀಮಂತ ವರ್ಗದವರು ತಮಗೆ ಬೇಕಾದ ರೀತಿಯಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ಸೇರುವುದು ಸಹಜವೇ ಆಗುವುದು.ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಗುಣಮುಖರಾದವರ ಅಥವಾ ಸಾವನ್ನಪ್ಪಿದ ವಿವರ ಕೇವಲ ಇದು ಕೋವಿದ್-೧೯ ಯಿಂದಲೇ ಆಯಿತೇ ?ಇಲ್ಲವೇ? ಎಂಬುದರ ವಿವರಣೆ ಸರ್ಕಾರಕ್ಕೆ ತಲುಪಿಸಲು ವಿಳಂಬವಾಗುವುದರಲ್ಲಿ ಸಂಶಯವಿಲ್ಲ .ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಯಾವುದೇ ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯೊಬ್ಬರನ್ನು ಪ್ರತಿಯೊಂದು ಖಾಸಗಿ ಆಸ್ಪತ್ರೆಗಳಲ್ಲಿ ನೇಮಕ ಮಾಡಿ ,ಅವರಿಂದ ಪಿನ್ ಟು ಪಿನ್ ವರದಿಯನ್ನು ತರಿಸಿಕೊಳ್ಳುತ್ತಿದ್ದರೆ ಒಳ್ಳೆಯದು .ಇದರಿಂದ ಆಗುಹೋಗುಗಳ ತಕ್ಷಣದ ವರದಿ ಜಿಲ್ಲಾ ಆಡಳಿತಕ್ಕೆ ಅರ್ಥಾತ್ ಸರ್ಕಾರದ ಕೈ ಸೇರಿ ಕ್ಷಣದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳಲುಅಥವಾ ಪ್ರಕಟಿಸಲು ಸಾಧ್ಯವಾಗುವುದು .ಕೂಡಲೇ ಸರ್ಕಾರವು ಇದರ ಬಗ್ಗೆ ಕಾರ್ಯೋನ್ಮುಖವಾಗಲಿ ಎಂಬುದೇ ಮೈಸೂರು ಪತ್ರಿಕೆಯ ಆಶಯ. ಜಿಲ್ಲಾ ಆಡಳಿತವು ಪ್ರತಿ ಒಂದು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ ಕೋವಿದ್-೧೯ ವಿಷಯವಾಗಿ ಯಾವುದೇ ವಿವರಣೆಗಳು ಸಕಾಲದಲ್ಲಿ ಬರುತ್ತಿಲ್ಲಲಲ. ಖಾಸಗಿ ಆಸ್ಪತ್ರೆಗಳು ಇದನ್ನು ಮುಂದುವರಿಸಿದ್ದೇ ಆದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿ ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಿಕೆಗಳು ಪ್ರಕಟಗೊಂಡಿದ್ದರೂ ಸಹ,ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಗಾವಲು ಇರಿಸಲು ಸರ್ಕಾರಿ ಪ್ರತಿನಿಧಿಗಳ ನೇಮಕ ಅತ್ಯವಶ್ಯಕ – ಸಂ


Share