ಸರ್ಕಾರಿ ಸುದ್ದಿ

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹಾಜರಾತಿ
ಮಂಗಳೂರು ಜೂನ್ 26 (ಕರ್ನಾಟಕ ವಾರ್ತೆ):- 2ನೇ ದಿನವಾದ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ. ಅರ್ಥಶಾಸ್ತ್ರ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ವಿವರ ಇಂತಿವೆ:-
ಅರ್ಥಶಾಸ್ತ್ರ ಪರೀಕ್ಷೆಗೆ 42 ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ (ನೊಂದಣಿ) ಆಗಿದ್ದು, ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಒರ್ವ ವಿದ್ಯಾರ್ಥಿ ಗೈರು ಹಾಜರಾಗಿರುತ್ತಾನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಿಸಿದೆ

.00000000000000000000000

ಬಿ.ಸಿ.ರೋಡ್ – ಹೆದ್ದಾರಿ ಕಾಮಗಾರಿ – ಪರ್ಯಾಯ ರಸ್ತೆ ವ್ಯವಸ್ಥೆ
ಮಂಗಳೂರು ಜೂನ್ 26 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹೆದ್ದಾರಿ 73 ಬಿ.ಸಿರೋಡ್ – ಕೊಟ್ಟಿಗೆಹಾರ ಭಾಗದ 20.150 ಕಿ.ಮೀ ರಿಂದ 40 ಕಿಮೀ ರವರೆಗೆ ಬಿ.ಸಿರೋಡಿನಿಂದ ಕೊಟ್ಟಿಗೆಹಾರ ಇಪಿಸಿ ಮಾದರಿಯಲ್ಲಿ ಮಧ್ಯಮ ಪಥ ರಸ್ತೆಯಿಂದ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರಸ್ತೆ ಹಾಗೂ ಚತುಷ್ಪಥ ರಸ್ತೆಯನ್ನಾಗಿ ಅಗಲಪಡಿಸುವ ಕಾಂಕ್ರೀಟ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಬಂಟ್ವಾಳ ತಾಲೂಕು ಬಿ.ಸಿ.ರೋಡ್‍ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವವರೆಗೆ ವಾಹನ ಸಂಚಾರವನ್ನು ಜೂನ್ 26 ರಿಂದ ಜುಲೈ 18 ರವೆರೆಗೆ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ಈ ಕೆಳಕಂಡ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ:-
ಕಾರುಗಳು, ಜೀಪುಗಳು, ಟೆಂಪೋ, ವ್ಯಾನ್ ಎಲ್‍ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಹಾಗೂ ಅಂಬ್ಯುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್ಸುಗಳು ಮಂಗಳೂರಿನಿಂದ ಪುಂಜಾಲಕಟ್ಟೆಯ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಬಂಟ್ವಾಳಪೇಟೆ-ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪುಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್-ಮಂಗಳೂರು ಮಾರ್ಗ ಸಂಚರಿಸಬಹುದು.
ಮೂಡುಬಿದ್ರೆಯಿಂದ ಬಂಟ್ವಾಳ-ಬಿ.ಸಿ.ರೋಡ್ ಕಡೆಗೆ ಮೂಡುಬಿದ್ರೆ-ಬಂಟ್ವಾಳ ಜಂಕ್ಷನ್-ರಾ.ಹೆ.234ರ ಮುಖಾಂತರ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬಹುದು,
ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಟ್ಯಾಂಕರ್‍ಗಳು, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚೇಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್ಸ್, ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಮಾಣಿ-ಉಪ್ಪಿನಂಗಡಿ (ಎಸ್.ಹೆಚ್-118) ಮುಖಾಂತರ ಕರಾಯ-ಕಲ್ಲೇರಿ-ಗುರುವಾಯನಕೆರೆ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ (ಎಸ್.ಹೆಚ್-118) ಮುಖಾಂತರ ಕಲ್ಲೇರಿ-ಕರಾಯ-ಉಪ್ಪಿನಂಗಡಿ-ಮಾಣಿ-ಬಿ.ಸಿ.ರೋಡ್-ಮಂಗಳೂರು ಮಾರ್ಗವಾಗಿ ಸಂಚರಿಸಬಹುದು

.00000000000000೦೦೦೦0

ಬಿ.ಸಿ.ರೋಡ್ – ಹೆದ್ದಾರಿ ಕಾಮಗಾರಿ – ಪರ್ಯಾಯ ರಸ್ತೆ ವ್ಯವಸ್ಥೆ
ಮಂಗಳೂರು ಜೂನ್ 26 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹೆದ್ದಾರಿ 73 ಬಿ.ಸಿರೋಡ್ – ಕೊಟ್ಟಿಗೆಹಾರ ಭಾಗದ 20.150 ಕಿ.ಮೀ ರಿಂದ 40 ಕಿಮೀ ರವರೆಗೆ ಬಿ.ಸಿರೋಡಿನಿಂದ ಕೊಟ್ಟಿಗೆಹಾರ ಇಪಿಸಿ ಮಾದರಿಯಲ್ಲಿ ಮಧ್ಯಮ ಪಥ ರಸ್ತೆಯಿಂದ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರಸ್ತೆ ಹಾಗೂ ಚತುಷ್ಪಥ ರಸ್ತೆಯನ್ನಾಗಿ ಅಗಲಪಡಿಸುವ ಕಾಂಕ್ರೀಟ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಬಂಟ್ವಾಳ ತಾಲೂಕು ಬಿ.ಸಿ.ರೋಡ್‍ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವವರೆಗೆ ವಾಹನ ಸಂಚಾರವನ್ನು ಜೂನ್ 26 ರಿಂದ ಜುಲೈ 18 ರವೆರೆಗೆ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ಈ ಕೆಳಕಂಡ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ:-
ಕಾರುಗಳು, ಜೀಪುಗಳು, ಟೆಂಪೋ, ವ್ಯಾನ್ ಎಲ್‍ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಹಾಗೂ ಅಂಬ್ಯುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್ಸುಗಳು ಮಂಗಳೂರಿನಿಂದ ಪುಂಜಾಲಕಟ್ಟೆಯ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಬಂಟ್ವಾಳಪೇಟೆ-ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪುಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್-ಮಂಗಳೂರು ಮಾರ್ಗ ಸಂಚರಿಸಬಹುದು.
ಮೂಡುಬಿದ್ರೆಯಿಂದ ಬಂಟ್ವಾಳ-ಬಿ.ಸಿ.ರೋಡ್ ಕಡೆಗೆ ಮೂಡುಬಿದ್ರೆ-ಬಂಟ್ವಾಳ ಜಂಕ್ಷನ್-ರಾ.ಹೆ.234ರ ಮುಖಾಂತರ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬಹುದು,
ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಟ್ಯಾಂಕರ್‍ಗಳು, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚೇಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್ಸ್, ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಮಾಣಿ-ಉಪ್ಪಿನಂಗಡಿ (ಎಸ್.ಹೆಚ್-118) ಮುಖಾಂತರ ಕರಾಯ-ಕಲ್ಲೇರಿ-ಗುರುವಾಯನಕೆರೆ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ (ಎಸ್.ಹೆಚ್-118) ಮುಖಾಂತರ ಕಲ್ಲೇರಿ-ಕರಾಯ-ಉಪ್ಪಿನಂಗಡಿ-ಮಾಣಿ-ಬಿ.ಸಿ.ರೋಡ್-ಮಂಗಳೂರು ಮಾರ್ಗವಾಗಿ ಸಂಚರಿಸಬಹುದು.

0000000000000000

.ಸಿ.ರೋಡ್ – ಹೆದ್ದಾರಿ ಕಾಮಗಾರಿ – ಪರ್ಯಾಯ ರಸ್ತೆ ವ್ಯವಸ್ಥೆ
ಮಂಗಳೂರು ಜೂನ್ 26 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹೆದ್ದಾರಿ 73 ಬಿ.ಸಿರೋಡ್ – ಕೊಟ್ಟಿಗೆಹಾರ ಭಾಗದ 20.150 ಕಿ.ಮೀ ರಿಂದ 40 ಕಿಮೀ ರವರೆಗೆ ಬಿ.ಸಿರೋಡಿನಿಂದ ಕೊಟ್ಟಿಗೆಹಾರ ಇಪಿಸಿ ಮಾದರಿಯಲ್ಲಿ ಮಧ್ಯಮ ಪಥ ರಸ್ತೆಯಿಂದ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರಸ್ತೆ ಹಾಗೂ ಚತುಷ್ಪಥ ರಸ್ತೆಯನ್ನಾಗಿ ಅಗಲಪಡಿಸುವ ಕಾಂಕ್ರೀಟ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಬಂಟ್ವಾಳ ತಾಲೂಕು ಬಿ.ಸಿ.ರೋಡ್‍ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವವರೆಗೆ ವಾಹನ ಸಂಚಾರವನ್ನು ಜೂನ್ 26 ರಿಂದ ಜುಲೈ 18 ರವೆರೆಗೆ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ಈ ಕೆಳಕಂಡ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ:-
ಕಾರುಗಳು, ಜೀಪುಗಳು, ಟೆಂಪೋ, ವ್ಯಾನ್ ಎಲ್‍ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಹಾಗೂ ಅಂಬ್ಯುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್ಸುಗಳು ಮಂಗಳೂರಿನಿಂದ ಪುಂಜಾಲಕಟ್ಟೆಯ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಬಂಟ್ವಾಳಪೇಟೆ-ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪುಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್-ಮಂಗಳೂರು ಮಾರ್ಗ ಸಂಚರಿಸಬಹುದು.
ಮೂಡುಬಿದ್ರೆಯಿಂದ ಬಂಟ್ವಾಳ-ಬಿ.ಸಿ.ರೋಡ್ ಕಡೆಗೆ ಮೂಡುಬಿದ್ರೆ-ಬಂಟ್ವಾಳ ಜಂಕ್ಷನ್-ರಾ.ಹೆ.234ರ ಮುಖಾಂತರ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬಹುದು,
ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಟ್ಯಾಂಕರ್‍ಗಳು, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚೇಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್ಸ್, ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಮಾಣಿ-ಉಪ್ಪಿನಂಗಡಿ (ಎಸ್.ಹೆಚ್-118) ಮುಖಾಂತರ ಕರಾಯ-ಕಲ್ಲೇರಿ-ಗುರುವಾಯನಕೆರೆ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ (ಎಸ್.ಹೆಚ್-118) ಮುಖಾಂತರ ಕಲ್ಲೇರಿ-ಕರಾಯ-ಉಪ್ಪಿನಂಗಡಿ-ಮಾಣಿ-ಬಿ.ಸಿ.ರೋಡ್-ಮಂಗಳೂರು ಮಾರ್ಗವಾಗಿ ಸಂಚರಿಸಬಹುದು

.00000000000000000

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಿದರೆ ಪ್ರಕರಣ ದಾಖಲು


ಯಾದಗಿರಿ, ಜೂನ್ 26 (ಕರ್ನಾಟಕ ವಾರ್ತೆ): ಸಾರ್ವಜನಿಕರು ತಂಬಾಕು ಹಾಗೂ ಪಾನ್‍ಮಸಾಲ, ಜರ್ದಾ, ಖೈನಿ, ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದು ಮತ್ತು ಉಗಳುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ-1897, ವಿಪತ್ತು ನಿರ್ವಹಣಾ ಕಾಯಿದೆ-2005, ಐಪಿಸಿ-1960, ಸಿ.ಆರ್.ಪಿ.ಸಿ (188,268,269 ಮತ್ತು 270)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ರಜಪೂತ್ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ಬಳಕೆ ಮಾಡಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್‍ಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು. ಕೋವಿಡ್-19 ಸೋಂಕಿತರು ಜಗಿಯುವ ಪಾನ್‍ಮಸಾಲ, ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್-19 ವೈರಸ್ ಹರಡುವ ಭೀತಿ ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಎಚ್ಚರಿಕೆ ವಹಿಸಲು ಅವರು ತಿಳಿಸಿದ್ದಾರೆ.

ಗೃಹ ದಿಗ್ಬಂಧನ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ


ಯಾದಗಿರಿ, ಜೂನ್ 26 (ಕರ್ನಾಟಕ ವಾರ್ತೆ): ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ನಿಗದಿತ ಅವಧಿಯವರೆಗೆ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಗೃಹ ದಿಗ್ಬಂಧನ ಅವಲೋಕನೆಗಾಗಿ ಕಳುಹಿಸಲಾಗುತ್ತಿದೆ. ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಗೃಹ ದಿಗ್ಬಂಧನ ಕಡ್ಡಾಯ. ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಪುನಃ ಸಾಂಸ್ಥಿಕ ದಿಗ್ಬಂಧನದ ಅವಲೋಕನೆಗಾಗಿ ಕಳುಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಎಚ್ಚರಿಕೆ ನೀಡಿದ್ದಾರೆ.

ಗೃಹ ದಿಗ್ಬಂಧನದಲ್ಲಿರುವವರು ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಮನೆಯಿಂದ ಹೊರಗಡೆ ತಿರುಗಾಡದೆ, ಗೃಹ ದಿಗ್ಬಂಧನ ಅವಲೋಕನಾ ಅವಧಿಯನ್ನು ಉಲ್ಲಂಘನೆ ಮಾಡದೇ ಇದ್ದಲ್ಲಿ ಅಂತಹ ವಲಸೆಗಾರರಿಗೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ

.೦೦೦೦೦೦೦೦೦೦೦೦೦೦೦೦

ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಆರೋಗ್ಯಕರ ಜೀವನಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಿ
-ಶಾಸಕ ವೆಂಕಟರಡ್ಡಿಗೌಡ ಮುದ್ನಾಳ


ಯಾದಗಿರಿ, ಜೂನ್ 26 (ಕರ್ನಾಟಕ ವಾರ್ತೆ): ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರವಿರಬೇಕು. ವ್ಯಸನ ಮುಕ್ತರಾದಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಸಲಹೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ಮಹಾಮಾರಿ ಎಂದು ಹೇಳುತ್ತೇವೆ. ಆದರೆ, ಮನುಷ್ಯನಿಗೆ ಕೊರೊನಾಗಿಂತ ಮಾದಕ ವಸ್ತುಗಳಿಗೆ ದಾಸನಾಗುವುದು ಅತ್ಯಂತ ಅಪಾಯಕರವಾಗಿದೆ. ಮಾದಕ ವಸ್ತುಗಳಿಗೆ ಬಲಿಯಾದರೆ ಜೀವನವಿಡೀ ತಾವು ಸಂಕಷ್ಟಕ್ಕೆ ಗುರಿಯಾಗುವುದಲ್ಲದೆ, ಅವರ ಕುಟುಂಬ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವಇಚ್ಛೆಯಿಂದ ನಿರ್ಧಾರ ಕೈಗೊಂಡಾಗ ಮಾತ್ರ ವ್ಯಸನ ಮುಕ್ತರಾಗಲು ಸಾಧ್ಯ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್-19 ದೃಢಪಟ್ಟ 909 ವ್ಯಕ್ತಿಗಳ ಪೈಕಿ ಜೂನ್ 25ರವರೆಗೆ ಒಟ್ಟು 715 ಜನ ಗುಣಮುಖರಾಗಿದ್ದಾರೆ. ತ್ವರಿತಗತಿಯಲ್ಲಿ ಶೇಕಡಾ 78ರಷ್ಟು ಜನರನ್ನು ಗುಣಮುಖ ಮಾಡಿರುವುದು ಒಂದು ಸಾಧನೆ. ಈ ಸಾಧನೆಯ ಶ್ರೇಯಸ್ಸು ಜಿಲ್ಲೆಯ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಲ್ಲಬೇಕು. ಇದರಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಪಾತ್ರ ಕೂಡ ಇದೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ತಮ್ಮದೇ ಆದ ಮಾನಸಿಕ ಒತ್ತಡಗಳಿರುತ್ತವೆ. ಒತ್ತಡದ ನೆಪದಲ್ಲಿ ಮಾದಕ ವಸ್ತುಗಳಿಗೆ ಅಂಟಿಕೊಳ್ಳುವುದು ತಪ್ಪು. ಇತ್ತೀಚೆಗೆ ಮಕ್ಕಳು ಕೂಡ ಗುಟ್ಕಾ ಸೇವನೆ ಮಾಡುತ್ತಿದ್ದಾರೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಮಾದಕ ವಸ್ತುಗಳ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ದೇಶದ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಮಾರಾಟ, ಸಾಗಣೆ ಹೆಚ್ಚಳದಿಂದ ಇವುಗಳಿಗೆ ಹೆಚ್ಚಿನ ಜನ ಬಲಿಯಾಗುತ್ತಿದ್ದಾರೆ. ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು, ಸದೃಢ ದೇಶಕ್ಕಾಗಿ ಶ್ರಮಿಸಬೇಕು. ಆರೋಗ್ಯಯುತ ದೇಶದ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ ಅವರು ಮಾತನಾಡಿ, ಹಣ-ಆಸ್ತಿ ಸಂಪಾದನೆ ಮಾಡಬಹುದು. ಆದರೆ, ಇವುಗಳಿಂದ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜಾಗೃತಿ ಮೂಡಿಸುತ್ತದೆ. ಜನರ ಅರಿವಿಗೆ ಬಂದಾಗ ಮಾತ್ರ ಮಾದಕ ವಸ್ತುಗಳ ಸೇವನೆ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರು ಮಾತನಾಡಿ, ಇತ್ತೀಚೆಗೆ ವಿದ್ಯುನ್ಮಾನ ಉಪಕರಣಗಳ ಅತಿಯಾದ ಬಳಕೆಯೂ ವ್ಯಸನವಾಗಿ ಪರಿಣಮಿಸಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದು ಅವರ ಮಾನಸಿಕ, ದೈಹಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಯುಕ್ತ ಮಕ್ಕಳಲ್ಲಿ ನಮ್ಮ ದೇಶದ ಸಂಸ್ಕøತಿ, ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ಪಾಲಕ-ಪೋಷಕರ ಮೇಲಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ಮಾತನಾಡಿ, 1989ರಿಂದ ಪ್ರತಿವರ್ಷ ಜೂನ್ 26 ಅನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಒಂದೊಂದು ಘೋಷಣೆಯೊಂದಿಗೆ ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ “ಉತ್ತಮ ಆರೈಕೆಗಾಗಿ ಉತ್ತಮ ಜ್ಞಾನ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಸೋಮಾರಿಗಳು ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಾರೆ. ಮಾದಕ ವಸ್ತುಗಳಿಗೆ ಬಲಿಯಾದವರಿಗೆ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ ಎಂದು ಹೇಳಿದರು.

ಮನೋವೈದ್ಯ ಡಾ.ಉಮೇಶ ಅವರು ಮಾತನಾಡಿ, ಮಾದಕ ವಸ್ತು ವ್ಯಸನ ಎಂದರೆ ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ, ದೈಹಿಕ, ಸಾಮಾಜಿಕ, ಆರ್ಥಿಕ, ಬೌದ್ಧಿಕ, ನೈತಿಕವಾಗಿ ವ್ಯಕ್ತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿರುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನೀಲಮ್ಮ ಎಸ್.ರೆಡ್ಡಿ ಅವರು ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆ ಸಿಬ್ಬಂದಿ ಜಗದೀಶ ಅವರು ಪ್ರಾರ್ಥಿಸಿದರು. ಮನಃಶಾಸ್ತ್ರಜ್ಞರಾದ ಡಾ.ಜಯಕುಮಾರ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್ ನಿರೂಪಿಸಿದರು. ಕಿರಿಯ ಆರೋಗ್ಯ ಸಹಾಯಕ ಶರಣಬಸವ ಹೊಸಮನಿ ಅವರು ವಂದಿಸಿದರು

.೦೦೦೦೦೦೦೦೦೦೦೦೦೦೦೦೦೦೦೦

0000000000 ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ
ಮೈಸೂರು. ಜೂನ್.26.(ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.
ಇಲಾಖೆಯ ಸಹಾಯಧನ ಪಡೆಯಲು ಇಚ್ಛಿಸುವ ರೈತರು ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಅವರನ್ನು ಸಂಪರ್ಕಿಸಿ ಅರ್ಜಿ ನಮೂನೆಗಳನ್ನು ಪಡೆದು ಜುಲೈ 15 ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಾದ ಮೈಸೂರು – 0821-2430450, ಹೆಚ್.ಡಿ.ಕೋಟೆ – 08228-255262, ಹುಣಸೂರು – 08222-252447, ಕೆ.ಆರ್.ನಗರ – 08223-262792, ನಂಜನಗೂಡು – 08221-226201, ಪಿರಿಯಾಪಟ್ಟಣ -08223-273535, ಟಿ.ನರಸೀಪುರ- 08227-260086 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್‍ನ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.೦೦೦೦//೦೦೦೦೦೦೦೦೦/೦/೦೦

ವಾಹನ ಮಾಲೀಕರ ಗಮನಕ್ಕೆ


   ಮಡಿಕೇರಿ ಜೂ.26(ಕರ್ನಾಟಕ ವಾರ್ತೆ):- ವಿರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯದ ವ್ಯಾಪ್ತಿಯಲ್ಲಿ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ನಂದಿ ಜಾತಿಯ ಮರಗಳ ವಿವಿಧ ಅಳತೆಯ 11 ನಾಟಗಳನ್ನು ಸಾಗಿಸುವ ಸಂದರ್ಭದಲ್ಲಿ 2019 ರ ಮಾರ್ಚ್ 11 ರಂದು ಮೊಕದ್ದಮೆ ಸಂಖ್ಯೆ: 30/2018-19ನ್ನು ದಾಖಲಿಸಿ ವಾಹನ ನೋಂದಣಿ ಸಂಖ್ಯೆ: ಕೆಎಲ್-04-ಎಲ್-9371ರ ಲಾರಿ ವಾಹನ (ಇಂಜಿನ್ ಸಂಖ್ಯೆ: ಇ483ಂ20980054 ಮತ್ತು ಚಾಸಿಸ್ ಸಂಖ್ಯೆ: 17ಇಅ20985298)ನ್ನು ಮತ್ತು ಸ್ವತ್ತುಗಳನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಸದರಿ ವಾಹನದ ಬಗ್ಗೆ ಯಾರಿಂದಲೂ ಹಕ್ಕುಭಾಧ್ಯತೆ ಇರುವುದಿಲ್ಲ. ಆದುದರಿಂದ ಸದರಿ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗಧಿತ ಅವಧಿಯೊಳಗೆ ಅಹವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ವಿಭಾಗ, ವೀರಾಜಪೇಟೆ ಇವರಿಗೆ ಸಲ್ಲಿಸಬೇಕಾಗಿದೆ.
  ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, 1963 ರ ವಿಧಿ 71 (ಎ) ಯಿಂದ (ಜಿ) ಪ್ರಕಾರ  ನೊಂದಣಿ ಸಂಖ್ಯೆ ಏಐ-04-ಐ-9371  ಲಾರಿಯ ಇಂಜಿನ್ ಸಂಖ್ಯೆ  ಇ483ಂ20980054   ಚಾಸಿಸ್ ಸಂಖ್ಯೆ  17ಇಅ20985298 ನ್ನು  ಅಮಾನತ್ತು ಪಡಿಸಿದ ಸ್ವತ್ತು ನಂದಿ ಜಾತಿಯ ಮರಗಳ ವಿವಿಧ ಅಳತೆಯ 11 ನಾಟ ಸದರಿ ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.೦೦೦೦೦೦///////ಮೂಗೂರು ಗ್ರಾಮದ ಶ್ರೀ ತ್ರಿಪುರಸುಂದರಮ್ಮ ದೇವಾಲಯ ಪ್ರವೇಶ ನಿಷಿದ್ಧ
0000000೦೦000000೦೦೦0000000000000೦೦
     ಮೈಸೂರು, ಜೂನ್,26(ಕರ್ನಾಟಕ ವಾರ್ತೆ):- ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆ
ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರಸುಂದರಮ್ಮ ದೇವಾಲಯ ಹಾಗೂ ಟಿ.ನರಸೀಪುರ  ತಾಲ್ಲೂಕಿನಲ್ಲಿ ಪ್ರಮುಖ ದೇವಾಲಯಗಳಲ್ಲಿ ಆಷಾಢ ಮಾಸದಲ್ಲಿ ಹೆಚ್ಚು ಜನರು ಸೇರುವ ಹಿನ್ನೆಲೆ ಎಲ್ಲಾ ಆಷಾಢ ಶುಕ್ರವಾರಗಳು, ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಆದೇಶಿಸಿರುತ್ತಾರೆ.
ಈ ಸಂದರ್ಭದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಚಕರು ಹಾಗೂ ಸಿಬ್ಬಂದಿಗಳು ಎಂದಿನಂತೆ ನಡೆಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.000000೦೦೦೦೦೦೦
00000೦೦೦೦೦್ರಿತ), ಶೇಂಗಾ (ನೀರಾವರಿ), ಶೇಂಗಾ (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಜೋಳ (ಮಳೆಯಾಶ್ರಿತ) ಬೆಳೆಗಳಿಗೆ ೨೦೨೦ರ ಜುಲೈ ೩೧ ರೊಳಗೆ ಅರ್ಜಿ ಸಲ್ಲಿಸಬೇಕು. 
ವಿಮಾ ಸಂಸ್ಥೆಯ ತಾಲೂಕವಾರು ಪ್ರತಿನಿಧಿಗಳ ವಿವರ ಇಂತಿದೆ: ರಾಯಚೂರು ತಾಲೂಕಿಗೆ ಕ್ಲಸ್ಟರ್ ಹೆಡ್ ಅನಿಲ್ ಜಾದವ್ ೯೮೯೨೦೨೧೭೫, ಶಂಕರ್‌ಗೌಡ ೯೪೮೨೯೬೧೩೫೭, ಮಾನವಿ ತಾಲೂಕಿಗೆ ಪವನ್ ಕುಮಾರ್ ೯೭೪೨೧೬೧೩೩೩, ಲಿಂಗಸೂಗೂರು ತಾಲೂಕಿಗೆ ಮಾಲಿಂಗರಾಯ ಪೂಜಾರ್ ೮೮೮೦೪೪೧೧೮೮, ದೇವದುರ್ಗ ತಾಲೂಕಿಗೆ ಶಕ್ತಿ ಬಾಚನಾಳ್ಳಿ ೯೫೩೫೪೮೩೦೮೩, ಸಿಂಧನೂರು ತಾಲೂಕಿಗೆ ನಿಂಗಯ್ಯ ೯೦೦೮೨೫೮೦೬೨, ಮಸ್ಕಿ ತಾಲೂಕಿಗೆ ಸಿದ್ದನಗೌಡ ಪಾಟೀಲ್ ೯೭೪೨೦೯೯೮೦೯ ಮತ್ತು ಸಿರವಾರ ತಾಲೂಕಿಗೆ ಶಿವಮೂರ್ತಿ ಯಾದವ್ ೮೮೬೧೩೮೫೭೪೪ ಅವÀರನ್ನು ನೇಮಿಸಲಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಬ್ಯಾಂಕುಗಳು, ಸಹಕಾರಿ ಸಂಘಗಳು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು, ಸಾಮಾನ್ಯ ಸೇವಾ ಕೇಂದ್ರ ಅಥವಾ ಫ್ಯೂಚರ್ ಜನರಾಲಿ ವಿಮಾ ಸಂಸ್ಥೆ ಪ್ರತಿನಿಧಿಗಳಿಗೆ ಸಂಪರ್ಕಿಸಬಹುದಾಗಿದೆ. ರೈತರು ಈ ವಿಮೆ ಯೋಜನೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**************************
ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಅಹ್ವಾನ
ರಾಯಚೂರು,ಜೂ.೨೬.(ಕ.ವಾ)- ೨೦೨೦-೨೧ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರು ಸಂಬAಧಿಸಿದ ತಾಲೂಕಿನ ತೋಟಗಾರಿಕ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ರಾಷ್ಟಿçಯ ತೋಟಗಾರಿಕೆ ಮಿಷನ್: ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಮಾವು, ದಾಳಿಂಬೆ) ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ, ವೈಯ್ಯಕ್ತಿಕ ಮತ್ತು ಸಮುದಾಯ ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ, ಈರುಳ್ಳಿ ಶೇಖರಣಾ ಘಟಕ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಯಂತ್ರೋಪಕರಣ (ಮಿನಿ ಟ್ಯಾಕ್ಟçರ್ ೨೦ೆಚ್.ಪಿ ಒಳಗಡೆ) ಖರೀದಿ, ಸಂರಕ್ಷಿತ ಬೇಸಾಯ (ಪಾಲಿ ಮನೆ ಮತ್ತು ನೆರಳು ಪರದೆ) ಹಾಗೂ ಶೈತ್ಯಾಗಾರ ಘಟಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟಿçÃಯ ಗ್ರಾಮಿಣ ಉದ್ಯೋಗ ಖಾತರಿ ಯೋಜನೆ: ಈ ಯೋಜನೆಯಡಿ ಮಾವು, ಸಪೋಟ, ದಾಳಿಂಬೆ, ಬಾಳೆ, ನುಗೆ,್ಗ ಪಪ್ಪಾಯ, ಪೇರಲ, ಗೇರು, ಬೆಳೆಗಳ ಪ್ರದೇಶ ವಿಸ್ತರಣಾ ಕಾರ್ಯಕ್ರಮಗಳನ್ನು ಹಾಗೂ ಮಾವು ಪುನಃಶ್ಚೇತನ, ಕೊಳವೆ ಬಾವಿ ಮರು ಪೂರಣ, ಕಾಮಗಾರಿಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ರೈತರ ಜಮೀನಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಈ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದಿಂದ ನಿಯಮ, ಮಾರ್ಗಸೂಚಿ ರೂಪಿಸಿದ್ದು, ಇದರಂತೆ ಫಲಾನುಭವಿಗಳಿಂದ ಆಯಾ ಯೋಜನೆಗಳಡಿ ಕಾರ್ಯಕ್ರಮವಾರು ಮತ್ತು ಹೋಬಳಿವಾರು ಗುರಿಯಂತೆ ರೈತರಿಂದ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
      ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ರಾಯಚೂರು- ೦೮೫೩೧-೨೨೫೨೫೩, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಮಾನವಿ- ೦೮೫೩೮-೨೨೦೩೦೫, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಸಿಂಧನೂರು- ೦೮೫೩೫-೨೨೩೫೪೫, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಲಿಂಗಸೂಗೂರು- ೦೮೫೩೭-೨೫೭೪೦೨, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ದೇವದುರ್ಗ- ೦೮೫೩೧-೨೬೦೦೦೬ ಹಾಗೂ ಸಂಬAಧಪಟ್ಟ ತಾಲೂಕಿನ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ಕಚೇರಿ ಸಮಯದಲ್ಲಿ  ಭೇಟಿ ನೀಡಬಹುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
************************* 
ಆಕ್ಷೇಪಣೆಗೆ ಆಹ್ವಾನ
ರಾಯಚೂರು.ಜೂ.೨೬.(ಕ.ವಾ)- ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ೨೦೧೯ರ ಗ್ರಾಮ ಲೆಕ್ಕಾಧಿಕಾರಿಗಳ ನೇರ ನೇಮಕಾತಿಯ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು hಣಣಠಿ://ಡಿಚಿiಛಿhuಡಿ.ಟಿiಛಿ.iಟಿ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲೀ ಆಹ್ವಾನಿಸಲಾಗಿದೆ.
ಆಕ್ಷೇಪಣೆಗಳನ್ನು ಜುಲೈ ೨ರ ಸಂಜೆ ೫.೩೦ ರೊಳಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******************
ಕಿರುಸಾಲ ಸೌಲಭ್ಯ: ಅರ್ಜಿ ಆಹ್ವಾನ
ರಾಯಚೂರು,ಜೂ.೨೬.(ಕ.ವಾ)- ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯಡಿ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ೨೦೨೦ರ ಜುಲೈ ೧ ರಿಂದ ೨೦೨೨ರ ಮಾಚ್ ೩೧ರವರೆಗೆ ಚಾಲ್ತಿಯಲ್ಲಿರಲಿದ್ದು, ಬೀದಿ ವ್ಯಾಪಾರಿಗಳಿಗೆ ಕೈಗೆಟುವ ದರದಲ್ಲಿ ಬ್ಯಾಂಕ್‌ಗಳ ಮೂಲಕ ೧೦ ಸಾವಿರ ರೂ.ಗಳ ಸಾಲ ಸೌಲಭ್ಯ ಒದಗಿಸಲಾಗುವುದು. ಸಾಲ ಮರುಪಾವತಿ ಮಾಡಿದವರಿಗೆ ಶೇ.೭ರ ಬಡ್ಡಿ ಸಹಾಯಧನ ಕೇಂದ್ರ ಸರ್ಕಾರದಿಂದ ನೀಡಲಾಗುವುದು.
ಡಿಜಿಟಲ್ ವಹಿವಾಟಿಗೆ ಉತ್ತೇಜನ ಮತ್ತು ಬಹುಮಾನ ನೀಡುವ ಉದ್ದೇಶವನ್ನು ಹೊಂದಿದೆ. ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 
ಬಿಪಿಎಲ್ ಕಾರ್ಡ್, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್‌ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿನ ಫೋಟೊ, ಈಗಾಗಲೇ ವಿತರಿಸಿದ ಗುರುತಿನ ಚೀಟಿ ಹಾಗೂ ಇತರೆ ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
೨೦೨೦ರ ಜುಲೈ ೧೫ ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ರಾಯಚೂರು ನಗರಸಭೆಯ ಪೌರಾಯುಕ್ತ ಡಾ.ದೇವಾನಂದ ಟಿ.ದೊಡ್ಡಮನಿ ಅವರನ್ನು ಸಂಪರ್ಕಿಸಬಹುದು ಎಂದು ರಾಯಚೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
00000000000000

ಪತ್ರಿಕಾ ಪ್ರಕಟಣೆ
ಕೊರೋನಾ: ಇಂದು ೧೪ ಪಾಸಿಟಿವ್ ಪ್ರಕರಣ ದೃಢ
ರಾಯಚೂರು,ಜೂ.೨೬.(ಕ.ವಾ)- ಜಿಲ್ಲೆಯ ದೇವದುರ್ಗ ತಾಲೂಕಿನಿಂದ ೩೬, ಲಿಂಗಸೂಗೂರು ತಾಲೂಕಿನಿಂದ ೪೨, ಮಾನ್ವಿ ತಾಲೂಕಿನಿಂದ ೮೩, ಸಿಂಧನೂರು ತಾಲೂಕಿನಿಂದ ೨೮ ಮತ್ತು ರಾಯಚೂರು ತಾಲೂಕಿನಿಂದ ೮೮ ಸೇರಿದಂತೆ ಜೂನ್ ೨೬ ರ ಶುಕ್ರವಾರ ೨೭೭ ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-೧೯ ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-೧೯ ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ ೨೬೨ ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿಂದು ೧೪ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ ೨೧,೭೧೬ ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ ೧೯,೯೨೬ ವರದಿಗಳು ನೆಗೆಟಿವ್ ಆಗಿವೆ. ಉಳಿದ ೧,೩೨೭ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.
ಫಿವರ್ ಕ್ಲಿನಿಕ್‌ಗಳಲ್ಲಿಂದು ೪೮೯ ಜನರನ್ನು ಥರ್ಮಲ್ ಸ್ಕಿçÃನಿಂಗ್‌ಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇದೂವರೆಗೆ ಒಟ್ಟಾರೆ ಕೋವಿಡ್-೧೯ನ ೪೫೭ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ದೃಢಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದ್ದವರ ಪೈಕಿ ಒಟ್ಟು ೩೯೯ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೧೧೮, ಸಿಂಧನೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೧೪, ಮಾನವಿ ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೨೨ ಹಾಗೂ ಲಿಂಗಸೂಗೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೨೧ ಜನರು ಸೇರಿದಂತೆ ಒಟ್ಟು ೧೭೫ ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ. ಕೋವಿಡ್-೧೯ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿವಿಧ ಪೊಲೀಸ್ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ರಾಯಚೂರು,ಜೂ.೨೬.(ಕ.ವಾ)- ೨೦೧೯-೨೦ ಹಾಗೂ ೨೦೨೦-೨೧ ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಆಹ್ವಾನಿಸಲಾಗಿದ್ದ ಅರ್ಜಿ ದಿನಾಂಕವನ್ನು ಮುಂದೂಡಲಾಗಿದೆ.
ಪ್ರಸ್ತುತ ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ಅರ್ಜಿ ಕರೆಯಲಾಗಿದ್ದ ಆರ್‌ಎಸ್‌ಐ (ಸಿಎಆರ್, ಡಿಎಆರ್) ಹುದ್ದೆಗೆ ಅರ್ಜಿ ಸಲ್ಲಿಸಲು ೨೦೨೦ ಜೂನ್ ೨೬ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿಸಲು ಜೂ.೩೦ ಅಂತಿಮ ದಿನವೆಂದು ನಿಗದಿಪಡಿಸಲಾಗಿತ್ತು. ಇದೀಗ ಅದನ್ನು ಮುಂದೂಡಿ ಅರ್ಜಿ ಸಲ್ಲಿಸಲು ಜುಲೈ ೧೬ ಮತ್ತು ಶುಲ್ಕ ಪಾವತಿಸಲು ಜುಲೈ ೧೮ಕ್ಕೆ ನಿಗದಿಪಡಿಸಲಾಗಿದೆ.
ಸ್ಪೆ.ಆರ್.ಎಸ್.ಐ (ಕೆ.ಎಸ್.ಆರ್.ಪಿ) ಹುದ್ದೆಗೆ ಅರ್ಜಿ ಸಲ್ಲಿಸಲು ೨೦೨೦ ಜೂನ್ ೨೬ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿಸಲು ಜೂ.೩೦ ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದ್ದು, ಅದನ್ನು ಮುಂದೂಡಿ ಅರ್ಜಿ ಸಲ್ಲಿಸಲು ಜುಲೈ ೧೮ ಮತ್ತು ಶುಲ್ಕ ಪಾವತಿಸಲು ಜುಲೈ ೨೧ಕ್ಕೆ ನಿಗದಿಪಡಿಸಲಾಗಿದೆ.
ಎಸ್.ಐ (ಕೆ.ಎಸ್.ಐ.ಎಸ್.ಎಫ್) ಹುದ್ದೆಗೆ ಅರ್ಜಿ ಸಲ್ಲಿಸಲು ೨೦೨೦ ಜೂನ್ ೨೬ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿಸಲು ಜೂ.೩೦ ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದ್ದು, ಅದನ್ನು ಮುಂದೂಡಿ ಅರ್ಜಿ ಸಲ್ಲಿಸಲು ಜುಲೈ ೧೮ ಮತ್ತು ಶುಲ್ಕ ಪಾವತಿಸಲು ಜುಲೈ ೨೧ಕ್ಕೆ ನಿಗದಿಪಡಿಸಲಾಗಿದೆ.
ಪಿಎಸ್‌ಐ (ವೈರ್‌ಲೆಸ್) ಹುದ್ದೆಗೆ ಅರ್ಜಿ ಸಲ್ಲಿಸಲು ೨೦೨೦ ಜೂನ್ ೨೬ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿಸಲು ಜೂ.೩೦ ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದ್ದು, ಅದನ್ನು ಮುಂದೂಡಿ ಅರ್ಜಿ ಸಲ್ಲಿಸಲು ಜುಲೈ ೧೮ ಮತ್ತು ಶುಲ್ಕ ಪಾವತಿಸಲು ಜುಲೈ ೨೧ಕ್ಕೆ ನಿಗದಿಪಡಿಸಲಾಗಿದೆ ಎಂದು ರಾಯಚೂರು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹವಾಮಾನ ಅಧಾರಿತ ಬೆಳೆ ವಿಮೆ ಯೋಜನೆಯಡಿ ಅರ್ಜಿ ಆಹ್ವಾನ
ರಾಯಚೂರು,ಜೂ.೨೬.(ಕ.ವಾ)- ಹವಾಮಾನ ಅಧಾರಿತ ಬೆಳೆ ವಿಮೆ (ಖ-WಃಅIS) ಯೋಜನೆಯಡಿ ೨೦೨೦ ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಹಸಿ ಮೆಣಸಿನಕಾಯಿ (ನೀರಾವರಿ) ಮತ್ತು ದಾಳಿಂಬೆ ಬೆಳೆಗಳನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಗ್ರಾಮ ಪಂಚಾಯತ್ ವಿಮೆಯ ಪ್ರದೇಶ (Iಟಿsuಡಿಚಿಟಿಛಿe Uಟಿiಣ) ಆಗಿರುತ್ತದೆ. ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟರ್ ವಿಮೆ ಮೊತ್ತ ೭೧,೦೦೦ ರೂ.ಗಳಿದ್ದು, ರೈತರು ಸಬ್ಸಿಡಿ ದರದಲ್ಲಿ ಪಾವತಿಸಬೇಕಾಗಿರುವ ವಿಮಾ ಕಂತಿನ ಮೊತ್ತ ೩,೫೫೦ ರೂ. ಗಳಿರುತ್ತದೆ. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟರ್ ವಿಮಾ ಮೊತ್ತ ೧,೨೭,೦೦೦ ರೂ. ಗಳಿದ್ದು ರೈತರು ಭರಿಸ ಬೇಕಾಗಿರುವ ವಿಮಾ ಕಂತಿನ ಮೊತ್ತ ೬,೩೫೦ ರೂ.ಗಳು ಪ್ರತಿ ಹೆಕ್ಟರ್‌ಗೆ ಇರುತ್ತದೆ. ಹೆಚ್ಚುವರಿ ವಿಮಾ ಮೊತ್ತವನ್ನು ಸರ್ಕಾರದಿಂದ ಭರಿಸಲಾಗುವುದು.
ಈ ಯೋಜನೆಯಲ್ಲಿ ಒಳಪಡುವ ಬೆಳೆಗಳಿಗೆ ಬೆಳೆ ಸಾಲ ಪಡೆದಿರುವ ರೈತರು ಕಡ್ಡಾಯವಾಗಿ ವಿಮೆಗೆ ಒಳಪಡುತ್ತಾರೆ. ಬೆಳೆ ಸಾಲ ಪಡೆಯದಿದ್ದ ರೈತರು ಸ್ವಂತ ಇಚ್ಚೆಯಿಂದ ಬೆಳೆ ವಿಮೆ ಮಾಡಿಸಬೇಕಿರುತ್ತದೆ. ಬೆಳೆ ವಿಮೆ ಮಾಡಿಸಲು ಪೂರಕ ದಾಖಲಾತಿಗಳಾದ ಪಹಣಿ, ಬ್ಯಾಂಕ್ ಖಾತೆ ಪಾಸ್‌ಬುಕ್, ಆಧಾರ್ ಸಂಖ್ಯೆ ಮತ್ತು ಸ್ವಯಂ ಘೋಷಣೆ ಬೆಳೆ ದಾಖಲಾತಿಗಳೊಂದಿಗೆ ಬ್ಯಾಂಕಗಳಿಗೆ ೨೦೨೦ ಜೂನ್ ೩೦ ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಯಚೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ೦೮೫೩೧-೨೨೫೨೫೩, ಮಾನವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ೦೮೫೩೮-೨೨೦೩೦೫, ಸಿಂಧನೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ೦೮೫೩೫-೨೨೩೫೪೫, ಲಿಂಗಸೂಗೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ೦೮೫೩೭-೨೫೭೪೦೨, ದೇವದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ೦೮೫೩೧-೨೬೦೦೦೬ ಹಾಗೂ ಸಂಬAಧಪಟ್ಟ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಾ ತೋಟಗಾರಿಕೆ ಕಚೇರಿಗೆ ಭೇಟಿ ನೀಡಬಹುದು ಅಥವಾ ಸಮೀಪದ ಬ್ಯಾಂಕ್ ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸ