ಮದುವೆಗೆ 50 ಕ್ಕೂ ಹೆಚ್ಚು ಜನ ಸೇರಿದರೆ ಕಾನೂನು ಕ್ರಮ; ರಾತ್ರಿ 8 ರ ನಂತರ ಕಪ್ರ್ಯೂ ಬಿಗಿಗೊಳಿಸಲು ಜಿಲ್ಲಾಧಿಕಾರಿ ಆದೇಶ
ಧಾರವಾಡ (ಕರ್ನಾಟಕ ವಾರ್ತೆ) ಜುಲೈ 03: ಕೋವಿಡ್-19 ಕೋರೊನಾ ವೈರಾಣು ಸಮಾಜದಲ್ಲಿ ಹರಡದಂತೆ ಮುಂಜಾಗೃತೆ ವಹಿಸಲು ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ನೀಡಿದ್ದು, ಜಲ್ಲೆಯಲ್ಲಿ ಈ ಕುರಿತು ವ್ಯಾಪಕ ಪ್ರಚಾರ, ತಿಳುವಳಿಕೆ, ಜಾಗೃತಿ ಮೂಡಿಸಿದರೂ ಕೇಲವು ಕಡೆ 50 ಜನ ಮಾತ್ರ ಇರುವ ನಿಯಮ ಮೀರಿ ಹೆಚ್ಚು ಜನ ಸೇರುತ್ತಿರುವುದು ಕಂಡು ಬರುತ್ತಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಪಡೆ ಹಾಗೂ ತಹಸಿಲ್ದಾರಗಳ ಸಭೆ ಜರುಗಿಸಿ, ಮಾತನಾಡಿದರು.
ಮದುವೆ ಕಾರ್ಯಕ್ರಮಗಳಲ್ಲಿ ಅತಿ ಜನ ಸೇರುವುದು, ಸಾಮಾಜಿಕ ಅಂತರ ಕಾಪಾಡದಿರುವುದು, ಸೆನಟೈಜರ್, ಮಾಸ್ಕ್ ಬಳಸದಿರುವುದು ಕಂಡು ಬಂದರೆ ಸಂಘಟಕರ ಮೇಲೆ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಸಂಬಂದಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.
ಮಾರ್ಗಸೂಚಿಗಳನ್ನು ಪಾಲಿಸದೆ 50 ಕ್ಕಿಂತ ಹೆಚ್ಚು ಜನ ಸೇರಿದರೆ ಸಾರ್ವಜನಿಕರು ಸಹ ಜಿಲ್ಲಾಡಿಳಿತದ ಸಹಾಯವಾಣಿಗೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರ ಗೌಪ್ಯವಾಗಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾತ್ರಿ ಕಪ್ರ್ಯೂ ಬಿಗಿಗೊಳಿಸಿ: ಸರಕಾರದ ಆದೇಶದಂತೆ ಪ್ರತಿದಿನ ರಾತ್ರಿ 8 ಗಂಟೆ ಯಿಂದ ಬೆಳಗಿನ 5 ಗಂಟೆವರೆಗೆ ರಾತ್ರಿ ಕಪ್ರ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೂ ಅನಗತ್ಯವಾಗಿ ಮತ್ತು ಖಾಸಗಿ ವಾಹನಗಳಲ್ಲಿ ಜನ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.
ಕಪ್ರ್ಯೂ ಆದೇಶವನ್ನು ಪೆÇಲೀಸ್ ಇಲಾಖೆ ಮತ್ತು ಸಂಬಂದಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಪ್ರ್ಯೂ ಆದೇಶ ಉಲ್ಲಂಘಿಸಿ ಸಂಚರಿಸುವ, ಗುಂಪು ಸೇರುವ ಜನರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕಪ್ರ್ಯೂ ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಿ ಸಂಬಂದಿಸಿದ ಅಧಿಕಾರಿಗಳು ವರದಿ ನೀಡಬೇಕಬೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು
ಮಾಸ್ಕ್ ಹಾಕದ್ 15 ಸಾವಿರ ಜನರಿಗೆ ಪಾಲಿಕೆ ಅಧಿಕಾರಿಗಳಿಂದ 3 ಲಕ್ಷ ದಂಡ ವಸೂಲು: ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುವ, ವಾಹನಗಳಲ್ಲಿ ಸಂಚರಿವ ಸಾರ್ವಜನಿಕರಿಗೆ ಪಾಲಿಕೆ ಅಧಿಕಾರಿಗಳು ದಂಡ್ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊರೊಣಾ ನಿಯಂತ್ರಣದ ಮಾರ್ಗಸೂಚಿಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಜುಲೈ 3 ರ ವರೆಗೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 1543 ಜನರಿಂದ ಸುಮಾರು ರೂ. 308600 ಗಳನ್ನು ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದಿನಕರ, ಕಿಮ್ಸ್‍ನ ಡಾ: ಲಕ್ಷ್ಮೀಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಎಸ್.ಕೆ. ಮಾನಕರ, ಡಾ: ಸುಜಾತಾ ಹಸವೀಮಠ, ಡಾ: ಶಶಿ ಪಾಟೀಲ, ಡಾ: ಎಸ್.ಎಂ. ಹೊನಕೇರಿ, ಡಾ: ತನುಜಾ, ಡಾ: ಶಶಿಕಲಾ ನಿಂಬಣ್ಣವರ ಮತ್ತು ತಹಶಿಲ್ದಾರರಾದ ಡಾ.ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವಿನ ಹುಲ್ಲೂರ, ಅಶೋಕ ಶಿಗ್ಗಾಂವಿ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.00000000೦0
2020-21ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯಪ್ರಶಸ್ತಿಗೆ
ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ
ಧಾರವಾಡ (ಕರ್ನಾಟಕ ವಾರ್ತೆ) ಜುಲೈ 03: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2020-21 ನೇ ಸಾಲಿಗೆ 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ, ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ ಪ್ರಶಸ್ತಿ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ ಪ್ರಶಸ್ತಿ” ನೀಡಲು ಯೋಜನೆಯನ್ನು ಸರ್ಕಾರವು ಅನುಷ್ಠಾನಗೊಳಿಸಿದೆ.
ಪ್ರಶಸ್ತಿಗಳಿಗೆ ಅರ್ಜಿಯನ್ನು ಆಗಸ್ಟ್ 31, 2020 ರೊಳಗೆ ಸಲ್ಲಿಸಬೇಕು. ಪ್ರಕರಣವು ಅಗಸ್ಟ್-2019 ರಿಂದ ಜುಲೈ-2020ರ ಒಳಗೆ ನಡೆದಿರಬೇಕು. ಧೈರ್ಯ ಸಾಹಸ ಪ್ರದರ್ಶಿಸಿದ ಮಗುವಿಗೆ ರೂ.10,000/- ನಗದು ಹಾಗೂ ಪ್ರಶಸ್ತಿ ಪತ್ರ ಅಲ್ಲದೇ ಶಾಲಾ ಶಿಕ್ಷಣ ಪೂರ್ಣವಾಗುವ ವರೆಗೆ ಪ್ರತಿ ವರ್ಷ ರೂ.2,000/-ಗಳ ಆರ್ಥಿಕ ನೆರವು ನೀಡಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳಿಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ, ಡಿ.ಸಿ. ಕಂಪೌಂಡ್, ಧಾರವಾಡ., ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರ ಧಾರವಾಡ ಜಿಲ್ಲಾ ಪ್ರವಾಸ
ಧಾರವಾಡ (ಕರ್ನಾಟಕ ವಾರ್ತೆ) ಜುಲೈ 03: ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಬಿ. ಚವ್ಹಾಣ್ ಇವರು ಜುಲೈ 7 ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸಚಿವರು ಜುಲೈ 6 ರಂದು ಸಂಜೆ 5-30 ಗಂಟೆಗೆ ರಸ್ತೆ ಮೂಲಕ ಧಾರವಾಡಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಜುಲೈ 7 ರಂದು ಬೆಳಿಗ್ಗೆ 9-30 ಗಂಟೆಗೆ ಧಾರವಾಡ ಹಾಲು ಒಕ್ಕೂಡ ಮಂಡಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆಳಿಗ್ಗೆ 10-30 ಗಂಟೆಗೆ ಧಾರವಾಡ ಬಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಧಾರವಾಡ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಧಾರವಾಡ ಪಶುಸಂಗೋಪನೆ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ನಂತರ ಮಧ್ಯಾಹ್ನ 1 ಗಂಟೆಗೆ ರಸ್ತೆ ಮೂಲಕ ಹಾವೇರಿಗೆ ಪ್ರಯಾಣ ಮಾಡುವರು ಎಂದು ಸಚಿವರ ಆಪ್ತಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 5 ರಂದು ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಧಾರವಾಡ (ಕರ್ನಾಟಕ ವಾರ್ತೆ) ಜುಲೈ 03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಜುಲೈ 5 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಶ್ರೀ ಹಡಪದ ಅಪ್ಪಣ್ಣವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಅತ್ಯಂತ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.000000000
ಚಲನಚಿತ್ರರಂಗದ ಅಕಾಡೆಮಿಕ್ ತರಬೇತಿ
ಅಧ್ಯಯನಕ್ಕೆ ಕೋರ್ಸುಗಳ ಯೋಜನೆ- ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್
ಧಾರವಾಡ (ಕರ್ನಾಟಕ ವಾರ್ತೆ) ಜುಲೈ 03: ಕನ್ನಡ ಚಲನಚಿತ್ರ ರಂಗದ ಆಸಕ್ತರಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರದ ಗುಣಮಟ್ಟ, ನಟನೆ, ಸಂಕಲನ, ನಿರ್ಮಾಣ ಮತ್ತಿತರ ವಿಷಯಗಳ ಕುರಿತ ಅಧ್ಯಯನ ಪೂರ್ಣವಾದ ಅಕಾಡೆಮಿಕ್ ಕೋರ್ಸುಗಳು, ಕಾರ್ಯಾಗಾರಗಳನ್ನು ರೂಪಿಸಲಾಗುತ್ತಿದೆ. ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದರು.
ನಗರದ ಓಸ್ವಾಲ್ ಟವರ್‍ನ ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ಚಲನಚಿತ್ರ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಆಹಾರಧಾನ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಚಲನಚಿತ್ರ ಅಕಾಡೆಮಿಯ ಚಟುವಟಿಕೆಗಳನ್ನು ರಾಜ್ಯದ ಎಲ್ಲಾ ಭಾಗಗಳಿಗೆ ವಿಸ್ತರಿಸಲಾಗುವುದು. ಉತ್ತರ ಕರ್ನಾಟಕವು ಸಂಸ್ಕøತಿ, ಪರಂಪರೆ, ವೈವಿಧ್ಯಮಯ ಕಲಾಪ್ರಕಾರಗಳಲ್ಲಿ ಶ್ರೀಮಂತವಾಗಿದೆ. ಕೊರೊನಾ ಲಾಕ್‍ಡೌನ್ ಕಾರಣದಿಂದ ಚಲನಚಿತ್ರ ರಂಗವೂ ಸೇರಿದಂತೆ ಹಲವು ರಂಗಗಳು ತೀವ್ರ ಸಂಕಷ್ಟದಲ್ಲಿವೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿಯ ಕ್ಷೇಮಾಭಿವೃದ್ಧಿ ನಿಧಿ ಮೂಲಕ ಸಂಕಷ್ಟದಲ್ಲಿದ್ದ ಸುಮಾರು 600 ಕಲಾವಿದರಿಗೆ ನೆರವು ನೀಡಲಾಗಿತ್ತು. ಬೆಂಗಳೂರಿನಿಂದ ಹೊರಗಡೆ ಇರುವ ಧಾರವಾಡ, ಬೆಳಗಾವಿ ಜಿಲ್ಲೆಗಳು ಸೇರಿದಂತೆ ವಿವಿಧ ಭಾಗಗಳ ಕಲಾವಿದರಿಗೆ ಆಹಾರ ನಾಗರಿಕ ಇಲಾಖೆಯ ನೆರವು ಮತ್ತು ಸ್ಥಳೀಯ ಸಂಪನ್ಮೂಲ ಕ್ರೋಢೀಕರಿಸಿ ದಿನಸಿ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೊಂದು ಸಣ್ಣ ಸಹಾಯವಾಗಿದೆ. ಕಲಾವಿದರ ಭದ್ರತೆ, ಮಾಸಾಶನ, ವೈದ್ಯಕೀಯ ಸೌಲಭ್ಯ ಮತ್ತಿತರ ಸೌಕರ್ಯಗಳಿಗೆ ಅಕಾಡೆಮಿಯು ಕ್ರಿಯಾ ಯೋಜನೆ ರೂಪಿಸುತ್ತಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮಹಾನಗರಪಾಲಿಕೆ ಮಾಜಿ ಸದಸ್ಯ ವಿಜಯಾನಂದಶೆಟ್ಟಿ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ಸದಸ್ಯ ಶ್ರೀನಿವಾಸ ಶಾಸ್ತ್ರಿ ಮಾತನಾಡಿದರು. ಮಂಜುನಾಥ ಹಗೇದಾರ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮಕರಣಗೊಂಡಿರುವ ಶ್ರೀನಿವಾಸ ಶಾಸ್ತ್ರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.000000000
ಬೆಳೆ ವಿಮೆ ಯೋಜನೆಯಡಿ ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕ
ಕೋಲಾರ, ಜುಲೈ 03 (ಕರ್ನಾಟಕ ವಾರ್ತೆ): ನಂ. 144-309
2020-21 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಟೊಮ್ಯಾಟೋ ಬೆಳೆ ಪ್ರತಿ ಹೆಕ್ಟೇರ್ ಗೆ. 1,18,000 ರೂ ಗಳ ವಿಮೆ ಸೌಲಭ್ಯವಿದ್ದು, ಶೇ. 5 ರಂತೆ 5,900 ರೂಗಳ ವಿಮಾ ಕಂತು ಮತ್ತು ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಮಾವು ಬೆಳೆ ಪ್ರತಿ ಹೆಕ್ಟೇರ್ ಗೆ 80,000 ರೂ. ಗಳ ವಿಮೆ ಸೌಲಭ್ಯವಿದ್ದು, ಶೇ. 5 ರ 4,000 ರೂಗಳ ವಿಮಾ ಕಂತನ್ನು ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.
ಕೋಲಾರ ಜಿಲ್ಲೆಗೆ HDFC ERGO General Insurance Company ಯನ್ನು ಗುರುತಿಸಲಾಗಿದ್ದು, ರೈತರು ಟೊಮ್ಯಾಟೋ ಮತ್ತು ಮಾವು ಬೆಳೆಗೆ ವಿಮೆ ಸೌಲಭ್ಯ ಪಡೆಯಬಹುದು. ಬೆಳೆ ಸಾಲ ಪಡೆದ ರೈತರು ಬ್ಯಾಂಕಿನ ಸಾಲದೊಂದಿಗೆ ಈ ಯೋಜನೆಗೆ ಒಳಪಡಿಸಲಾಗುವುದು ಸಾಲ ಪಡೆದ ರೈತರು ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ವಿಮೆ ನೋಂದಣಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೋಲಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದೆಂದು ಹಿರಿಯ ಸಹಾಕಯ ತೋಟಗಾರಿಕೆ ನಿರ್ದೇಶಕರಾದ,(ಜಿಪಂ) ಮಂಜುಳ.ಪಿ ಅವರು ತಿಳಿಸಿದ್ದಾರೆ00000000.
ಭಾನುವಾರವು ಸಹ ಯಥಾ ಪ್ರಕಾರ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು
ಕೋಲಾರ, ಜುಲೈ 03 (ಕರ್ನಾಟಕ ವಾರ್ತೆ): ನಂ. 143-308
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಟೊಮೊಟೊ ಮತ್ತು ತರಕಾರಿ ಉತ್ಪನ್ನಗಳು ಅಗತ್ಯ ವಸ್ತುಗಳಾಗಿರುವುದರಿಂದ ಭಾನುವಾರದಂದು ಕೃಷಿ ಉತ್ಪನ್ನ ಮಾರುಕಟ್ಟೆ ಕೋಲಾರ ಪ್ರಾಂಗಣ ಲಾಕ್‍ಡೌನ್ ಇರುವುದಿಲ್ಲ. ಮಾರುಕಟ್ಟೆಯು ಯಥಾ ಪ್ರಕಾರ ನಡೆಯುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಕೆ.ಮಂಜುನಾಥ್ ಅವರು ತಿಳಿಸಿದ್ದಾರೆ.
ಷರತ್ತುಗಳು: ಅಂದು ರೈತರು ಮಾರುಕಟ್ಟೆಗೆ ಬರಬಾರದು, ಉತ್ಪನ್ನಗಳನ್ನು ಮಾತ್ರ ಮಾರುಕಟ್ಟೆಗೆ ಕಳುಹಿಸುವುದು. ಮಾರುಕಟ್ಟೆಯಲ್ಲಿ ಅನಾವಶ್ಯಕವಾಗಿ ಯಾರು ಸಂಚರಿಸಬಾರದು. ದ್ವಿಚಕ್ರ ವಾಹನಗಳ ಪ್ರವೇಶವನ್ನು ಮಾರುಕಟ್ಟೆ ಒಳಗೆ ಕಡ್ಡಾಯವಾಗಿ ನಿಷೇಧಿಸಿದೆ. ವಾಹನ ಚಾಲಕರು, ಕೂಲಿ ಕಾರ್ಮಿಕರು, ಪೇಟೆ ಕಾರ್ಯಕರ್ತರು ಭಾನುವಾರದಂದು ವ್ಯಾಪಾರ ವಹಿವಾಟಿನ ಸಂಬಂಧ ಮಾತ್ರ ಮಾರುಕಟ್ಟೆಗೆ ಬರಬಹುದಾಗಿರುತ್ತದೆ. ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುಬೇಕು ಎಂದು ಅವರು ತಿಳಿಸಿದ್ದಾರೆ.000000000
ಎಸ್.ಎಸ್.ಎಲ್.ಸಿ. ಪರೀಕ್ಷೆ ಯಶಸ್ವಿಗೆ ಸಹಕರಿದವರಿಗೆ ಡಿಡಿಪಿಐ ಅಭಿನಂದನೆ
ಹಾವೇರಿ: ಜು.03(ಕರ್ನಾಟಕ ವಾರ್ತೆ): ಕೋವಿಡ್ ಆತಂಕದ ನಡುವೆಯೂ ಯಾವುದೇ ಸಮಸ್ಯೆಯಾಗದಂತೆ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಜಿಲ್ಲೆಯ ಎಲ್ಲ ಅಧಿಕಾರಿಗಳು, ಮಾಧ್ಯಮಗಳಿಗೂ ಹಾಗೂ ಪಾಲಕರಿಗೂ, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ಕೃಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಆಯುಕ್ತರು, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳು, ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ, ಖಜಾನೆ ಇಲಾಖೆ, ಸಾರಿಗೆ ಇಲಾಖೆ, ಪುರಸಭೆ, ಆಶಾ ಕಾರ್ಯಕರ್ತೆಯರು, ಸ್ಕೌಟ್ ಆಂಡ್ ಗೈಡ್ಸ್, ಸಿಆರ್‍ಪಿ, ಬಿ.ಆರ್.ಪಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಮಾಧ್ಯಮದವರು, ಸೇರಿದಂತೆ ಎಲ್ಲ ಸ್ಥರದ ಅಧಿಕಾರಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಯಶಸ್ವಿಗೆ ಸಹಕರಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.00000
ಭಾನುವಾರದ ಕಫ್ರ್ಯೂ ಕಠಿಣವಾಗಿ ಪಾಲಿಸಿ- ಸಂತೆ,ಧಾರ್ಮಿಕ ಸಮಾರಂಭಕ್ಕೆ ಅವಕಾಶವಿಲ್ಲ
ಮಾಸ್ಕ್ ಧರಿಸದಿದ್ದರೆ ದಂಡ ಹಾಕಲು ಡಿಸಿ ಸೂಚನೆ
ಹಾವೇರಿ: ಜು.03(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲೆಯಲ್ಲಿ ಕಫ್ರ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಎಲ್ಲ ತಾಲೂಕಾ ಆಡಳಿತಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ತಹಶೀಲ್ದಾರಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು ಪ್ರತಿದಿನ ಸಂಜೆ 8 ರಿಂದ ಬೆಳಿಗ್ಗೆ 5 ಗಂಟೆವರೆಗೆ ಹಾಗೂ ಭಾನುವಾರದ ಪೂರ್ಣ ಕಫ್ರ್ಯೂವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಕಫ್ರ್ಯೂ ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುವವರಿಗೆ ದಂಡವಿಧಿಸುವಂತೆ ಸೂಚನೆ ನೀಡಿದರು.
ಸಂತೆ, ಧಾರ್ಮಿಕ ಸಮಾರಂಭಗಳಿಗೆ ಅವಕಾಶ ನೀಡಬೇಡಿ. ನಿಯಮದಂತೆ ಮದುವೆಗೆ ಅನುಮತಿ ಪಡೆದು 50 ಜನರು ಮಾತ್ರ ಭಾಗವಹಿಸಬೇಕು. ಮದುವೆಯಲ್ಲಿ ಭಾಗವಹಿಸಿದವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಮಾಹಿತಿ ನೀಡಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಹಾಗೂ ವಿವಾಹ ಕಾರ್ಯಕ್ರಮ, ಶವ ಸಂಸ್ಕಾರದಲ್ಲಿ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿವಾಹಕ್ಕೆ ಅನುಮತಿ ಕೋರಿ ತಹಶೀಲ್ದಾರಗೆ ಅರ್ಜಿ ಸಲ್ಲಿಸುವಾಗ ಮುಚ್ಚಳಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. 50 ಜನಕ್ಕಿಂತ ಹೆಚ್ಚು ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಬಾರದು ಹಾಗೂ ಹೊರ ಜಿಲ್ಲೆಗಳಲ್ಲಿ ವಿವಾಹ ಕಾರ್ಯಕ್ರಮಕ್ಕೆ ಹೋಗಿಬಂದವರು ಕಡ್ಡಾಯವಾಗಿ ತಾಲೂಕಾ ಆಡಳಿತಕ್ಕೆ ಮಾಹಿತಿ ನೀಡಬೇಕು. ಭಾನುವಾರ ಕಫ್ರ್ಯೂ ದಿನ ಮದುವೆಗೆ ಅವಕಾಶವಿರುವುದಿಲ್ಲ. ಈಗಾಗಲೇ ನಿಗಧಿಯಾಗಿದ್ದರೆ ಷರತ್ತಿನನ್ವಯ ಅನುಮತಿ ನೀಡಬೇಕು ಎಂದು ತಿಳಿಸಿದರು.
ಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಕನಿಷ್ಟ 06 ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ಐದಕ್ಕಿಂತ ಹೆಚ್ಚಿನ ಜನತೆ ನಿಲ್ಲದಂತೆ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ರಾತ್ರಿ ಕಫ್ಯೂ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 30ರ ಮಧ್ಯರಾತ್ರಿಯಿಂದ ದಿನಾಂಕ 02-08-2020ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಈ ಕಫ್ರ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕುರಿತಂತೆ ಎಲ್ಲ ತಹಶೀಲ್ದಾರಗಳು ಅಂಗಡಿ ಮಾಲೀಕರನ್ನು ಕರೆದು ಮಾತನಾಡಬೇಕು. ಸೋಮವಾರದಿಂದ ಎಂಟು ಗಂಟೆಯೊಳಗಾಗಿ ಎಲ್ಲ ಅಂಗಡಿಗಳು ಬಂದಾಗಬೇಕು. ಭಾನುವಾರ ಹಾಲು, ಔಷಧಿ, ತರಕಾರಿ ಹೊರತು ಎಲ್ಲ ಅಂಗಡಿಗಳು ಬಂದಾಗಬೇಕು. ತರಕಾರಿ ಮಾರಾಟಕ್ಕೆ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸೂಚನೆ ನೀಡಿದರು.
ರಾಜ್ಯ ಸರ್ಕಾರದ ತುರ್ತು ಸೇವೆಗಳಲ್ಲಿ ತೊಡಗಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆ, ನಿಗಮ ಮಂಡಳಿಗಳು ಶನಿವಾರದ ದಿನ ಕಚೇರಿ ಆರಂಭ ಮಾಡದಂತೆ ಸೂಚನೆ ನೀಡಲಾಗಿದೆ. ಕಚೇರಿಯಲ್ಲಿ ಹೆಚ್ಚು ಜನ ಸೇರದಂತೆ ತಡೆಯಬೇಕು. ತ್ವರಿತವಾಗಿ ಜನರ ಕೆಲಸ ಮುಗಿಸಬೇಕು. ಅಗತ್ಯವಿದ್ದರೆ ಮಾತ್ರ ಜನರಿಗೆ ಟೋಕನ್ ವ್ಯವಸ್ಥೆ ನೀಡಿ ಸಂದರ್ಶನಕ್ಕೆ ಅವಕಾಶಕಲ್ಪಿಸಬೇಕು ಎಂದು ತಿಳಿಸಿದರು.
ಕಂಟೈನ್ಮೆಂಟ್ ಜೋನ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಸ್.ಓ.ಪಿ. ಪ್ರಕಾರ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸ್ವಚ್ಛತೆಗೆ ಅವಕಾಶ ಕಲ್ಪಿಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ಲಿನಿಕಲ್ ಸ್ವಚ್ಛತೆಗೆ ಹೆಚ್ಚಿನ ಅವಕಾಶ ನೀಡಬೇಕು. ಸರ್ಕಾರ ನಿಗಧಿಪಡಿಸಿದಂತೆ ಕೋವಿಡ್ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ ಮಾಡಬೇಕು. ಕಂಟೈನ್ಮೆಂಟ್ ಜೋನ್‍ಗಳಲ್ಲಿ ಉಚಿತ ಪಡಿತರ ಅವಶ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಹಾಗೂ ಐದು ಕೆ.ಜಿ. ಗೋಧಿಯಂತೆ ಉಚಿತವಾಗಿ ನೀಡಲಾಗುವುದು. ಈಗಾಗಲೇ ತಾಲೂಕಾ ಆಡಳಿತಕ್ಕೆ ಕೋವಿಡ್ ನಿರ್ವಹಣೆಗಾಗಿ 3.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಎರಡು ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಯಾವುದೇ ಕೊರತೆಯಾಗದಂತೆ ವ್ಯವಸ್ಥಿತವಾಗಿ ಸರ್ಕಾರದ ಮಾರ್ಗಸೂಚಿಯಂತೆ ನಿರ್ವಹಣೆಮಾಡಲು ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಮಾಸ್ಕ್ ಧರಿಸದೇ ಇರುವವರಿಗೆ ದಂಡ ಹಾಕಲು ವಿಶೇಷ ಅಭಿಯಾನ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಹಾವೇರಿ ತಹಶೀಲ್ದಾರ ಶಂಕರ್, ಹಾವೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗರಾಜ ಹಾಗೂ ವಿಡಿಯೋ ಸಂವಾದದ ಮೂಲಕ ಸವಣೂರ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಹಾಗೂ ಎಲ್ಲ ತಹಶೀಲ್ದಾರಗಳು ಭಾಗವಹಿಸಿದ್ದರು.
ಎಸ್.ಎಸ್.ಎಲ್.ಸಿ. ತೃತೀಯ ಭಾಷೆ ವಿಷಯಕ್ಕೆ 20,227 ವಿದ್ಯಾರ್ಥಿಗಳು ಹಾಜರ್
ಹಾವೇರಿ: ಜು.03(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಶುಕ್ರವಾರ ಜರುಗಿದ ಎಸ್.ಎಸ್.ಎಲ್.ಸಿ. ತೃತೀಯ ಭಾಷೆ ವಿಷಯದ ಪರೀಕ್ಷೆಗೆ 20,227 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ 20,400 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಈ ಪೈಕಿ 20,227 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 173 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಟೈನ್ಮೆಂಟ್ ವಲಯದ 283 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶಮಾಡಿಕೊಡಲಾಗಿತ್ತು. ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 7 ರಂದು ಜಿಲ್ಲೆಗೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್
ಹಾವೇರಿ: ಜು.03(ಕರ್ನಾಟಕ ವಾರ್ತೆ): ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಜುಲೈ 7 ರಂದು ಹಾವೇರಿಗೆ ಆಗಮಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು 3 ಗಂಟೆಗೆ ಹಾವೇರಿಗೆ ಆಗಮಿಸುವರು. ಮಧ್ಯಾಹ್ನ 3-15ಕ್ಕೆ ನಗರದ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪಶು ಸಂಗೋಪನಾ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರೆಂದು ಪ್ರಕಟಣೆ ತಿಳಿಸಿದೆ.
ಕ.ರಾ.ಮು.ವಿ.: ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿ ಆರಂಭ
ಕಲಬುರಗಿ.ಜು.03.(ಕ.ವಾ)-ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕೋವಿಡ್-19ರ ಹಿನ್ನೆಲೆಯಲ್ಲಿ ಕೆಳಕಂಡ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ತರಗತಿಗಳನ್ನು KSOU Connect platform ಮೂಲಕ ಆನ್‍ಲೈನ್ ಮೂಲಕ 2020ರ ಜುಲೈ 3 ರಿಂದ 14 ರವರೆಗೆ ನಡೆಸಲಾಗುತ್ತಿದೆ
ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶರಾದ ಡಾ.ಸಂಗಮೇಶ ಹಿರೇಮಠ ಅವರು ತಿಳಿಸಿದ್ದಾರೆ.
2018-19 ನೇ ಸಾಲಿನ ದ್ವಿತೀಯ ವರ್ಷದ ಬಿ.ಎ., ಬಿ.ಕಾಂ. ಮತ್ತು 2019-20 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಹಾಗೂ 2019-20 ಜನವರಿ ಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಲಿಬ್. ಐ.ಎಸ್ಸಿ, ಎಂ.ಎ., ಎಂ.ಕಾಂ., ಎಂ.ಎಸ್ಸಿ, ಎಂ.ಬಿ.ಎ., ಎಂ.ಲಿಬ್ ಐ.ಎಸ್ಸಿ., ಬಿ.ಎಡ್. ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.
ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಆನ್‍ಲೈನ್ ಮೂಲಕ ಇ-ಡಿಜಿಟಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಕಲಬರುಗಿ ಪ್ರಾದೇಶಿಕ ಕೇಂದ್ರದ ಕಚೇರಿ ದೂರವಾಣಿ ಸಂಖ್ಯೆ 08472-265868 ಅಥವಾ ಪ್ರಾದೇಶಿಕ ನಿರ್ದೇಶಕ ಡಾ.ಸಂಗಮೇಶ ಹಿರೇಮಠ ಅವರ ದೂರವಾಣಿ ಸಂಖ್ಯೆ 9916783555ಗೆ ಸಂಪರ್ಕಿಸಲು ಕೋರಿದೆ.
20 ವರ್ಷದ ನಂತರ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಿದ ಸಿಸಿಐ
ಜಿಲ್ಲೆಯ ರೈತರಿಂದ 88.04 ಕೋಟಿ ರೂ. ಮೌಲ್ಯದ ಹತ್ತಿ ಖರೀದಿ
ಕಲಬುರಗಿ.ಜು.03.(ಕರ್ನಾಟಕ ವಾರ್ತೆ)-ಕಲಬುರಗಿ ಜಿಲ್ಲೆಯ ಹತ್ತಿ ಬೆಳೆಗಾರರಲ್ಲಿ ಮೊಗದಲ್ಲಿ ಹರ್ಷದ ಹೊನಲು ಹರಿದಿದೆ. 20 ವರ್ಷಗಳ ನಂತರ ಕಲಬುರಗಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಬೆಳೆದ ರೈತರಿಂದ ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹತ್ತಿಯನ್ನು ಖರೀದಿಸಿದೆ.
2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 5962 ಬೆಳೆಗಾರರಿಂದ ಒಟ್ಟು 88.04 ಕೋಟಿ ರೂಪಾಯಿ ಮೌಲ್ಯದ ಹತ್ತಿಯನ್ನು ಖರೀದಿಸಿದೆ. ಕಲಬುರಗಿ ತಾಲೂಕಿನ ಗಜಾನನ ಮಹಾರಾಜ ಹತ್ತಿ ಮಿಲ್ ಹಾಗೂ ಜೇವರ್ಗಿ ತಾಲೂಕಿನಲ್ಲಿ ಮಂಜೀತ್ ಕಾಟನ್ ಮಿಲ್‍ಗಳನ್ನು ಹತ್ತಿ ಖರೀದಿ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡು ಭಾರತೀಯ ಹತ್ತಿ ನಿಗಮ ನಿಯಮಿತ ಹತ್ತಿ ಖರೀದಿಸಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳಾದ ಶೈಲಜಾ ಎಂ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ತಾಲೂಕಿನ ಗಜಾನನ ಮಹಾರಾಜ ಹತ್ತಿ ಮಿಲ್ ಹಾಗೂ ಜೇವರ್ಗಿ ತಾಲೂಕಿನಲ್ಲಿ ಮಂಜೀತ್ ಕಾಟನ್ ಮಿಲ್‍ಗಳನ್ನು ಹತ್ತಿ ಖರೀದಿ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡು ಭಾರತೀಯ ಹತ್ತಿ ನಿಗಮ ನಿಯಮಿತ ಹತ್ತಿ ಖರೀದಿಸಿದೆ.
ಕಲಬುರಗಿ ಸಮೀಪದ ನಂದಿಕೂರನಲ್ಲಿರುವ ಗಜಾನನ ಮಹಾರಾಜ ಹತ್ತಿ ಮಿಲ್, ಕಲಬುರಗಿ ಮತ್ತು ಸುತ್ತಮುತ್ತಲಿನ ತಾಲೂಕಿನ 1250 ರೈತರಿಂದ 20,07,44,964 ರೂ. ಗಳ ಮೌಲ್ಯದ ಒಟ್ಟು 37,425 ಕ್ವಿಂಟಲ್ ಹತ್ತಿಯನ್ನು ಖರೀದಿಸಿದೆ.
ಹಾಗೆಯೇ ಜೇವರ್ಗಿಯ ಮಂಜೀತ್ ಕಾಟನ್ ಮಿಲ್, ಜೇವರ್ಗಿ ಹಾಗೂ ಇನ್ನಿತರ ತಾಲೂಕಿನ 4712 ರೈತರಿಂದ 67,97,51,835 ರೂ.ಗಳ ಮೌಲ್ಯದ 1,28,913 ಕ್ವಿಂಟಲ್ ಹತ್ತಿಯನ್ನು ಖರೀದಿಸಿದೆ.
ಹತ್ತಿ ಖರೀದಿ ಪ್ರಮಾಣದಲ್ಲಿ ಯಾವುದೇ ಮಿತಿಯನ್ನು ನಿಗದಿಗೊಳಿಸದೇ ಗರಿಷ್ಠ ಪ್ರಮಾಣದಲ್ಲಿ ರೈತರಿಂದ ಹತ್ತಿಯನ್ನು ಖರೀದಿಸಿರುವುದು ಇದೇ ಮೊದಲಾಗಿದೆ. ಪ್ರತಿ ಕ್ವಿಂಟಲ್‍ಗೆ ಗುಣಮಟ್ಟದನುಸಾರ ಕನಿಷ್ಟ 5,005 ರೂ. ರಿಂದ ಗರಿಷ್ಟ 5,950 ರೂ.ಗಳ ವರೆಗೆ ಅನೇಕ ರೈತರಿಂದ ಹತ್ತಿಯನ್ನು ಖರೀದಿಸಲಾಗಿದೆ.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ರೈತರಿಂದ ನಿರಂತರವಾಗಿ ಹತ್ತಿ ಖರೀದಿ ಪ್ರಕ್ರಿಯೆ ಕೈಗೊಳ್ಳುವಲ್ಲಿ ಭಾರತೀಯ ಹತ್ತಿ ನಿಗಮ ನಿಯಮಿತ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ.
ಕಲಬುರಗಿ ಖರೀದಿ ಕೇಂದ್ರದ ಉಸ್ತುವಾರಿ ಭಾರತೀಯ ಹತ್ತಿ ನಿಗಮ ನಿಯಮಿತದ ಪ್ರಮೋದ ಹಾಗೂ ಇತರರು, ಜೇವರ್ಗಿ ಖರೀದಿ ಕೇಂದ್ರದ ಉಸ್ತುವಾರಿ ಭಾರತೀಯ ಹತ್ತಿ ನಿಗಮ ನಿಯಮಿತದ ಮಹೇಶ ಹಾಗೂ ಇತರರು ಖರೀದಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಪ್ರಕ್ರಿಯೆಗೆ ಕೈ ಜೊಡಿಸಿದ್ದಾರೆ.
ಜೇವರ್ಗಿ ಮಿಲ್ ಘಟಕದಲ್ಲಿ ಗರಿಷ್ಠ ಪ್ರಮಾಣದ ಹತ್ತಿ ಹಾಗೂ ಹತ್ತಿ ಬೀಜ ಶೇಖರಣೆಯಾಗಿರುವುದರಿಂದ ಅದನ್ನು ಕ್ರಮವಾಗಿ ಸಂಸ್ಕರಣಾ ಮತ್ತು ಟೆಂಡರ್ ಮೂಲಕ ವಿಲೇವಾರಿ ಮಾಡುವವರೆಗೂ ಜೇವರ್ಗಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಹತ್ತಿ ಖರೀದಿಯನ್ನು ನಿಲ್ಲಿಸಲಾಗಿದೆ. ಸ್ಥಳಾವಕಾಶವಾದ ನಂತರ ಖರೀದಿ ಪ್ರಕ್ರಿಯೆ ಪುನರಾರಂಭಿಸಲು ಕ್ರಮವಹಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಬಲ ಬೆಲೆ ಹೆಚ್ಚಳ: 2020-2021 ನೇ ಸಾಲಿಗೆ ಹತ್ತಿಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‍ಗೆ ರೂ. 250ಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಘೋಷಿಸಿದೆ ಎಂಬ ಮಾಹಿತಿ ಸಿಸಿಐ ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಲು ಮಸ್ಟರಿಂಗ್ ಸೆಂಟರ್ ಅವಧಿ ವಿಸ್ತರಣೆ
ಕಲಬುರಗಿ.ಜುಲೈ.02.(ಕ.ವಾ)-ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ಕೊರೋನಾ ವೈರಸ್ ಲಾಕ್‍ಡೌನ್‍ದಿಂದಾಗಿ ಕಲಬುರಗಿ ತಾಲೂಕಿನಲ್ಲಿ ಸಿಲುಕಿಕೊಂಡ ನೆರೆಯ ರಾಜ್ಯಗಳ ನಿವಾಸಿಗಳು ತಮ್ಮ ತವರು ರಾಜ್ಯಕ್ಕೆ ಹೋಗಲು ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿದ್ದ ಮಸ್ಟ್ರಿಂಗ್ ಕೇಂದ್ರದ ಕಾರ್ಯನಿರ್ವಹಣೆಯನ್ನು ಮುಂದಿನ ಅವಧಿಯವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ತಹಶೀಲ್ದಾರ ಮಲ್ಲೇಶ ತಂಗಾ ಅವರು ತಿಳಿಸಿದ್ದಾರೆ.
ಕಲಬುರಗಿ ತಾಲೂಕಿನಲ್ಲಿ ವಾಸವಾಗಿರುವ ನೆರೆಯ ರಾಜ್ಯದ ವಲಸೆ ಕಾರ್ಮಿಕರು ಕಲಬುರಗಿ ರಿಂಗ್ ರೋಡ್ ರಸ್ತೆಯ ಎಸ್.ಸಿ./ ಎಸ್.ಟಿ. ಇಂಜಿನೀಯರಿಂಗ್ ಹಾಸ್ಟೇಲ್‍ನಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಕ್ಕೆ ಸಂಪರ್ಕಿಸಿ ತವರು ರಾಜ್ಯಕ್ಕೆ ಪ್ರಯಾಣ ಕೈಗೊಳ್ಳಬಹುದಾಗಿದೆ. ಕೇಂದ್ರಕ್ಕೆ ಸಂಪರ್ಕಿಸುವ ನೆರೆಯ ರಾಜ್ಯದ ನಿವಾಸಿಗಳ ಮಾಹಿತಿಯನ್ನು ಆಯಾ ರಾಜ್ಯಗಳ ಪ್ರಯಾಣಕ್ಕೆ ಹೋಗಲು ವ್ಯವಸ್ಥೆ ಕೈಗೊಳ್ಳುತ್ತಿರುವ ಜಿಲ್ಲೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್
1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು
ಬಳ್ಳಾರಿ,ಜು.03(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆಯಲ್ಲಿ 10 ಸಾವಿರ ಆಂಟಿಜೆನ್ ಕಿಟ್ ಖರೀದಿಸಿ ಕೋವಿಡ್ ತಪಾಸಣೆಗೆ ಒತ್ತು ನೀಡಿರುವುದು ಮಾದರಿಯಾಗಿದ್ದು, ಅದೇ ರೀತಿ ತಪಾಸಣೆಗೆ ಒತ್ತು ನೀಡುವ ದೃಷ್ಟಿಯಿಂದ ರಾಜ್ಯ ಸರಕಾರವು 1ಲಕ್ಷ ಆಂಟಿಜೆನ್ ಕಿಟ್ ಖರೀದಿಸಲು ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಲಕ್ಷಣರಹಿತ ರೋಗಿಗಳನ್ನು ಇನ್ಮುಂದೆ ಪ್ರತ್ಯೇಕಿಸಿ ಅವರನ್ನು ಹೋಂ ಐಸೋಲೇಶನ್ ಮಾಡಲು ಸರಕಾರ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಕೋವಿಡ್‌ಗಾಗಿ ಪ್ರತಿ ವಾರ್ಡ್ಗೆ 2 ಆಂಬ್ಯುಲೆನ್ಸ್ಗಳAತೆ 400 ಆಂಬ್ಯುಲೆನ್ಸ್ಗಳನ್ನು ಖರೀದಿಸಿ ಮೀಸಲಿಡಲು ಉದ್ದೇಶಿಸಲಾಗಿದ್ದು,ಇದಕ್ಕಾಗಿ ಐಪಿಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಕಂಟೈನ್ಮೆAಟ್ ಝೋನ್‌ಗಳಲ್ಲಿ ಕೆಲ 10 ಕೆಟಗೆರಿಗಳನ್ನಾಗಿ ವಿಂಗಡಿಸಿ ತಪಾಸಣೆಗೆ ಒತ್ತು ನೀಡಲು ಇಂದು ನಡೆದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಬೆAಗಳೂರಿನಲ್ಲಿ 10 ಸಾವಿರ ಬೆಡ್ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂಬುದನ್ನು ಖಚಿತಪಡಿಸಿದ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿಯೂ 2 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆAಗಳೂರಿನ ನಾಲ್ಕು ಕಡೆ ವಿದ್ಯುತ್ ಚಿತಾಗಾರಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಿಪಿಇ ಕಿಟ್,ಥರ್ಮಲ್ ಸ್ಕಾö್ಯನರ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಆರೋಪವನ್ನು ಸಾರಾಸಾಗಾಟವಾಗಿ ತಳ್ಳಿಹಾಕಿದ ಸಚಿವ ಶ್ರೀರಾಮುಲು ಅವರು ಟಾಸ್ಕ್ಫೋರ್ಸ್ ಮತ್ತು ತಜ್ಞರು ಸಮಿತಿ ಅನುಮೋದಿಸಿದ ನಂತರವಷ್ಟೇ ಖರೀದಿಸಲಾಗುತ್ತದೆ; ಮಾಜಿ ಸಿಎಂ ಅವರು ಪ್ರಚಾರದ ದೃಷ್ಟಿಯಿಂದ ಆ ರೀತಿ ಹೇಳಿದ್ದಾರಷ್ಟೇ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‌ಒ ಜನಾರ್ಧನ್ ಮತ್ತಿತರರು ಇದ್ದರು.
–-*