ಸರ್ಕಾರಿ ಸುದ್ದಿ

ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಉಚಿತ ಆಟೋ ಸೇವೆ

ಗದಗ (ಕರ್ನಾಟಕ ವಾರ್ತೆ) ಜೂ. 25 : ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಗದಗ ಜಿಲ್ಲಾ ಆಟೋ ಚಾಲಕರ, ಮಾಲಕರ ಸಂಘ, ಜೈ ಭೀಮ ಆಟೋ ಚಾಲಕರ ಮಾಲಕರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಉಚಿತ ಆಟೋ ಸೇವೆಯನ್ನು ಕಲ್ಪಿಸಿದೆ.

ಜೂನ್ 25 ರಿಂದ ಆರಂಭವಾದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರುಯುವ ವಿದ್ಯಾರ್ಥಿಗಳಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದು, ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಮಕ್ಕಳು ಉಚಿತ ಆಟೋ ಸೇವೆ ಪಡೆಯಬಹುದಾಗಿದೆ.

ಉಚಿತ ಆಟೋ ಸೇವೆ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 9741201718, 9980710869, 7760920345, 9900603707, 8762639378 ಸಂಪರ್ಕಿಸಬೇಕು.

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ವಹಿಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಸುರಕ್ಷಿತ ಹಾಗೂ ಅತ್ಯಂತ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಮತ್ತು ಹೊರ ಹೋಗುವಾಗ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್, ಆಟೋ ಚಾಲಕರ ಮಾಲಕರ ಸಂಘಗಳ ಸಹಯೋಗದಲ್ಲಿ ಉಚಿತ ಆಟೋ ಸೇವೆ ಕ್ರಮ ಜರುಗಿಸಿರುವುದು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದಂತಾಗಿದೆ.

ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-2020
ಮಲೇರಿಯಾ ಮುಕ್ತ ಜಿಲ್ಲೆಗೆ ಸಾರ್ವಜನಿಕರ ಸಹಕಾರ ಅಗತ್ಯ
-ಡಾ.ಸೂರ್ಯಪ್ರಕಾಶ ಎಂ.ಕಂದಕೂರ


ಯಾದಗಿರಿ, ಜೂನ್ 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆ ಚೌಕಟ್ಟಿ (ಎನ್‍ಎಫ್‍ಎಂಇ)ನಲ್ಲಿ ಯಾದಗಿರಿ ಜಿಲ್ಲೆಯು 1ನೇ ಕೆಟಗರಿಯಲ್ಲಿದ್ದು, ಕರ್ನಾಟಕ ಸರ್ಕಾರವು 2025ರವರೆಗೆ ಮಲೇರಿಯಾ ಪ್ರಕರಣಗಳನ್ನು ಸೊನ್ನೆಗೆ ತರಲು ಕಾರ್ಯಕ್ರಮ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಮಲೇರಿಯಾ ಮುಕ್ತ ಜಿಲ್ಲೆಗೆ ಸಹಕರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಅವರು ಮನವಿ ಮಾಡಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಜಿಲ್ಲೆಯಾದ್ಯಂತ ಜೂನ್ 1ರಿಂದ 30ರವರೆಗೆ ಹಮ್ಮಿಕೊಂಡಿರುವ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತಂತೆ ಪತ್ರಕರ್ತರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ಆರೋಗ್ಯ ಉಪಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಜಿಲ್ಲೆಯ ಕಕ್ಕೇರಾ ಮತ್ತು ರಾಜನಕೊಳ್ಳೂರು ವ್ಯಾಪ್ತಿಯಲ್ಲಿ ಹಾಗೂ ಶ್ರೀನಿವಾಸಪುರ ಮತ್ತು ಪೇಠಮ್ಮಾಪುರ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಇಲಾಖೆ ವತಿಯಿಂದ ಎಲ್‍ಎಲ್‍ಐಎನ್ ಸೊಳ್ಳೆಪರದೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಲೇರಿಯಾ ಪ್ರಕರಣ ಇಳಿಮುಖ: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. 2016ರಲ್ಲಿ 132, 2017ರಲ್ಲಿ 209, 2018ರಲ್ಲಿ 72, 2019ರಲ್ಲಿ 13 ಹಾಗೂ 2020ರಲ್ಲಿ ಇಲ್ಲಿಯವರೆಗೆ 2 ಪ್ರಕರಣಗಳು ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.

ಮಲೇರಿಯಾ ಒಂದು ಪ್ರಾಥಮಿಕ ಕಾಯಿಲೆಯಾಗಿದ್ದು, ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಈ ರೋಗವನ್ನು ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಮಲೇರಿಯಾ ಪರೀಕ್ಷೆಯನ್ನು ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಂಪೂರ್ಣ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

ಎಲ್ಲಾ ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಅನಾಫಿಲೀಸ್ ಸೊಳ್ಳೆಯು ನೀರಿನ ಮೇಲೆ 160ರಿಂದ 300 ಮೊಟ್ಟೆಗಳನ್ನು ಇಡುತ್ತದೆ. ಎಲ್ಲಾ ಮೊಟ್ಟೆಗಳು ಮರಿಯಾಗಿ ಹೊರ ಬರುತ್ತವೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ, ಮನೆಯ ಅಕ್ಕ-ಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಇಂತಹ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಕರ್ನಾಟಕವನ್ನು 2025ರೊಳಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿಸಲು ಸಾಧ್ಯ ಎಂದರು.

ಮಲೇರಿಯಾ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ನಾಗರಿಕರ ಜವಾಬ್ದಾರಿ ಗುರುತರವಾಗಿದೆ. ಆರೋಗ್ಯ ಇಲಾಖೆ ಜೊತೆಗೆ ನಗರಸಭೆ, ಪುರಸಭೆ, ಪಂಚಾಯತ್ ರಾಜ್, ಶಿಕ್ಷಣ, ನೀರಾವರಿ, ಕೃಷಿ, ಅರಣ್ಯ, ಮೀನುಗಾರಿಕೆ ಮತ್ತು ಗಣಿಗಾರಿಕೆ ಇಲಾಖೆಗಳು ಸಹ ಜವಾಬ್ದಾರಿಯಾಗಿರುತ್ತವೆ ಎಂದು ಹೇಳಿದರು.

ಚಿಕನ್‍ಗುನ್ಯಾ, ಡೆಂಗ್ಯೂ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಕೂಡ ಸೊಳ್ಳೆ ಕಡಿತದಿಂದ ಹರಡುತ್ತವೆ. ಮನೆಯ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಯ ಪರದೆ, ಮುಲಾಮು, ಲಿಕ್ವಿಡೆಟರ್, ಬೇವಿನಮರ ಸೊಪ್ಪಿನ ಹೊಗೆ ಮಾಡುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಂಡು ರೋಗಗಳಿಂದ ದೂರ ಇರಬಹುದು. ಸೊಳ್ಳೆ ಪರದೆ ಬಳಸುವುದು ಉತ್ತಮ. ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಸಣ್ಣಮಕ್ಕಳು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ತಪ್ಪದೇ ಬಳಸಬೇಕು ಎಂದು ತಿಳಿಸಿದರು.

ನೀರು ಸಂಗ್ರಹಿಸಿದ ಬ್ಯಾರೆಲ್, ಕೊಡ ಮುಂತಾದವುಗಳನ್ನು ಸರಿಯಾಗಿ ಮುಚ್ಚಬೇಕು. ಸೊಳ್ಳೆ ಕಚ್ಚದಂತೆ ಉದ್ದನೆಯ ತೋಳಿನ ಅಂಗಿ ಮತ್ತು ಪ್ಯಾಂಟ್‍ಗಳನ್ನು ಧರಿಸಬೇಕು. ನೀರು ಸಂಗ್ರಹಿಸುವ ತೊಟ್ಟಿ, ಬ್ಯಾರಲ್, ಪಾತ್ರೆಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛವಾಗಿ ತಿಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿದ ನಂತರ ನೀರನ್ನು ತುಂಬಬೇಕು. ಅದೇ ರೀತಿ ಏರ್‍ಕೂಲರ್‍ನಲ್ಲಿ ಸಂಗ್ರಹವಾದ ನೀರು ಮತ್ತು ಹೂವಿನ ಕುಂಡಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕೂಡ ಬದಲಾಯಿಸಬೇಕು ಎಂದು ಅವರು ಸಲಹೆ ನೀಡಿದರು.

ಹಿರಿಯ ಆರೋಗ್ಯ ಸಹಾಯಕರಾದ ಪರಮರಡ್ಡಿ ಕಂದಕೂರ, ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾದ ವಿಕ್ರಮ್, ಬೆರಳಚ್ಚುಗಾರ ಅಂಬಾದಾಸ್ ಅವರು ಹಾಜರಿದ್ದರು.

ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶ: ಮತ್ತೆ 2 ವಾರ ಮುಂದೂಡಿಕೆ


ಯಾದಗಿರಿ, ಜೂನ್ 25 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ಸಕಾರಾತ್ಮಕ (ಪಾಸಿಟಿವ್) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಈಗಾಗಲೇ 75ಕ್ಕಿಂತ ಹೆಚ್ಚು ನಿಯಂತ್ರಿತ ವಲಯಗಳ ಅಧಿಸೂಚನೆ ಹೊರಡಿಸಿರುವುದರಿಂದ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನ ಹಾಗೂ ಪ್ರಾರ್ಥನೆಯನ್ನು ತಾತ್ಕಾಲಿಕವಾಗಿ ಮತ್ತೆ ಎರಡು ವಾರಗಳವರೆಗೆ ಮುಂದೂಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.

ಸರ್ಕಾರದಿಂದ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕಾಗಿ ಜೂನ್ 8ರಿಂದ ಅನುಮತಿಸಲಾಗಿತ್ತು. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಜೂನ್ 7ರಂದು ಎರಡು ವಾರಗಳವರೆಗೆ ಮುಂದೂಡಿ ಆದೇಶಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಕೋವಿಡ್ ಸಕಾರಾತ್ಮಕ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ನೀಡಿರುವ ಸಲಹೆ ಮೇರೆಗೆ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ಮತ್ತೆ ಎರಡು ವಾರಗಳವರೆಗೆ ಮುಂದೂಡಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸಬ್ ಇನ್‍ಸ್ಪೆಕ್ಟರ್ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
**
ಯಾದಗಿರಿ, ಜೂನ್ 25 (ಕರ್ನಾಟಕ ವಾರ್ತೆ): 2020-21ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್‍ಸ್ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕಗಳನ್ನು ಮಾತ್ರ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಯೋಮಿತಿ ಸೇರಿದಂತೆ ಇನ್ನುಳಿದ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಆರ್.ಎಸ್.ಐ (ಸಿಎಆರ್/ ಡಿಎಆರ್)-45 ಹುದ್ದೆಗಳಿಗೆ ಜುಲೈ 16ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿಸಲು ಜುಲೈ 18 ಕೊನೆಯ ದಿನಾಂಕವಾಗಿದೆ. ಸ್ಪೆ.ಆರ್‍ಎಸ್‍ಐ (ಕೆಎಸ್‍ಆರ್‍ಪಿ)- 40 ಹುದ್ದೆಗಳು, ಎಸ್.ಐ (ಕೆಎಸ್‍ಐಎಸ್‍ಎಫ್)-51 ಹುದ್ದೆಗಳು, ಪಿಎಸ್‍ಐ (ವೈರ್‍ಲೆಸ್)-26 ಹುದ್ದೆಗಳಿಗೆ ಜುಲೈ 18ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿಸಲು ಜುಲೈ 21 ಕೊನೆಯ ದಿನಾಂಕವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂ.26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಯಾದಗಿರಿ, ಜೂನ್ 25 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ) ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ”ಯನ್ನು ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ನಾಗನಗೌಡ ಕಂದಕೂರ, ನರಸಿಂಹ ನಾಯಕ (ರಾಜುಗೌಡ), ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಬಿ.ಜಿ.ಪಾಟೀಲ್, ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚೋಲ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ,ಭಾರತ ಸ್ಕೌಟ್ಸ ಮತ್ತು ಗೈಡ್ಸ್, ಸ್ವಯಂ ಸೇವಕರು, ನೆರವಿನೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ಸ್ಯಾನಿಟೈಸರ್ ಬಳಕೆ, ಕಡ್ಡಾಯವಾಗಿ ನಡೆಯಿತು.

ಅಚ್ಚುಕಟ್ಟಾದ ಸಾರಿಗೆ ವ್ಯವಸ್ಥೆ:

ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಮಕ್ಕಳಿಗಾಗಿ ವಾ.ಕ.ರ.ಸಾ.ಸಂಸ್ಥೆಯು 200 ಮಾರ್ಗಗಳು ಉಚಿತ ಬಸ್ ಸೌಕರ್ಯ ಕಲ್ಪಿಸಿತು. ಶಿಕ್ಷಣ ಇಲಾಖೆಯು ಮಾರ್ಗ ಅಧಿಕಾರಿಗಳನ್ನು ನೇಮಿಸಲಾಗಿತ್ತು, ಎಲ್ಲಾ ಮಕ್ಕಳಿಗೂ ಸಮರ್ಪಕ ಮಾಹಿತಿ ನೀಡಿ ಪರೀಕ್ಷೆಗೆ ಹಾಜರಾಗುವಂತೆ ಪೆÇ್ರೀತ್ಸಾಹಿಸಿ ಕರೆತಂದಿದ್ದು ವಿಶೇಷವಾಗಿತ್ತು.

ಜೂನ್ 27, ಶನಿವಾರ ಗಣಿತ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ಪೂರ್ಣಿಮಾ ಮುಕ್ಕುಂದಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ಭೇಟಿ
ಧಾರವಾಡ (ಕರ್ನಾಟಕ ವಾರ್ತೆ) ಜೂನ್.25: ನಗರದ ಮಾಳಮಡ್ಡಿಯ ಕೆ ಇ ಬೋರ್ಡ್ ಕನ್ನಡ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುತ್ತಿರುವುದು,ಕೊಠಡಿಗಳ ಆಸನ ವ್ಯವಸ್ಥೆ ಪರಿಶೀಲನೆ ಮಾಡಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ ಇತರರು ಇದ್ದರು.


ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ನವಲೂರು ಬಿಆರ್‍ಟಿಎಸ್ ರೋಡ್ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಜಗದೀಶ ಶೆಟ್ಟರ್
ಬೆಂಗಳೂರು ( ಕರ್ನಾಟಕ ವಾರ್ತೆ) ಜೂನ್ 25: ಕಳೆದ ಸುಮಾರು ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನವಲೂರು ಬಿಆರ್‍ಟಿಎಸ್ ರೋಡ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗ್ರಾಮಸ್ಥರಿಗೆ ಅನುಕೂಲ ಹಾಗೂ ತಾಂತ್ರಿಕವಾಗಿ ಕಾರ್ಯಗತವಾಗಬಹುದಾದ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಹೊಸ ಸಂಸ್ಥೆಯ ಸಮಾಲೋಚಕರನ್ನು ಬಳಸಿಕೊಳ್ಳಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ನಗರದ ಖನಿಜ ಭವನದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕೆಆರ್‍ಡಿಎಸಿಎಲ್, ಹೆಚ್ ಡಿ ಬಿ ಆರ್ ಟಿ ಎಸ್ ಹಾಗೂ ನವಲೂರಿನ ಗ್ರಾಮಸ್ಥರೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದರು.

ನವಲೂರಿನ ಬಳಿ ರೋಡ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಅಲ್ಲಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ಣಗೊಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಂತ್ರಿಕ ಸಮಿತಿಯ ಸಲಹೆ ಜೊತೆಯಲ್ಲಿಯೇ ಮೂರನೇ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಇದೇ ವೇಳೆ ನಗರ ಭೂಸಾರಿಗೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯಾದ ಮಂಜುಳಾ ಅವರು ನೀಡಿದ ನಾಲ್ಕು ಆಯ್ಕೆಗಳನ್ನು ಪರಾಮರ್ಶಿಸಿದರು. ಅಲ್ಲದೆ, ಈ ಆಯ್ಕೆಗಳಿಗೆ ಗ್ರಾಮಸ್ಥರು ಮುಂದಿಟ್ಟ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಕೆಆರ್‍ಡಿಸಿಎಲ್ ಎಂಡಿ ಪ್ರಕಾಶ್ ಕುಮಾರ್, ತಾಂತ್ರಿಕ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ನವಲೂರಿನ ಗ್ರಾಮಸ್ಥರೂ ಪಾಲ್ಗೊಂಡಿದ್ದರು.

ಕೋವಿಡ್-19 ರೋಗಿಗಳಿಗೆ ಒಂದು ದಿನಕ್ಕೆ ಪ್ಯಾಕೇಜ್ ಆಗಿ ಸರಕಾರ ದರ ನಿಗದಿಗೊಳಿಸಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸ್ಸು ಮಾಡುವ ಕೋವಿಡ್-19 ರೋಗಿಗಳ ವೆಚ್ಚವಾಗಿ ಜನರಲ್ ವಾರ್ಡ- ರೂ. 5200, ಹೆಚ್.ಡಿ.ಯು –ರೂ. 7000, ಐಸೊಲೇಷನ್ ಐಸಿಯು ವೆಂಟಿಲೇಟರ ರಹಿತ ರೂ.8500 ಮತ್ತು ವೆಂಟಿಲೇಟರ ಸಹಿತ ರೂ. 10.000 ನಿಗದಿಗೊಳಿಸಿದೆ.

ನಗದು ಪಾವತಿ ಮಾಡುವ ಪಿ.ಎಚ್.ಪಿ ಗಳಿಂದ ನೇರವಾಗಿ ಪ್ರವೇಶ ಪಡೆದ ಖಾಸಗಿ ಕೋವಿಡ್-19 ರೋಗಿಗಳಿಗೆ ಒಂದು ದಿನದ ಪ್ಯಾಕೇಜ್ ಆಗಿ ಜನರಲ್ ವಾರ್ಡ ರೂ.10.000, ಹಚ್.ಡಿ.ಯು ರೂ.12.000, ಐಸೊಲೇಷನ್ ಐಸಿಯು ವೆಂಟಿಲೇಟರ ರಹಿತ ರೂ.15.000 ಮತ್ತು ವೆಂಟಿಲೇಟರ ಸಹಿತ ರೂ .25.000 ಗಳಾಗಿ ಸರಕಾರವು ದರ ನಿಗದಿಗೊಳಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸ್ಸು ಮಾಡುವ ಕೋವಿಡ್-19 ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವದರಿಂದ ರೋಗಿಗಳ ಕಡೆಯಿಂದ ಯಾವುದೇ ರೀತಿಯ ಶುಲ್ಕ, ವೆಚ್ಚ ವಸೂಲು ಮಾಡುವಂತಿಲ್ಲ ಮತ್ತು ಖಾಸಗಿ ಕೋವಿಡ್-19 ರೋಗಿಗಳಿಂದ ಸರಕಾರ ನಿಗದಿಪಡಿಸಿದ ದರಗಳಿಗಿಂತ ಹೆಚ್ಚು ಹಣ ವಸೂಲು ಮಾಡುವಂತಿಲ್ಲ ಎಂದು ಅವರು ನಿರ್ದೇಶಿಸಿದರು.

ಸರಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರ, ಸಿಬ್ಬಂದಿಗಳ ಅರೋಗ್ಯ ಸುರಕ್ಷತೆಗಾಗಿ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದಲ್ಲಿ ಸರಕಾರಕ್ಕೆ ಈ ಕುರಿತು ಪತ್ರ ಬರೆಯುವದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಎಸ್.ಡಿ.ಎಂ., ಎಚ್.ಆರ್.ಸಿ ಆಸ್ಪತ್ರೆ, ವಿಠ್ಠಲ ಚಿಕ್ಕ ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯರು ಮಾತನಾಡಿ, ಸರಕಾರದ ಮಾರ್ಗಸೂಚಿಗಳಂತೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು ಮತ್ತು ಶೇ 50 ರಷ್ಟು ಹಾಸಿಗೆ, ವೈದ್ಯ, ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ವೆಂಟಿಲೇಟರ್ ಸೇರಿದಂತೆ ಎಲ್ಲಾ ಸೌಲಭ್ಯ ನೀಡುವುದಾಗಿ ತಿಳಿಸಿದರು. ಹಾಗೂ ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ವಿಮೆ ಅಳವಡಿಸಲು ಸರಕಾರಕ್ಕೆ ಮನವಿ ಮಾಡಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ್ ಸ್ವಾಗತಿಸಿದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಿಭಾಗಿಯ ಸಂಯೋಜಕ ಡಾ.ವಿ.ಡಿ ಡಾಂಗೆ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುವ ಮತ್ತು ವೆಚ್ಚ ಭರಿಸುವ ಕುರಿತು ಸರಕಾರದ ಆದೇಶ ಹಾಗೂ ಮಾರ್ಗಸೂಚಿಗಳ ಕುರಿತು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ ಸಭೆ ನಿರ್ವಹಿಸಿ, ವಂದಿಸಿದರು.
ಸಭೆಯಲ್ಲಿ ಜಿಲ್ಲಾ ಆರ್ ಸಿಎಚ್.ಓ ಡಾ.ಎಸ್.ಎಂ.ಹೊನಕೇರಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ರೆಡಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕವನ್ ದೇಶಪಾಂಡೆ, ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾ.ಉಮೇಶ ಹಳ್ಳಿಕೇರಿ ಸೇರಿದಂತೆ ವಿವಿಧ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು, ಮುಖ್ಯಸ್ಥರು,ಪ್ರತಿನಿಧಿಗಳು ಭಾಗವಹಿಸಿದ್ದರು.

ಕೋವಿಡ್-19 ಚಿಕಿತ್ಸೆ ನೀಡಲಿರುವ ಖಾಸಗಿ ಆಸ್ಪತ್ರೆಗಳು:ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಗೊಂಡಿರುವ ಜಿಲ್ಲೆಯ ಆಸ್ಪತ್ರೆಗಳು: ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ,ನವನಗರ,ಎಚ್‍ಸಿಜಿ ಎನ್‍ಎಂಆರ್ ಕ್ಯೂರಿ ಸೆಂಟರ್ ಓಂಕೊಲಾಜಿ, ದೇಶಪಾಂಡೆ ನಗರ ಹುಬ್ಬಳ್ಳಿ, ಎಸ್ ಡಿ ಎಮ್ ನಾರಾಯಣ ಹೃದಯಾಲಯ ಸತ್ತೂರ, ಶಕುಂತಲಾ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಹೊಸೂರ,ಫೆÇೀರ್ಟಿಸ್ ಸುಚಿರಾಯು ಆಸ್ಪತ್ರೆ,ಗೋಕುಲ ರಸ್ತೆ, ಅಶೋಕ ಆಸ್ಪತ್ರೆ, ವಿದ್ಯಾನಗರ, ಜಯಪ್ರಿಯ ಆಸ್ಪತ್ರೆ, ಬೈಲಪ್ಪನವರ ನಗರ, ವಿವೇಕಾನಂದ ಜನರಲ್ ಆಸ್ಪತ್ರೆ,ದೇಶಪಾಂಡೆ ನಗರ, ಶಿವಕೃಪಾ ಆಸ್ಪತ್ರೆ ಹಾಗೂ ತೀವ್ರ ನಿಗಾ ಘಟಕ ಲ್ಯಾಮಿಂಗ್ಟನ್ ರಸ್ತೆ ಹುಬ್ಬಳ್ಳಿ, ಶ್ರೀ ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ವಿದ್ಯಾನಗರ, ವಿಠ್ಠಲ ಮಕ್ಕಳ ಆಸ್ಪತ್ರೆ ಜುಬ್ಲಿ ವೃತ್ತ, ಹುಬ್ಬಳ್ಳಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವಿದ್ಯಾನಗರ, ಸಂಜಿವಿನ ಸ್ಪೆμÁಲಿಟಿ ಆಸ್ಪತೆ ್ರ ವಿದ್ಯಾನಗರ,ನಾಲ್ವಾಡ್ ಮಲ್ಟಿಸ್ಪೆμÁಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಕಾಸನಗರ ಹೊಸೂರ, ಎಸ್ ಡಿ ಎಮ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಕಾಲೇಜು ಸತ್ತೂರ, ತತ್ವದರ್ಶ ಆಸ್ಪತ್ರೆ ಹುಬ್ಬಳ್ಳಿ, ವಾತ್ಸಲ್ಯ ಆಸ್ಪತ್ರೆ ಗೋಕುಲ ರಸ್ತೆ ಹುಬ್ಬಳ್ಳಿ, ಸೆಕ್ಯೂರ್ ಆಸ್ಪತ್ರೆ ಗೋಕುಲ ರಸ್ತೆ ಹುಬ್ಬಳ್ಳಿ, ವಿಹಾನ ಹೃದಯ ಕೇರ್ ಪ್ರೈವೇಟ್ ಲಿಮಿಟೆಡ್, ದೇಶಪಾಂಡೆನಗರ ಹುಬ್ಬಳ್ಳಿ
***

ಎಸ್ ಎಸ್ ಎಲ್ ಸಿ ಪರೀಕ್ಷೆ 25561 ವಿದ್ಯಾರ್ಥಿಗಳು ಹಾಜರು,
1038 ವಿದ್ಯಾರ್ಥಿಗಳ ಗೈರು
ಸಾಮಾಜಿಕ ಅಂತರ ,ಆರೋಗ್ಯ ತಪಾಸಣೆಯೊಂದಿಗೆ
ಅಚ್ಚುಕಟ್ಟಾಗಿ ನಡೆದ ಪರೀಕ್ಷೆಗಳು

ಧಾರವಾಡ (ಕರ್ನಾಟಕ ವಾರ್ತೆ) ಜೂನ್ 25: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಂದಿನಿಂದ ಆಯೋಜಿಸಿರುವ ,2020 ರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಜಿಲ್ಲೆಯ ಎಲ್ಲಾ 90 ಕೇಂದ್ರಗಳು ಹಾಗೂ 17 ಉಪ ಕೇಂದ್ರಗಳಲ್ಲಿ ಸುಸೂತ್ರವಾಗಿ ಪ್ರಾರಂಭವಾದವು.

ಇಂದು ನಡೆದ ದ್ವಿತೀಯ ಭಾμÉ ಪರೀಕ್ಷೆಗೆ 26599 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ಅವರಲ್ಲಿ 25561 ವಿದ್ಯಾರ್ಥಿಗಳು ಹಾಜರಾದರು, 1038 ಮಕ್ಕಳು ಗೈರು ಹಾಜರಾಗಿದ್ದರು.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಶಿಸ್ತುಬದ್ಧವಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು ಕಂಟೈನಮೆಂಟ್ ಪ್ರದೇಶಗಳಿಂದ ಬಂದ 97 ವಿದ್ಯಾರ್ಥಿಗಳು ಆರೋಗ್ಯವಂತರಾಗಿದ್ದರೂ ಕೂಡ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕೊಠಡಿಗಳಲ್ಲಿ ಆಸನ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.

ವಿವಿಧ ಸರಕಾರೇತರ ಸಂಸ್ಥೆಗಳ ನೆರವಿನಿಂದ ಎಲ್ಲಾ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಬಿಸ್ಕತ್ತು,ಬದಾಮಿ ಹಾಲು ವಿತರಿಸಲಾಯಿತು.

ಪತ್ರಿಕಾ ಪ್ರಕಟಣೆ
ಕೊರೋನಾ: ೧೩೨೬ ಸ್ಯಾಂಪಲ್‌ಗಳ ಫಲಿತಾಂಶ ನಿರೀಕ್ಷೆ
ರಾಯಚೂರು,ಜೂ.೨೪.(ಕ.ವಾ)- ಜಿಲ್ಲೆಯ ದೇವದುರ್ಗ ತಾಲೂಕಿನಿಂದ ೩೨, ಲಿಂಗಸೂಗೂರು ತಾಲೂಕಿನಿಂದ ೩೩, ಮಾನ್ವಿ ತಾಲೂಕಿನಿಂದ ೬೯, ಸಿಂಧನೂರು ತಾಲೂಕಿನಿಂದ ೫೭ ಮತ್ತು ರಾಯಚೂರು ತಾಲೂಕಿನಿಂದ ೧೧೭ ಸೇರಿದಂತೆ ಜೂನ್ ೨೫ ರ ಗುರುವಾರ ೩೦೮ ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-೧೯ ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-೧೯ ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ ೧೩೦ ನೆಗೆಟಿವ್ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ ೨೧,೪೩೯ ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ ೧೯,೬೬೪ ವರದಿಗಳು ನೆಗೆಟಿವ್ ಆಗಿವೆ. ಉಳಿದ ೧೩೨೬ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.
ಫಿವರ್ ಕ್ಲಿನಿಕ್‌ಗಳಲ್ಲಿಂದು ೫೫೩ ಜನರನ್ನು ಥರ್ಮಲ್ ಸ್ಕಿçÃನಿಂಗ್‌ಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇದೂವರೆಗೆ ಒಟ್ಟಾರೆ ಕೋವಿಡ್-೧೯ನ ೪೪೩ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ದೃಢಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದ್ದವರ ಪೈಕಿ ಒಟ್ಟು ೩೫೬ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೧೧೮, ಸಿಂಧನೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೧೪, ಮಾನವಿ ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೨೨ ಹಾಗೂ ಲಿಂಗಸೂಗೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ೨೧ ಜನರು ಸೇರಿದಂತೆ ಒಟ್ಟು ೧೭೫ ಜನರು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ. ಕೋವಿಡ್-೧೯ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಂಪೇಗೌಡ ಜಯಂತಿ: ೨೭ಕ್ಕೆ ಸರಳ ಆಚರಣೆ
ರಾಯಚೂರು,ಜೂ.೨೪.(ಕ.ವಾ)- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇದೇ ಜೂ.೨೭ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ.
ಕೊರೋನಾ ಸೋಂಕು ಹರಡುವ ಹಿನ್ನಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭ ಏರ್ಪಡಿಸಲು ಅವಕಾಶವಿಲ್ಲದ ಕಾರಣ ಈ ಬಾರಿ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯಾ ತಾಲೂಕುಗಳಲ್ಲಿಯೇ ಆರ್‌ಆರ್‌ಟಿ ಪ್ರಕರಣಗಳ ವಿಚಾರಣೆ
ರಾಯಚೂರು, ಜೂ.೨೫.(ಕ.ವಾ)- ಕಂದಾಯ ನ್ಯಾಯಾಲಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಉಪ ವಿಭಾಗಾಧಿಕಾರಿಗಳಿಗೆ ಕೆಲಸದ ಒತ್ತಡ, ಶಿಷ್ಠಾಚಾರ ಪಾಲನೆ ಹಾಗೂ ಇತರೆ ತುರ್ತು ಕಾರ್ಯಗಳಿಂದ ಅನಾನುಕೂಲವಾಗುತ್ತಿದೆ, ಸಮಯದ ಅಭಾವದಿಂದ ಸಾಧ್ಯವಾಗದ್ದರಿಂದ ಉಪವಿಭಾಗದ ತಾಲೂಕಿನಲ್ಲಿ ಪ್ರಕರಣಗಳನ್ನು ಭೈಠಕ್ ನಡೆಸಿ ವಿಲೇವಾರಿ ಮಾಡಲು ನಿರ್ದೇಶನ ನೀಡಲಾಗಿದೆ.
ಅಲ್ಲದೇ ಪ್ರಸಕ್ತ ಪರಿಸ್ಥಿತಿಯಲ್ಲಿ ಕೋವಿಡ್-೧೯ ಸೋಂಕು ಹಿನ್ನಲೆಯಲ್ಲಿ ಕೆಲವೊಂದು ಗ್ರಾಮಗಳಿಗೆ ಮತ್ತು ಪಟ್ಟಣಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಕಾರಣ ಪ್ರಕರಣಕ್ಕೆ ಹಾಜರಾಗಬೇಕಿರುವ ಮೇಲ್ಮನವಿದಾರರು, ಪ್ರತಿವಾದಿಗಳಿಗೆ ತೊಂದರೆಯಾಗುತ್ತಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿರುವ ನಿಟ್ಟಿನಲ್ಲಿ ಆರ್‌ಆರ್‌ಟಿ ಪ್ರಕರಣಗಳನ್ನು ಸಂಬAಧಿಸಿದ ತಾಲೂಕುಗಳಲ್ಲಿಯೇ ನಡೆಸಬೇಕಿರುತ್ತದೆ.
ಅದರಂತೆ ಪ್ರತಿ ಬುಧವಾರ ರಾಯಚೂರು ತಾಲೂಕಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ, ಪ್ರತಿ ಮಂಗಳವಾರ ಮಾನವಿ ಹಾಗೂ ಸಿರವಾರ ತಹಶೀಲ್ದಾರರ ಕಚೇರಿಯಲ್ಲಿ ಮತ್ತು ಪ್ರತಿ ಶುಕ್ರವಾರ ದೇವದುರ್ಗ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಉಪ ವಿಭಾಗೀಯ ನ್ಯಾಯಾಲಯದ ಕಲಾಪಗಳು ನಡೆಯಲಿವೆ.
ಅದರಂತೆ ನಿಗದಿತ ದಿನದಂದು ಕಕ್ಷಿದಾರರರಿಗೆ ಸಂಬAಧಿಸಿದ ನ್ಯಾಯಾಲಯದಲ್ಲಿ ಹಾಜರಾಗುವಂತೆ ಮತ್ತು ಸಂಬAಧಿಸಿದ ವಕೀಲರು ವಕಾಲತ್ತನ್ನು ಕಲಾಪ ಸ್ಥಳದಲ್ಲಿ ವಹಿಸುವಂತೆ ರಾಯಚೂರು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಅಂತಾರಾಷ್ಟಿçÃಯ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಾಣಿಕಾ ವಿರೋಧಿ ದಿನ
ರಾಯಚೂರು, ಜೂ.೨೫.(ಕ.ವಾ)- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಇದೇ ಜೂ.೨೬ರ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಅಂತಾರಾಷ್ಟಿçÃಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಜಿಲ್ಲಾ ಕಾರಾಗೃಹದಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.
ವಿಶೇಷ ವರದಿ:
೧೯೮೯ರಿಂದ ಪ್ರತಿ ವರ್ಷದಂತೆ ಈ ವರ್ಷವೂ ಜೂ.೨೬ರಂದು ಅಂತರಾಷ್ಟಿçÃಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಉತ್ತಮ ಆರೈಕೆಗಾಗಿ ಉತ್ತಮ ಜ್ಞಾನ ಎಂಬುದು ಈ ವರ್ಷದ ಘೋಷಣೆ. ಜನ ಸಾಮಾನ್ಯರಲ್ಲಿ ಅದರಲ್ಲೂ ಯುವಕರಲ್ಲಿ ಮಾದಕವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ ಮಾದಕ ವ್ಯಸನರಹಿತ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವುದಾಗಿದೆ ಇದರ ಉದ್ದೇಶ.
ವ್ಯಸನ ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ. ವ್ಯಸನವು ಜೀವ-ವಿಜ್ಞಾನಕ್ಕೆ ಸಂಬAಧಿಸಿದ ಮಿದುಳಿನ ಅಸ್ವಸ್ಥತೆ, ಅದರ ಮೇಲೆ ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಪ್ರಭಾವಿರುತ್ತದೆ. ತಾತ್ಕಾಲಿಕ ಆನಂದ ನೀಡುವ ಮಾದಕ-ದ್ರವ್ಯಗಳ (ಮದ್ಯ, ಸಿಗರೇಟ್,ಡ್ರಗ್ ಇತ್ಯಾದಿ) ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು. ಇದುದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ದೇಶದಲ್ಲಿ ಮಾದಕ ದ್ರವ್ಯಗಳನ್ನು ಮೂರು ರೀತಿ ವರ್ಗೀಕರಿಸಬಹುದು.
ಕಾನೂನು ಬದ್ದ ಮಾದಕ ವಸ್ತುಗಳು-ಮದ್ಯ ಮತ್ತು ತಂಬಾಕು, ಸಿಗರೇಟ್.
ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದವುಂಟು ಮಾಡುವ ಡ್ರಗ್ಸ್.
ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು.
ಮಾದಕದ್ರವ್ಯ ವ್ಯಸನ (ಡ್ರಗ್‌ಅಡಿಕ್ಷನ್)
ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್