ಸರ್ವಜ್ಞ ಎಲ್ಲರೊಳಗಿನ ಜ್ಞಾನದ ಅರಿವು –

257
Share

 

ಸರ್ವಜ್ಞ ಎಲ್ಲರೊಳಗಿನ ಜ್ಞಾನದ ಅರಿವು – ಎಂಕೆ.ಸೋಮಶೇಖರ್.

ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ(ರಿ.) ಇವರ ಆಶ್ರಯದಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಗ್ರಹಾರ ವೃತ್ತದಲ್ಲಿ ತ್ರಿಪದಿ ಬ್ರಹ್ಮ ಸರ್ವಜ್ಞ ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ರವರು ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರ

ನಂತರ ಮಾತನಾಡಿದ ಎಂಕೆ.ಸೋಮಶೇಖರ್ ವಾಸ್ತವ ಅಂಶಗಳನ್ನು ತಮ್ಮ ತ್ರಿಪದಿಗಳ ಮೂಲಕ ಸಮಾಜಕ್ಕೆ ಉತ್ತಮ ನೈತಿಕ, ಸಾಮಾಜಿಕ ,ಧಾರ್ಮಿಕ ಸಂದೇಶಗಳನ್ನಾಗಿ ನೀಡಿದಂತಹ ೧೬ನೇ ಶತಮಾನ ಕಂಡಂತಹ ಮೇರು ಕನ್ನಡದ ಕವಿ ಸರ್ವಜ್ಞ ರವರು. ಸರ್ವಜ್ಞನೆಂಬುವವನು ಗರ್ವದಿಂದಾದವನೇ ಸರ್ವರಿಂದ ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಎಂಬಂತೆ ಸರ್ವಜ್ಞನ ತ್ರಿಪದಿಗಳನ್ನು ಬಳಸದಂತವರು ಯಾರು ಇಲ್ಲ ಮನುಷ್ಯನ ಪ್ರತಿನಿತ್ಯದ ಜೀವನದಲ್ಲಿ ಮಾತನಾಡುವಂತಹ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿ ಸರ್ವಜ್ಞನ ತ್ರಿಪದಿಗಳನ್ನು ನಾವೆಲ್ಲರೂ ಬಳಸುತ್ತಿದ್ದೇವೆ.ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ವಿಶಿಷ್ಟ ಮೈಲಿಗಲ್ಲನ್ನು ಹೊಂದಿರುವ ಶ್ರೇಷ್ಠ ಕವಿ ಸರ್ವಜ್ಞರವರು ಕನ್ನಡ ಸಾಹಿತ್ಯದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿರುವುದು ಕನ್ನಡಿಗರು ಹೆಮ್ಮೆಪಡುವಂತಹ ವಿಚಾರ. ಸರ್ವಜ್ಞನ ತ್ರಿಪದಿಗಳು ಕೇವಲ ಸಾಹಿತ್ಯ ರೂಪದಲ್ಲಿ ಶೇಖರಣೆ ಆಗಿರದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ತರವಾದ ಪಾತ್ರವನ್ನು ವಹಿಸಿವೆ. ಹಾಗಾಗಿ ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕವಾದ.

.ಈ ಭೂಮಿ ಈ ವಿಶ್ವ ಇರುವವರೆಗೂ ಸರ್ವಜ್ಞನ ತ್ರಿಪದಿಗಳು ಮಾಸುವುದಿಲ್ಲ.ಯಾರ ಮನಸಿಗೂ ನೋವು ಮಾಡದ ಯಾವ ಜಾತಿ ಧರ್ಮಕ್ಕೂ ಕಪ್ಪು ಚುಕ್ಕೆ ತರದ ಇಂತಹ ಮಹಾತ್ಮರ ಜ್ಞಾನ ಭಂಡಾರವನ್ನು ನಮ್ಮ ಮುಂದಿನ ಪೀಳಿಗೆಗೂ ಸಹ ಉಳಿಸಿ ಬೆಳೆಸಬೇಕಿದೆ. ಆ ದಿಸೆಯಲ್ಲಿ ಸರ್ಕಾರ ಸರ್ವಜ್ಞ ಪ್ರಾಧಿಕಾರವನ್ನು ಸ್ಥಾಪಿಸಿ ಸರ್ವಜ್ಞನ ತ್ರಿಪದಿಗಳನ್ನು ಉಲ್ಲೇಖಗಳನ್ನ ದೊಡ್ಡ ದೊಡ್ಡ ಸಾಹಿತಿಗಳು ಕನ್ನಡ ವಿದ್ವಾಂಸರುಗಳ ಸಮಿತಿಯನ್ನು ರಚಿಸಿ ಹೆಚ್ಚು ಹೆಚ್ಚು ಸಂಶೋಧನೆ ಮತ್ತು ಅಧ್ಯಯನಗಳನ್ನು ಮಾಡಬೇಕಾಗಿದೆ.ಆಗ ಮಾತ್ರ ಇಂತಹ ಮಹನೀಯರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.ಸರ್ವಜ್ಞನ ತ್ರಿಪದಿಗಳನ್ನು ಅಧ್ಯಯನ ಮಾಡಿದಾಗ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕಲು ಪ್ರೇರಣೆಗಳನ್ನು ನೀಡುತ್ತದೆ.ತಾವು ಏಳಬೇಕಾದುದ್ದನ್ನು ನೇರ ಮತ್ತು ನಿಷ್ಟೂರವಾಗಿ ತಮ್ಮ ತ್ರಿಪದಿಗಳಲ್ಲಿ ಸರ್ವಜ್ಞ ರವರು ಉಲ್ಲೇಖಿಸಿರುವುದನ್ನು ನಾವು ಕಾಣಬಹುದು. ನೂರು ಪದಗಳಲ್ಲಿ ಹೇಳಲಾಗದನ್ನು ಕೇವಲ ತಮ್ಮ ಮೂರು ಸಾಲಿನ ತ್ರಿಪದಿಗಳ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ದರ್ಶನ ಮಾಡಿಸುವ ಅವರ ತ್ರಿಪದಿಗಳ ಪರಿಯಂತೂ ಅತ್ಯಂತ ವಿಸ್ಮಯವಾದದ್ದು. ಬಸವಣ್ಣನ ನಂತರದ ಕಾಲಘಟ್ಟದಲ್ಲಿ ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತ ಗೊಳಿಸಿದಂತಹ ಅಪೂರ್ವ ವಾಗ್ಮೇಯಕಾರ ಸರ್ವಜ್ಞ ಎಂದರೆ ತಪ್ಪೇನಿಲ್ಲ.ಅಂತಹ ಮಹಾನ್ ಕವಿಯ ಹೆಸರಿನಲ್ಲಿ ಪ್ರಾಧಿಕಾರವನ್ನು ರಚಿಸಿ ಸಮಗ್ರ ಅಭಿವೃದ್ಧಿ ಮತ್ತು ಅಧ್ಯಯನಕ್ಕೆ ಒತ್ತು ನೀಡುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈಗಾಗಲೇ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಹಾಗಾಗಿ ಮುಂದಿನ ಪೀಳಿಗೆಗೆ ಅವರ ಬಗ್ಗೆ ಮತ್ತಷ್ಟು ತಿಳಿಯುವಂತಹ ಅವಕಾಶ ಎಲ್ಲರಿಗೂ ದೊರೆಯುತ್ತದೆ.ಅವರ ಅರಿವು ಎಲ್ಲರೊಳಗೂ ಮನಮುಟ್ಟುವಂತೆ ಆಗುತ್ತದೆ.ಆ ಮುಖೇನ ಮಹಾಕವಿ ಸರ್ವಜ್ಞರಿಗೂ ಗೌರವ ನೀಡಿದಂತಾಗುತ್ತದೆ.ಇಂತಹ ಜಯಂತಿಗಳಿಗೂ ಅರ್ಥ ಬರುತ್ತದೆ ಎಂದು ತಿಳಿಸಿದರು


Share