ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಬೇಡ: ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡಕ್ಕೆ ಮಣಿಯಬಾರದು

Share

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಬೇಡ –ರಮ್ಜಾನ್ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಷರತ್ತು ಬದ್ಧ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಶ್ರೀ ಇಬ್ರಾಹಿಂ ಅವರು ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪರವರನ್ನು ಕೋರಿದ್ದಾರೆ .ಇದಕ್ಕೆ ಮಣಿದು ಸರ್ಕಾರವೇನಾದರೂ ಸಮ್ಮತಿಸಿದ್ದೆ ಆದರೆ ದೊಡ್ಡ ಅನಾಹುತಕ್ಕೆ ಕೈ ಹಾಕಿದಂತಾಗುತ್ತದೆ .ಇಡೀ ವಿಶ್ವವನ್ನೇ ನಡುಗಿಸಿರುವ ಕರೊನ ಹೆಮ್ಮಾರಿಯನ್ನು ತಡೆಯಲು ಈಗಾಗಲೇ ಮಸೀದಿ ಮಂದಿರ ಚರ್ಚುಗಳನ್ನು ತೆರೆಯಬಾರದೆಂದು, ಹೆಚ್ಚಾಗಿ ಸಾರ್ವಜನಿಕರು ಸೇರುವ ಸ್ಥಳಗಳನ್ನು ಗುರುತಿಸಿ ನಿಷೇಧಿಸಬೇಕೆಂದು ಕೇಂದ್ರ ಮತ್ತು ರಾಜ್ಯಗಳು ಸ್ಪಷ್ಟ ಪಡಿಸಿದ್ದರೂ ಸಹಿತ ತಮ್ಮ ಕೋಮಿನ ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿರುವ ಅನುಭವಿ ರಾಜಕಾರಣಿ ಎಂದು ಹೆಸರಾದ ಇಬ್ರಾಹಿಂ ಅಂಥವರಿಗೆ ಕ್ಷೋಭೆ ತರುವುದಿಲ್ಲ .ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿದ್ದ ಕರೋನಾ ಪಿಡುಗು ,ಸಾರ್ವಜನಿಕರಿಗೆ ಮುಕ್ತ ಓಡಾಟದ ಅವಕಾಶ ಕಲ್ಪಿಸಿದ್ದಾಗಿನಿಂದ ಇಮ್ಮಡಿಸುತ್ತಿರುವುದನ್ನು ಕಾಣಬದು,ಒಂದು ವೇಳೆ ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳೇನಾದರೂ ಇಬ್ರಾಹಿಂ ಅಂಥವರ ಕೋರಿಕೆಗೆ ಸಮ್ಮತಿಸಿದ್ದೆ ಆದರೆ ದೊಡ್ಡ ಅನಾಹುತವೇ ಆದೀತು.ದೇವಾಲಯಗಳಾಗಲಿ ಚರ್ಚುಗಳಾಗಲಿ ತಮಗೂ ಇಂತಹ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದೇ ಆದರೆ ಸರ್ಕಾರದ ಹತೋಟಿ ಕೈ ತಪ್ಪಿ ಹೋಗಬಹುದು.ಯಾವುದೇ ಒಂದು ವರ್ಗಕ್ಕೆ ಅವಕಾಶ ನೀಡಿದರೂ ಅದು ಕೋಮು ದಳ್ಳೂರಿಗೆ ಆಹ್ವಾನ ನೀಡಿದಂತಾಗಬಹುದು .ಆದುದರಿಂದ ಸರಕಾರವು ಯಾವುದೇ ಕಾರಣಕ್ಕೂ ಇನ್ನು ಕೆಲವು ವಾರಗಳವರೆಗೆ ಸಾಮೂಹಿಕ ಪ್ರಾರ್ಥನೆಗಳಿಗೆ ಅವಕಾಶ ನೀಡಬಾರದು, ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ, ಪೂಜೆ ನಡೆಸಬೇಕೆಂಬ ನಿಲುವಿಗೆ ಬದ್ಧವಾಗಿರಬೇಕು .


Share