ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನ ಹಾಗೂ ಹಂದಿಗಳನ್ನು ಬಿಡದಂತೆ ಎಚ್ಚರಿಕೆ

Share

 

ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನ ಹಾಗೂ ಹಂದಿಗಳನ್ನು ಬಿಡದಂತೆ ಎಚ್ಚರಿಕೆ
ಮೈಸೂರು,ಆ.17.- ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಹಾಗೂ ನಗರದ ಹೊರವಲಯದಲ್ಲಿ ಬಿಡಾಡಿ ದನ ಹಾಗೂ ಹಂದಿಗಳನ್ನು ಸಾಕುತ್ತಿರುವವರು ನಗರದ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾದಿ ದನ ಮತ್ತು ಹಂದಿಗಳನ್ನು ಬಿಡುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದ್ದು, ಮಾರಣಾಂತಿಕ ಅಪಘಾತಕ್ಕೆ ಈಡಾಗಿರುವುದು ಕಂಡುಬoದಿರುತ್ತದೆ.
 ಬಿಡಾದಿ ದನ, ಹಂದಿಗಳು ಕಸದ ತೊಟ್ಟಿಗಳಲ್ಲಿ ಆಹಾರ ಸೇವಿಸುವುದಕ್ಕಾಗಿ ತೊಟ್ಟಿಯಲ್ಲಿರುವ ಕಸವನ್ನೆಲ್ಲ ಚೆಲ್ಲಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ನಗರದ ನೈರ್ಮಲ್ಯವು ಹಾಳಾಗುತ್ತಿದೆ. ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಹಂದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಹಂದಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯಂತ್ರಿಸುವುದು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಹಂದಿ ಮಾಲೀಕರಿಗೆ ಕಡೆಯದಾಗಿ ಎಚ್ಚರಿಕೆ ನೀಡುತ್ತಿದ್ದು, ಮಾಲೀಕರು ಈ ಪ್ರಕಟಣೆ ಹೊರಡಿಸಿತ ದಿನದಿಂದ ಒಂದು ವಾರದೊಳಗೆ ತಮ್ಮ ಬಿಡಾಡಿ ದನ ಹಾಗೂ ಹಂದಿಗಳನ್ನು ತಮ್ಮ ಸ್ವಂತ ಸ್ಥಳದಲ್ಲಿ ಕೂಡಿ ಹಾಕಿಕೊಂಡು ಸಾಕಬೇಕು. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಕಂಡುಬoದಲ್ಲಿ ಮಾಲೀಕರಿಗೆ ಯಾವುದೇ ಸೂಚನೆ ನೀಡದೆ ಅವುಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share