ಮೈಸೂರು ,ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಮೇಲಾಟದಲ್ಲಿ ಪ್ರತಿಭಾನ್ವಿತರು ಆಡಳಿತ ಅನುಭವ ದಾರರಿಗೆ ಅವಕಾಶಗಳು ಸಿಗುತ್ತಿವೆ ಎಂದು ಹಳೆಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗದ ಸಾಹಿತಿ ಬನ್ನೂರು ಕೆ ರಾಜು ಅವರು ತಿಳಿಸಿದ್ದಾರೆ.
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸಾಹಿತ್ಯ ಕ್ಷೇತ್ರದ ಕೋಟಾದಲ್ಲಿ ಅಡಗೂರು ಹೆಚ್ ವಿಶ್ವನಾಥ್ ಅವರನ್ನು ನಾಮ ನಿರ್ದೇಶನ ಮಾಡುವಂತೆ ಬಳಗದವರು ಒತ್ತಾಯಿಸಿದರು ಕಳೆದ ವರ್ಷ ನಡೆದ ರಾಜಕೀಯ ಧ್ರುವೀಕರಣ ದಲ್ಲಿ 17 ಬಂಡಾಯ ಶಾಸಕರು ಮಂತ್ರಿಗಳ ನಾಯಕತ್ವ ವಹಿಸಿ ಬಿಜೆಪಿ ಸರ್ಕಾರ ಬರಲು ಕಾರಣರಾದವರನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಕೈಬಿಟ್ಟಿರುವುದು ಸಮಂಜಸವಲ್ಲ ಏಕೆಂದರೆ ಅನುಭವ ಆಡಳಿತಗಾರರ ಸಾಮಾಜಿಕ ಚಿಂತನೆ ಪಾರದರ್ಶಕ ನಡವಳಿಕೆಗಳನ್ನು ರೂಢಿಸಿಕೊಂಡಿರುವ ಅಡಗೂರು ಹೆಚ್ ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ನಾಮ ನಿರ್ದೇಶನಗೊಳಿಸಲಾಗಿದೆ.
17 ಜನ ಬಂಡಾಯ ಶಾಸಕರನ್ನು ಒಗ್ಗೂಡಿಸಿ ನಾಯಕತ್ವ ವಹಿಸಿ ಸರ್ಕಾರ ಬರಲು ಕಾರಣರಾದ ನಾಯಕನನ್ನೇ ಕಡೆಗಣಿಸುವುದು ಎಷ್ಟು ಸರಿ ಎಂದು ಬಳಗದವರು ಪ್ರಶ್ನಿಸಿತು ವಿಶ್ವನಾಥ್ ರವರ ವಿಚಾರ ಅನುಭವವನ್ನು ಸರ್ಕಾರ ಬಳಸಿಕೊಳ್ಳುವುದು ಸೂಕ್ತವಾಗಿದೆ ಎಂದು ಗೆಳೆಯರ ಬಳಗದವರು ಸರ್ಕಾರಕ್ಕೆ ಸಲಹೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ.