ಬೆಂಗಳೂರು. ‘ಸಿದ್ದರಾಮಯ್ಯನವರೇ ಆರ್ಡರ್ ಮಾಡಬೇಡಿ, ಏನಿದ್ದರೂ ಆರ್ಡರ್ ಮಾಡಲು ಸಿಎಂ ಅಲ್ಲ’ ಎಂದು ಉಸ್ತುವಾರಿ ಕಂದಾಯ ಸಚಿವ ಅಶೋಕ್ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ನವರಿಗೆ ತನಿಖೆಗೆ ಆಗ್ರಹ ಪಡಿಸುವುದೇ ಒಂದು ಚಟ ಎಂದ ಅವರು ಸಿದ್ದರಾಮಯ್ಯನವರು ಹೇಳಿದ್ದಕ್ಕೆಲ್ಲ ತನಿಖೆ ಮಾಡಿಸಲು ಆಗುವುದಿಲ್ಲ, ಸರ್ಕಾರಕ್ಕೆ ಯಾವುದರ ಬಗ್ಗೆ ತನಿಖೆ ಮಾಡಿಸಬೇಕು ಎಂದು ಗೊತ್ತು ಎಂದು ಅಶೋಕ್ ಕಿಡಿಕಾರಿದರು.