ಸಿದ್ದರಾಮಯ್ಯ ಆಡಳಿತ ಎಲ್ಲರಿಗೂ ಮಾದರಿ’

 

ಸಿದ್ದರಾಮಯ್ಯ ಆಡಳಿತ ಎಲ್ಲರಿಗೂ ಮಾದರಿ’: ಮರಿಗೌಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ರಮಾಬಾಯಿ ನಗರ ನಿವಾಸಿಗಳ ಸಂಘದ ವತಿಯಿಂದ ಶಿವರಾಂಪುರ ಪಟ್ಟಣ ಪಂಚಾಯಿತಿನ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಿವನಾಯಕ್ ಅಧ್ಯಕ್ಷತೆಯಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿರುವ ನಾಯಕರಾಗಿದ್ದು ಅವರ ಆಡಳಿತ ವೈಖರಿ ಎಲ್ಲರಿಗೂ ಮಾದರಿ’ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮರಿಗೌಡ ತಿಳಿಸಿದರು.

ನಗರದ ರಮಬಾಯಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ
ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಚುನಾವಣೆ ವೇಳೆ ಘೋಷಣೆ ಮಾಡಿದ್ದ ಎಲ್ಲಾ ಭರವಸೆ ಈಡೇರಿಸುವ ಮೂಲಕ ತಮ್ಮ ಆಡಳಿತ ಬದ್ಧತೆ ತೋರಿಸಿದ್ದಾರೆ. ಬಡವರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಕಾಳಜಿಯೊಂದಿಗೆ ಬಡವರ ಹಸಿವು ನಿವಾರಿಸುತ್ತಿದ್ದಾರೆ. ಜನಪರ ಕಾರ್ಯಕ್ರಮ ಜಾರಿ ಮೂಲಕ ದಕ್ಷ ಆಡಳಿತಗಾರರಾಗಿರುವ ಅವರಿಗೆ ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ಉನ್ನತ ಅಧಿಕಾರ ಸಿಗುವಂತಾಗಲಿ’ ಎಂದು ಆಶಿಸಿದರು.
‘ಸಿದ್ದರಾಮಯ್ಯ ಹಿಂದುಳಿದ ಸಮುದಾಯದ ನಾಯಕರಾಗಿ ಬಡವರ ಕಷ್ಟ ನಿವಾರಿಸಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ನುಡಿದಂತೆ ನಡೆಯುತ್ತಿದ್ದಾರೆ’ ‘ಚುನಾವಣೆ ವೇಳೆ ಘೋಷಿಸಿದ್ದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದ ಏಕೈಕ ನಾಯಕ ಸಿದ್ದರಾಮಯ್ಯ ಅವರ ಆಡಳಿತವನ್ನು ಇಂದಿನ ರಾಜಕಾರಣಿಗಳು ಅನುಸರಿಸಲಿ’ ಎಂದರು.
‘ಮುಖ್ಯಮಂತ್ರಿಗಳ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚುತ್ತಿದೆ ಎಂದು ಶ್ಲಾಘಿಸಿದರು.

ನಾರಾಯಣ ಹೃದಯಾಲಯ
ವೈದ್ಯರು ಇದೇ ಸಂದರ್ಭದಲ್ಲಿ
210 ರೋಗಿಗಳು ಉಚಿತ ಆರೋಗ್ಯ ತಪಾಸಣೆ ಮಾಡಿದರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಇಕೋ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಾರಾಯಣ ಆಸ್ಪತ್ರೆಯ ವೈದ್ಯರು ಮಾಡಿದರು.

ಇದೇ ಸಂದರ್ಭದಲ್ಲಿ
ಶಿವ ನಾಯಕ್,
ಚುಡಾಮಣಿ, ಮಂಗರಾಜು, ಶಿವಕುಮಾರ್, ಪ್ರಶಾಂತ್ ,ಸುರೇಶ್ ,ಶ್ರೀನಿವಾಸ್, ಹಾಗೂ ಇನ್ನಿತರರು ಭಾಗವಹಿಸಿದರು