ಸಿದ್ದರಾಮಯ್ಯ ನವರ ಪುತ್ರ ರಾಕೇಶ್ ಪುಣ್ಯಸ್ಮರಣೆ: ಸೀರೆ ವಿತರಣೆ.

Share

ಅಖಿಲ ಕರ್ನಾಟಕ ಶ್ರೀ ರಾಕೇಶ್ ಸಿದ್ದರಾಮಯ್ಯನವರ ಅಭಿಮಾನಿ ಬಳಗದ
ವತಿಯಿಂದ

” ರಾಕೇಶ್ ನೀವು ಎಂದೆಂದಿಗೂ ಅಮರ ” ಪುಣ್ಯಸ್ಮರಣೆ ಕಾರ್ಯಕ್ರಮ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಜರುಗಿತು.

ನಾಡುಕಂಡ ಧೀಮಂತ ರಾಜಕರಣಿ ಮಾಜಿ ಮುಖ್ಯಮಂತ್ರಿಗಳೂ ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸುಪುತ್ರರಾದ ದಿ.ರಾಕೇಶ್ ಸಿದ್ದರಾಮಯ್ಯ ನವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮೊದಲ ಪುಣ್ಯಸ್ಮರಣೆಯ ನೆನಪಿನಲ್ಲಿ ನೆಟ್ಟ ಗಿಡಗಳು ಇಂದು ಸುಬ್ಬರಾಯನಕೆರೆಯಲ್ಲಿ ಆಳೆತ್ತರ ಬೆಳೆದು ನೆರಳು ನೀಡುತ್ತಿವೆ.ಅವರ ಸಾಮಾಜಿಕ ಸೇವೆಗಳು ಇಂದಿಗೂ ಅಜರಾಮರವಾಗಿ ಉಳಿದಿವೆ.ಆ ಹಿನ್ನೆಲೆಯಲ್ಲಿ ಆ ಮರಗಳ ನೆರಳಿನಲ್ಲೇ 4ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ರಾಕೇಶ್ ಸಿದ್ದರಾಮಯ್ಯನವರ ಅಭಿಮಾನಿಗಳು ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಡ ಮಹಿಳೆಯರಿಗೆ ಸೀರೆಗಳು ಹಾಗೂ ಮಾಸ್ಕ್ ವಿತರಿಸಿದರು.ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಬ್ಲಾಕ್ ಅಧ್ಯಕ್ಷರಾದ ಜಿ ಸೋಮಶೇಖರ್ ,ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಿಶ್ವನಾಥ್ (ವಿಶ್ವ),ಗುಣಶೇಖರ್ ,ನಾಗರಾಜು,ರಮೇಶ್,ಹರೀಶ್,ಮನಸು,ದಿಲೀಪ್,ಮಯೂರ್ ಮತ್ತಿತರರು ಉಪಸ್ಥಿತರಿದ್ದರು.


Share