ಸಿದ್ದು ಕೋಲಾರ ಸ್ಪರ್ಧೆ ಇನ್ನೂ ಅನಿಶ್ಚಿತತೆ

Share

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಈಗಾಗಲೇ ವರುಣ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕಲ್ಪಿಸಿದ್ದಾಗಿಯೂ ಸ್ವಲ್ಪ ಮಟ್ಟಿಗೆ ಭಯಪಟ್ಟಿರುವ ಅವರು ಕೋಲಾರದಿಂದಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ ಇಂದು ಬಿಡುಗಡೆಯಾದ ಎರಡನೇ ಪಟ್ಟಿಯಲ್ಲಿ ಕೋಲಾರ ಸ್ಪರ್ಧಿಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಸಿದ್ದುಗೆ ಕೋಲಾರದಿಂದ ಎರಡನೇ ಸ್ಥಾನ ಕಲ್ಪಿಸುವ ಬಗ್ಗೆ ಪಕ್ಷದಲ್ಲೇ ಕೆಲ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ನಿನ್ನೆಯ ದಿನ ತಯಾರಿಸಲಾಗಿದ್ದ 57 ಅಭ್ಯರ್ಥಿಗಳ ಪಟ್ಟಿ, ಅಂತಿಮ ಹಂತದಲ್ಲಿ ಪರೀಕ್ಷಕರಣೆಗೊಂಡು ಇಂದು ಕೇವಲ 42 ಸ್ಥಾನಗಳಿಗೆ ಮಾತ್ರ ಘೋಷಿಸಲಾಗಿದೆ. ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸುವ ಬಗ್ಗೆ ಅರ್ಧ ಮನಸ್ಸಿನಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಅಲ್ಲಿಯೂ ತಣ್ಣೀರು ಎರಚಲಾಗಿದೆ,
ಈಗ ಅಲ್ಲಿ ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಪಾಲಾಗಿದೆ. ಆದುದರಿಂದ ಬಾದಾಮಿ ಸಿದ್ದರಾಮಯ್ಯ ರವರಿಗೆ ಇಲ್ಲ ಎಂಬುದು ನಿಶ್ಚಿತವಾಗಿ ತೀರ್ಮಾನವಾಗಿದೆ. ಮುಂಬರುವ ವಿಧಾನಸ ಭಾ ಚುನಾವಣೆಯ ಮೊದಲನೆಯ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಒಮ್ಮೆ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಯಾವುದೇ ಅಭ್ಯರ್ಥಿಗೆ ಎರಡು ಕಡೆ ನಿಲ್ಲುವ ಅವಕಾಶ ಕೊಡಬಾರದೆಂಬುದು ತಮ್ಮ ನಿಲುವು ಆದರೆ ಪಕ್ಷದ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಶಿವಕುಮಾರ್ ಅವರ ಅನಿಸಿಕೆ ಸ್ವಲ್ಪಮಟ್ಟಿಗೆ ಕೆಲಸ ಮಾಡಿದ ಹಾಗೆ ಕಂಡು ಬರುತ್ತಿದೆ.
ಅತಿ ಶೀಘ್ರದಲ್ಲೇ ಕಾಂಗ್ರೆಸ್ ನ ರಾಹುಲ್ ಗಾಂಧಿ ಕೋಲಾರಕ್ಕೆ ಭೇಟಿ ನೀಡುತ್ತಿದ್ದು , ಬಹುಶಹ ಅಲ್ಲಿಯ ವಾತಾವರಣ ನೋಡಿಕೊಂಡು ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಡಬೇಕೆ ಬೇಡವೇ ಎಂಬುದು ತೀರ್ಮಾನವಾಗಲಿದೆ, ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಳೆದ ಬಾರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಜಿಟಿ ದೇವೇಗೌಡರ ಎದುರು ಕೈ ಸುಟ್ಟುಕೊಂಡಿರುವುದರಿಂದ ಈ ಬಾರಿಯ ವರುಣಾ ಕ್ಷೇತ್ರವನ್ನು ಹೇಗೆ ಎದುರಿಸಲಿದ್ದಾರೆ ಎಂಬುದೇ ಕುತೂಹಲ.
ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ ಟಿ ದೇವೇಗೌಡ ಅಥವಾ ಸಂಭವನೀಯ ಅಭ್ಯರ್ಥಿ ಗೌಡರ ಪುತ್ರ ಹರೀಶ್ ಗೌಡ ರವರಿಗೆ ಜನತಾದಳದ ಟಿಕೆಟ್ ಲಭಿಸುವ ಸಾಧ್ಯತೆ ಇದ್ದು ಈಗ ಕಾಂಗ್ರೆಸ್ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯ ಪ್ರಕಾರ ಸಿದ್ದೇಗೌಡರು ಕಣದಲ್ಲಿರುತ್ತಾರೆ.
ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಅಥವಾ ಒಂದರಲ್ಲಾದರೂ ಸರಿ ಸ್ಪರ್ಧಿಸಿ ತಾವೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಹೊತ್ತಿರುವ ಸಿದ್ದರಾಮಯ್ಯನವರ ಪರಿಸ್ಥಿತಿ ಏನು ಎಂಬುದು ಕಾದು ನೋಡಬೇಕು? ಒಂದು ವೇಳೆ ಕೋಲಾರ ಹಾಗೂ ವರುಣಾದಲ್ಲಿ ಸಿದ್ದರಾಮಯ್ಯ ಗೆದ್ದು ಬಂದರೆ ಕೊನೆಯದಾಗಿ ಕೋಲಾರ ಉಳಿಸಿಕೊಂಡು, ವರುಣ ಕ್ಷೇತ್ರ ಕೈ ಬಿಟ್ಟು ಮುಂದಿನ ದಿನಗಳಲ್ಲಿ ವರುಣ ಕ್ಷೇತ್ರಕ್ಕೆ ನಡೆಯುವ ಮರು ಚುನಾವಣೆಯಲ್ಲಿ ಈಗ ಸ್ಥಾನ ತ್ಯಾಗ ಮಾಡಿರುವ ತಮ್ಮ ಮಗ ಮಗನಿಗೆ ಬಿಟ್ಟು ಕೊಡಬೇಕೆಂಬ ಆಶಯ ಹೊಂದಿದ್ದರೆಂದು ಕಾಂಗ್ರೆಸ್ ಪಕ್ಷ ಅಭಿಪ್ರಾಯ ಪಟ್ಟಿದೆ. ಒಟ್ಟಾರೆ ಈಗ ಸಿದ್ದು ಭವಿಷ್ಯ ಹೈಕಮಾಂಡ್ ಅಂಗಳದಲ್ಲಿ ನಿಂತಿದೆ.


Share