ಸಿಬ್ಬಂದಿಗೆ ಕೈ ಎತ್ತಿದ ಪ್ರಯಾಣಿಕ : ಡೆಲ್ಲಿ ಲಂಡನ್ ವಿಮಾನ ತುರ್ತಾಗಿ ವಾಪಸ್

Share

ಹೊಸದಿಲ್ಲಿ: ಏರ್‌ ಇಂಡಿಯಾ ದಿಲ್ಲಿ-ಲಂಡನ್‌ ನಡುವಿನ ವಿಮಾನ ಸೋಮವಾರ ಟೇಕ್‌ ಆಫ್‌ ಆದ ಮೂರು ಗಂಟೆಗಳಲ್ಲಿ ವಾಪಸ್ಸು ಮರಳಿದ್ದು, ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಇಬ್ಬರು ಕ್ಯಾಬಿನ್‌ ಸಿಬ್ಬಂದಿಗೆ ಹೊಡೆದ ಘಟನೆ ನಡೆದಿದೆ.
ಬೋಯಿಂಗ್ 787 ಸೋಮವಾರ ಬೆಳಿಗ್ಗೆ 6.52 ಕ್ಕೆ ಟೇಕ್ ಆಫ್ ಆಗಿದ್ದು 9.36 ಕ್ಕೆ ಮರಳಿದೆ.
ಮೂಲಗಳ ಪ್ರಕಾರ, ಪ್ರಯಾಣಿಕನು ಟೇಕ್ ಆಫ್ ಆದ ಕೂಡಲೇ ಅಶಿಸ್ತಿನಿಂದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದನಂತೆ.
ಟಿಪ್ಸಿ ಕಾನ್ಪುರ್ ಪ್ರಯಾಣಿಕ ವಿಮಾನದ ಮಧ್ಯಭಾಗದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದನಂತೆ.
“ಅವರು ನಮ್ಮ ಇಬ್ಬರು ಸಿಬ್ಬಂದಿಗೆ ಹೊಡೆದರು. ವಿಮಾನವು ಗಮ್ಯಸ್ಥಾನಕ್ಕೆ ಮುಂದುವರಿಯಲು ಸಾಧ್ಯವಾಗಲಿಲ್ಲ ಮತ್ತು ದೆಹಲಿಗೆ ಮರಳಿತು. ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಮತ್ತು ದೂರು ದಾಖಲಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
“ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳಿಗೆ ಕಿವಿಗೊಡದೆ, ಪ್ರಯಾಣಿಕನು ಅಶಿಸ್ತಿನ ವರ್ತನೆಯನ್ನು ಮುಂದುವರೆಸಿದನು ಮತ್ತು ಕ್ಯಾಬಿನ್ ಸಿಬ್ಬಂದಿಯ ಇಬ್ಬರಿಗೆ ದೈಹಿಕ ಹಾನಿಯನ್ನುಂಟುಮಾಡಿದ್ದಾನೆ.
ಪ್ರಯಾಣಿಕನನ್ನು ಇಳಿಸಿದ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಪೊಲೀಸರಿಂದ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

* ಸಾಂದರ್ಭಿಕ ಚಿತ್ರ


Share