ಸುದ್ದಿ ಗವಾಕ್ಷಿ

571
Share

ಡಿಜಿಟಲ್ ಲೈಬ್ರರಿಯ ಅನುಕೂಲಗಳು ಮತ್ತು ಲಾಭ ಪಡೆದುಕೊಳ್ಳಿ: ಡಾ.ಸತೀಶ್ ಕುಮಾರ್ ಎಸ್. ಹೊಸಮನಿ
ಮೈಸೂರು, . (ಕರ್ನಾಟಕ ವಾರ್ತೆ):- ಆಧುನಿಕ ತಂತ್ರಜ್ಞಾನದ ಮುಖಾಂತರ ಗ್ರಂಥಾಲಯ ಇಲಾಖೆಯಲ್ಲಿ ಲಭ್ಯವಿರುವ ಡಿಜಿಟಲ್ ಲೈಬ್ರರಿಯ ಅನುಕೂಲಗಳು ಮತ್ತು ಲಾಭಗಳನ್ನು ಲಾಕ್‍ಡೌನ್ ಸಮಯದಲ್ಲಿ ಅತ್ಯಂತ ಗರಿಷ್ಟಮಟ್ಟದಲ್ಲಿ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೇಗೆ ವಿಶೇಷವಾಗಿ ಬಳಸಿಕೊಳ್ಳಬಹುದು ಎಂದು ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಅವರು ತಿಳಿಸಿದರು.
 ಮೈಸೂರು ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಗ್ರಂಥಾಲಯ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳವಾರ “ಇ-ಆಡಳಿತ, ಇ-ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ” ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕ  ಬಿ.ಮಂಜುನಾಥ್ ಅವರು ಇ-ಆಡಳಿತದ ಮುಖಾಂತರ ಡಿಜಿಟಲ್ ಲೈಬ್ರರಿ ಬಳಸಿಕೊಳ್ಳುವ ವಿಧಾನವನ್ನು ವಿವರಿಸಿದರು. ತಿತಿತಿ.ಞಚಿಡಿಟಿಚಿಣಚಿಞಚಿಜigiಣಚಿಟಠಿubಟiಛಿಟibಡಿಚಿಡಿಥಿ.oಡಿg ಅಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿ ಪ್ರಸ್ತುತ ನೋಂದಾಯಿಸಿಕೊಂಡು ಇದರ ಸೇವೆಯನ್ನು ಪಡೆಯುತ್ತಿದ್ದಾರೆ. ಮನೆಯಲ್ಲಿಯೇ ಆಶ್ರಯಿಸಿ ಡಿಜಿಟಲ್ ಲೈಬ್ರರಿ ಮೂಲಕ ತಮಗೆ ಇಷ್ಟವಾದ ಪುಸ್ತಕಗಳನ್ನು ಓದಬಹುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ವಿ.ಶಿವರಾಮಯ್ಯ ಅವರು ಡಿಜಿಟಲ್ ಲೈಬ್ರರಿಯ ಸ್ವರೂಪವನ್ನು ವಿವರಿಸುತ್ತಾ, ಈ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆ ಇರುವುದರಿಂದ ಇನ್ನೂ ಮೂರು ತಂಡಗಳನ್ನು ರಚಿಸುವುದಾಗಿ ತಿಳಿಸಿದರು.  
ಬಿಸಿನೆಸ್ ಗ್ರೂಪ್ ಮಧುರ ಭಟ್ ಮತ್ತು ಗುರುಪ್ರಸಾದ್ ಇವರು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಡಿಜಿಟಲ್ ಲೈಬ್ರರಿ ಬಳಕೆಯ ವಿಧಾನಗಳು ಮತ್ತು ವಿವಿಧ ಹಂತಗಳು ಹಾಗೂ ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ವಿವರಗಳನ್ನು ನೀಡಿದರು.
ಈ ತರಬೇತಿ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸುಮಾರು 250 ಜನ ಇದರ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಆಡಳಿತ ತರಬೇತಿ ಸಂಸ್ಥೆ ಬೋಧಕರಾದ ನಾಗೇಂದ್ರ, ಪತ್ರಾಂಕಿತ ಬೋಧಕರಾದ ಭಾರತಿ, ಜಗದಾಂಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲಾ ಪ್ರವಾಸ
ಮೈಸೂರು, ಮೇ.26.(ಕರ್ನಾಟಕ ವಾರ್ತೆ):- ಜಲಸಂಪನ್ಮೂಲ ಸಚಿವರಾದ ರಮೇಶ್ ಲ. ಜಾರಕಿಹೊಳಿ ಅವರು ಮೇ 28 ಮತ್ತು 29 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮೇ 27 ರಂದು ರಾತ್ರಿ 9 ಗಂಟೆಗೆ ಆಗಮಿಸಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಅವರು ಮೇ 28 ರಂದು ಬೆಳಿಗ್ಗೆ 8 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡುವರು. ಬೆಳಿಗ್ಗೆ 10 ಗಂಟೆಗೆ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲಾ ಸಮಾಜದ ಮುಖಂಡರನ್ನು ಭೇಟಿ ಮಾಡಲಿದ್ದಾರೆ. 10.30 ಗಂಟೆಗೆ ಲಕ್ಷ್ಮಿಪುರಂನಲ್ಲಿರುವ ಮಾಧವಕೃಪದಲ್ಲಿ ಆರ್.ಎಸ್.ಎಸ್ ಹಿರಿಯ ಪ್ರಚಾರಕರೊಂದಿಗೆ ಚರ್ಚಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ರಾಮಸ್ವಾಮಿ ವೃತ್ತದಲ್ಲಿರುವ ರಾಜೇಂದ್ರಸೌಧದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 12.30 ಗಂಟೆಗೆ ಕಬಿನಿ ಜಲಾಶಯಕ್ಕೆ ಭೇಟಿ ನೀಡುವ ಅವರು, ಜಲಾಶಯ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
      ಮಧ್ಯಾಹ್ನ 3.30 ಗಂಟೆಗೆ ನಗರದಲ್ಲಿ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸುವರು.  
ಸಂಜೆ 7 ಗಂಟೆಗೆ ಲೋಕಸಭಾ ಸದಸ್ಯರಾದ ಶ್ರೀನಿವಾಸ ಪ್ರಸಾದ್ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡುವರು. ನಂತರ ಮೈಸೂರಿನಲ್ಲೇ ವಾಸ್ತವ್ಯ ಮಾಡುವರು.
ಮೇ 29 ರಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುವರು.  

ಜೂನ್ 2 ರಂದು ಕೆಡಿಪಿ ಸಭೆ
ಮೈಸೂರು, ಪಂಚಾಯಿತಿ ವತಿಯಿಂದ ಜೂನ್ 2 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರ ನೇತೃತ್ವದಲ್ಲಿ ಮಾಸಿಕ ಕೆ.ಡಿ.ಪಿ ಸಭೆಯನ್ನು ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆದೇಶ ಉಲ್ಲಂಘಿಸಿದರೆ ಕ್ರಮ
ಮೈಸೂರು,ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬೇರೆ ರಾಜ್ಯಗಳಿಂದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಲಾರಿ ಮೂಲಕ ಸಾಗಿಸುತ್ತಿರುವುದು ಹಾಗೂ ಇತರೆ ವಾಹನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸದರಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವುದು ಹಾಗೂ ಆಲೆಮನೆಗಳಲ್ಲಿ ತ್ಯಾಜ್ಯವನ್ನು ಬಳಸಿ ಸುಡಲಾಗುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರವಾಗಿ ಹಾನಿಯುಂಟಾಗುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಇತರೆ ರಾಜ್ಯದ ತ್ಯಾಜ್ಯವನ್ನು ಮೈಸೂರು ಜಿಲ್ಲೆಯಲ್ಲಿ ವಿಲೇವಾರಿ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಷೇಧಾಜ್ಞೆ ತಿದ್ದುಪಡಿ
ಮೈಸೂರು, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಲಂ 144 ಸಿ.ಆರ್.ಪಿ.ಸಿ ಹಾಗೂ ಕಲಂ 31 ಕೆ.ಪಿ.ಆಕ್ಟ್ ಅಡಿಯಲ್ಲಿ ಮೇ 18 ರಿಂದ ಮೇ 31 ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, 5ಕ್ಕಿಂತ ಹೆಚ್ಚು ಸಾರ್ವಜನಿಕರು ಒಟ್ಟಾಗಿ ಸೇರುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆಯನ್ನು ಘೋಷಿಸಿದ್ದು, ಈ ನಿಷೇಧಾಜ್ಞೆಯಲ್ಲಿ ಮಾರ್ಪಾಡು ಮಾಡಿ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಆದೇಶಿಸಿರುತ್ತಾರೆ.
ಲಾಕ್‍ಡೌನ್ ಅವಧಿಯ ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಅಗತ್ಯ ಸೇವೆಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಮತ್ತು ವೈದ್ಯಕೀಯ ಸೇವೆಗಳಿಗೆ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರ ಮತ್ತು ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪುನರಾರಂಭಗೊಂಡ ಕರ್ನಾಟಕ ಒನ್ ಕೇಂದ್ರಗಳು
ಮೈಸೂರು ಆದೇಶದ ಮೇರೆಗೆ, ನಗರದ ಕರ್ನಾಟಕ ಓನ್ ಕೇಂದ್ರಗಳು ತೆರೆಯಲಾಗಿದ್ದು, ಸಾರ್ವಜನಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ಕ್ರಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬೆಳಿಗ್ಗೆ 8:00 ರಿಂದ ಸಂಜೆ 6:00 ವರೆಗೆ ಕಚೇರಿ ತೆರೆದಿದ್ದು,  ಆಸ್ತಿ ಕರ, ವಿದ್ಯುತ್ ಬಿಲ್, ನೀರಿನ ಬಿಲ್, ಸಬ್ಸಿಡಿಯಲ್ಲಿ ಎಲ್‍ಇಡಿ ಬಲ್ಬ್‍ಗಳು ಹಾಗೂ ಇತರೆ ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಲಸೆ ಕಾರ್ಮಿಕರಿಗೂ ಸಿಗಲಿದೆ ಪಡಿತರ
ಮೈಸೂರು, 19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ನಗರದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಮೇ-2020 ಮತ್ತು ಜೂನ್ ಮಾಹೆಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಅನೌಪಚಾರಿಕ ಪಡಿತರ ಸಹಾಯಕ ನಿರ್ದೇಶಕರಾದ ಹೆಚ್.ಕೆ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
     2020 ರ ಮೇ ಮಾಹೆಯ ಹಂಚಿಕೆಯನ್ನು ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಯನ್ನು ದಿ:26.05.2020 ರಿಂದ 31.05.2020 ರವರೆಗು ಹಾಗೂ ಜೂನ್-2020 ರ ಮಾಹೆಯ ಹಂಚಿಕೆಯನ್ನು 01.06.2020 ರಿಂದ 10.06.2020 ರವರೆಗೆ 05 ಕೆ.ಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರವು ನೀಡುವ ಕಡಲೆಕಾಳನ್ನು ವಿತರಿಸಲಾಗುವುದು. ಮೇ ಮಾಹೆಯಲ್ಲಿ ಆಹಾರ ಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್-2020 ರ ಮಾಹೆಯಲ್ಲಿ ಒಟ್ಟಿಗೆ ಅಂದರೆ 10 ಕೆ.ಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ ಹಂಚಿಕೆಯಂತೆ ಕಡಲೆಕಾಳನ್ನು ಪಡೆಯಲು ಅರ್ಹರಿರುತ್ತಾರೆ.
     ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪುಮಾಹಿತಿ ನೀಡಿ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 52 ರಡಿ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು.
ವಿತರಣೆ ಮಾಡುವ ನ್ಯಾಯ ಬೆಲೆ ಅಂಗಡಿಗಳ ವಿವರ: ದೇವರಾಜ ಮೊಹಲ್ಲಾ ವ್ಯಾಪ್ತಿಯಲ್ಲಿ 1. ರೈಲ್ವೆ ಸಿಸಿಎಸ್(ಎಫ್‍ಪಿಎಸ್ ನಂ:359), ಜನತಾ ಸಾಮಿಲ್ ಹಿಂಭಾಗ, ಬಂಬೂಬಜಾರ್. 2.ಪಿ & ಟಿ ಸಿಸಿಎಸ್(ಎಫ್‍ಪಿಎಸ್ ನಂ:357), ಮೇದರ್ ಬ್ಲಾಕ್, ಬಂಬೂಬಜಾರ್. ಹೆಚ್ಚಿನ ಮಾಹಿತಿಗೆ ದೇವರಾಜ ಮೊಹಲ್ಲಾದ ಆಹಾರ ನಿರೀಕ್ಷರಾದ ಟಿ.ಜೆ.ಲಕ್ಷ್ಮಿ, ದೂರವಾಣಿ ಸಂಖ್ಯೆ 8123377872 ಅನ್ನು ಸಂಪರ್ಕಿಸುವುದು.
       ಮಂಡಿಮೊಹಲ್ಲಾ ವ್ಯಾಪ್ತಿಯಲ್ಲಿ 1)ರಿಟೈರ್ಡ್ ಪೀಪಲ್ ಸಿಸಿಎಸ್ (ಎಫ್‍ಪಿಎಸ್ ನಂ:333), ಎನ್.ಆರ್.ಮೊಹಲ್ಲಾ. 2)ಹನುಮಂತನಗರ ಸಿಸಿಎಸ್(ಎಫ್‍ಪಿಎಸ್ ನಂ:170), ಬನ್ನಿಮಂಟಪ. 3)ಆರ್.ಎಸ್ ನಾಯ್ಡು ಮಹಿಳಾ ಸಿಸಿಎಸ್(ಎಫ್‍ಪಿಎಸ್ ನಂ:320), ಕೆಸರೆ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ಪಿ.ನವೀನ್‍ಕುಮಾರ್, 9686868068 ಅನ್ನು ಸಂಪರ್ಕಿಸುವುದು.
ನಜರ್‍ಬಾದ್‍ನ ವ್ಯಾಪ್ತಿಯಲ್ಲಿ 1)ಎಂ.ಮಹದೇವಮೂರ್ತಿ ಎಫ್‍ಪಿಎಸ್(ನಂ:291). 2)ಶಂಕರ್ ವೆಂಕಟೇಶ್ವರ ಎಫ್‍ಪಿಎಸ್(ನಂ:161), ಕಲ್ಯಾಣಗಿರಿ, ಸಿದ್ದಾರ್ಥನಗರ, 3)ಇಂದಿರಾ ವಿನಾಯಕ ಎಫ್‍ಪಿಎಸ್(ನಂ:293), ಕ್ಯಾತಮಾರನಹಳ್ಳಿ, 4)ಕುರುಬಾರಹಳ್ಳಿ ಸಿಸಿಎಸ್(ನಂ:151), ಕುರುಬಾರಹಳ್ಳಿ. 5)ಬೀಡಿ ಮಜ್ದೂರ್ ಸಿಸಿಎಸ್(ನಂ:162), ಅಜೀಜ್‍ಸ್ಭೆಠ್‍ನಗರ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ಬಿ.ಸಿ.ಮೋಹನ್, 9448343509 ಇವರನ್ನು ಸಂಪರ್ಕಿಸುವುದು.
ಕೆ.ಆರ್.ಮೊಹಲ್ಲಾ ವ್ಯಾಪ್ತಿಯಲ್ಲಿ 1)ಲಕ್ಷ್ಮೀಪುರಂ ಸಿಸಿಎಸ್(ಮುಖ್ಯ)(ನಂ:240), ಮಾನಂದವಾಡಿ ರಸ್ತೆ, ಲಕ್ಷ್ಮೀಪುರಂ. 2)ಶ್ರೀ ಚಾಮುಂಡೇಶ್ವರಿ ಮಹಿಳಾ ಸಿಸಿಎಸ್(ನಂ:263), ಕನಕಗಿರಿ. 3)ಬೆಸ್ತರ್ ಬ್ಲಾಕ್ ಸಿಸಿಎಸ್ ಮುಖ್ಯ(ನಂ:259), ವಿದ್ಯಾರಣ್ಯಪುರಂ. 4)ಶ್ರೀ ಚಾಮುಂಡೇಶ್ವರಿ ಎಫ್‍ಪಿಎಸ್(ನಂ:149), ಗುಂಡೂರಾವನಗರ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ಬಿ.ಸಿ.ಮೋಹನ್, 9448343509 ಇವರನ್ನು ಸಂಪರ್ಕಿಸುವುದು.
ಖಿಲ್ಲೆ ಮೊಹಲ್ಲಾ ವ್ಯಾಪ್ತಿಯಲ್ಲಿ 1)ಲಕ್ಷ್ಮೀವೆಂಕಟೇಶ್ವರ ಎಫ್‍ಪಿಎಸ್(ನಂ:144), ನಾಚನಹಳ್ಳಿಪಾಳ್ಯ, ಜೆ.ಪಿ.ನಗರ, 2)ಶ್ರೀ ಚಾಮುಂಡೇಶ್ವರಿ ಸಿಸಿಎಸ್(ನಂ:224), ಜಯನಗರ, 3)ವಿಶ್ವೇಶ್ವರ ನಗರ ಸಿಸಿಎಸ್(ನಂ:274), ವಿಶ್ವೇಶ್ವರ ನಗರ ಹಾಗೂ ವಿದ್ಯಾರಣ್ಯಪುರಂ ಸಿಸಿಎಸ್ ಬ್ರಾಂಚ್-2(ನಂ:272), 4)ವಿದ್ಯಾರಣ್ಯಪುರಂ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ರತ್ನಮ್ಮ, 9964807138 ಇವರನ್ನು ಸಂಪರ್ಕಿಸುವುದು.
      ಚಾಮರಾಜ ವ್ಯಾಪ್ತಿಯ 1)ಬೋರಯ್ಯ ಎಫ್‍ಪಿಎಸ್(ನಂ:219), ಸರಸ್ವತಿಪುರಂ, 2)ಗುರುಮಲ್ಲೇಶ್ವರ ಎಫ್‍ಪಿಎಸ್(ನಂ:203), ಹುಡ್ಕೊ ಬಡಾವಣೆ, ಕುವೆಂಪುನಗರ, 3)ಕಲ್ಪತರು ಸಿಸಿಎಸ್(ನಂ:208), ಮಾರುತಿ ಟೆಂಟ್ ರಸ್ತೆ, ಜನತಾನಗರ. 4) ತಿರುಮಲ ಎಫ್‍ಪಿಎಸ್(ನಂ:206), ಜಿ. ಬ್ಲಾಕ್, ರಾಮಕೃಷ್ಣನಗರ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ನಂದೀಶ್.ಕೆ.ಆರ್, 7829664260 ಇವರನ್ನು ಸಂಪರ್ಕಿಸುವುದು.
ವಿ.ವಿ ವ್ಯಾಪ್ತಿಯಲ್ಲಿ 1)ಶಿವಮಾದು ವಿನಾಯಕ ಎಫ್‍ಪಿಎಸ್(ನಂ:121), ಕುಂಬಾರಕೊಪ್ಪಲು, 2)ವÉುೀಟಗಳ್ಳಿ ಸಿಸಿಎಸ್(ನಂ:122), ಮೇಟಗಳ್ಳಿ, 3)ಜನಹಿತ ಸಿಸಿಎಸ್(ನಂ:187), ಪಡುವಾರಹಳ್ಳಿ, 4)ಗಂಗೋತ್ರಿ ಸಿಸಿಎಸ್(ನಂ:213), ಗಂಗೋತ್ರಿ ಬಡಾವಣೆ ಗಂಗೋತ್ರಿ ಸಿಸಿಎಸ್(ನಂ:213), ಗಂಗೋತ್ರಿ ಬಡಾವಣೆ 5)ಕುಸುಮ ಎಫ್‍ಪಿಎಸ್(ನಂ:190)ಮಂಚೇಗೌಡನಕೊಪ್ಪಲು. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ ವೇಣುಗೋಪಾಲ್.ಬಿ.ಎಸ್ 9901253634 ಇವರನ್ನು ಸಂಪರ್ಕಿಸುವುದು.
     ಎನ್.ಆರ್/ಲಷ್ಕರ್ ವ್ಯಾಪ್ತಿಯಲ್ಲಿ 1)ಈದಿಗಾ ಬ.ಸ.ಸಂ.ಶಾಖೆ(ನಂ:311), ರಾಜೀವ್‍ನಗರ, 2)ವೆಂಕಟೇಶ್ವರ ಎಫ್‍ಪಿಎಸ್(ನಂ:298), ಯರಗನಹಳ್ಳಿ, 3)ಆದಿಶಕ್ತಿ ಸಿಸಿಎಸ್(ನಂ:174), ಗಾಂಧಿನಗರ ಹಾಗೂ ಆರ್.ರಮೇಶ್ ಎಫ್‍ಪಿಎಸ್, (ನಂ:346), ಉದಯಗಿರಿ. ಹೆಚ್ಚಿನ ಮಾಹಿತಿಗೆ ಆಹಾರ ನಿರೀಕ್ಷಕರಾದ 4)ಆರ್.ಜಗದೀಶ್, 9902228311 ಇವರನ್ನು ಸಂಪರ್ಕಿಸುವಂತೆ ಅನೌಪಚಾರಿಕ ಪಡಿತರ ಸಹಾಯಕ ನಿರ್ದೇಶಕರಾದ ಹೆಚ್.ಕೆ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಾರ್ವಜನಿಕರ ಗಮನಕ್ಕೆ
ಮೈಸೂರು. ಕಾರ್ಮಿಕ ಇಲಾಖೆ ವತಿಯಿಂದ ಕೋವಿಡ್-19 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಹಾಯಧನ ನೀಡುತ್ತಿದ್ದು, ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಯಾವುದೇ ಧನ ಸಹಾಯಗಳಿಗೆಗಾಗಿ ಯಾವುದೇ ವ್ಯಕ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಮೈಸೂರು ಕೇಂದ್ರದಲ್ಲಿ ಹಾಗೂ ತಾಲ್ಲೂಕುಗಳಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ಸಂಪರ್ಕಿಸುವುದು.
      ಧನಸಹಾಯಗಳಿಗಾಗಿ ಹಾಗೂ ಹೊಸ ನೋಂದಣಿ ಮತ್ತು ನವೀಕರಣಕ್ಕೆ ಕೆಲವು ಸಂಘಟನೆಗಳು ಹಾಗೂ ಕೆಲವರು ತಾವು ಫೀಲ್ಡ್ ಅಧಿಕಾರಿಗಳೆಂದು ಗುರುತಿನ ಚೀಟಿ ನೀಡುವುದು, ದಾಖಲೆ ಸಂಗ್ರಹಿಸುವುದು, ಪತ್ರಿಕಾ ಪ್ರಕಟಣೆ ಮಾಡಿರುವುದು ಈ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಯಾವುದೇ ಫಲಾನುಭವಿಸಗಳಿಂದ ಈ ರೀತಿ ಹಣ ವಸೂಲಿ ಮಾಡಿದಲ್ಲಿ ಆ ಸಂಸ್ಥೆ ಅಥವಾ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವಂತೆ  ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿರುತ್ತಾರೆ.
5 ಸಾವಿರ ಸಹಾಯಧನವನನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಇದಕ್ಕಾಗಿ ಮಂಡಳಿ ವತಿಯಿಂದ ನೀಡಲಾಗಿರುವ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳನ್ನು ಮಂಡಳಿಯ ವ್ಯಾಟ್ಯಾಪ್ ಸಂಖ್ಯೆ 9632003955 ಗೆ ಕಳುಹಿಸುವುದು ಅಥವಾ ಕಾರ್ಮಿಕ ಅಧಿಕಾರಿ ಅವರ ಕಚೇರಿಗೆ ಸಲ್ಲಿಸುವಂತೆ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ನಿಲುಗಡೆ
ಮೈಸೂರು, ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 28 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರಗೆ 66/11 ಕೆ.ವಿ. ದೇವನೂರು (ಮೈಸೂರು) ಮತ್ತು ಸೌತ್ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ದೇವನೂರು ವಿ.ವಿ. ಕೇಂದ್ರದ ವ್ಯಾಪ್ತಿಯ ರಾಜೀವ್‍ನಗರ 1ನೇ, 2ನೇ ಮತ್ತು 3ನೇ ಹಂತ, ಶಾಂತಿನಗರ, ನೆಹರೂನಗರ, ರಾಧಕೃಷ್ಣ ನಗರ, ಭಾರತ್‍ನಗರ, ಜೆ.ಎಸ್.ಎಸ್. ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್ ವಕ್ರ್ಸ್, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ಮತ್ತು ಬನ್ನೂರು ರಿಂಗ್ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಸೌತ್ ವಿ.ವಿ. ಕೇಂದ್ರದ ವ್ಯಾಪ್ತಿಯ ನಂಜುಮಳಿಗೆ ವೃತ್ತ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ನಾರಾಯಣಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲ ಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರೀಯಲ್ ಸಬರ್ಬ್, ವಿಶ್ವೇಶ್ವರಯ್ಯ ನಗರ,  ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ, ಗುಂಡುರಾವ್ ನಗರ,  ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೈಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ. ಕೊಪ್ಪಲ್, ಶಿವಪುರ, ಆದಿಚುಂಚನಗಿರಿ ರಸ್ತೆ, ಜೆ.ಪಿ.ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ನಿಲುಗಡೆ
 ಮೈಸೂರುು ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 28 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರಗೆ 66/11 ಕೆ.ವಿ. ಕಾರ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಕಾರ್ಯ ವಿದ್ಯುತ್ ವಿತರಣಾ ವ್ಯಾಪ್ತಿಯ ಹಾಡ್ಯ, ಕಾಹಳ್ಳಿ, ಕಾಮಳ್ಳಿ, ಕಾರ್ಯ, ಅರಳಿಕಟ್ಟೆಹುಂಡಿ, ಬಾನೂರು, ಚಿನ್ನಂಬಳ್ಳಿ, ಚುಂಚನಹಳ್ಳಿ, ಹನುಮನಪುರ, ಕಕ್ಕರಹಟ್ಟಿ. ಭೋಗಯ್ಯನಹುಂಡಿ ಗ್ರಾಮಗಳು/ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸುತ್ತುಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಣೆಯಾಗಿರುವ ವ್ಯಕ್ತಿ ಪತ್ತೆಗಾಗಿ ಮನವಿ
ಮೈಸೂರು, – ಮೈಸೂರು ದಕ್ಷಿಣ ಪೆÇಲೀಸ್ ಠಾಣೆ ವ್ಯಾಪ್ತಿಗೆ ಬರುವ ತಳ್ಳೂರು ಗ್ರಾಮದ ನಿವಾಸಿಯಾಗಿರುವ ಮಹದೇವ ಬಿನ್ ಮಂಚಶೆಟ್ಟಿ ಎಂಬುವರು 10 ವರ್ಷಗಳ ಹಿಂದೆ ಮನೆಯಿಂದ ಹೊರಟು ಕಾಣೆಯಾಗಿರುತ್ತಾರೆ. ಈ ಕುರಿತು ಮಹದೇವ ಅವರ ಅಣ್ಣ ಮೈಸೂರು ದಕ್ಷಿಣ ಪೆÇಲೀಸ್ ಠಾಣೆÉಯಲ್ಲಿ ದೂರು ದಾಖಲಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಇಂತಿದೆ:- ವಯಸ್ಸು 35, 5.5 ಅಡಿ ಎತ್ತರ, ಕೋಲುಮುಖ, ದೃಡಕಾಯ ಶರೀರ, ಎಣ್ಣೆ ಗೆಂಪು ಮೈಬಣ್ಣ, ಕಪ್ಪು ಕೂದಲು, ಕನ್ನಡ ಭಾμÉ ಮಾತನಾಡುತ್ತಾರೆ, ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ದಕ್ಷಿಣ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ 08212444955, ಮೈಸೂರು ನಗರ ಪೆÇಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ- 2444800, ಮೈಸೂರು ದಕ್ಷಿಣ ಪೆÇಲೀಸ್ ಠಾಣೆ ಪಿ.ಎಸ್.ಐ ದೂರವಾಣಿ ಸಂಖ್ಯೆ-9480805045ನ್ನು ಸಂಪರ್ಕಿಸಬೇಕೆಂದು ಮೈಸೂರು ದಕ್ಷಿಣ ಪೆÇಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ


Share