ಸುಳ್ಳು ಹೇಳಿಕೆ ಶೋಭೆ ತರಲ್ಲ’ : ಬಸವರಾಜ್ ಬಸಪ್ಪ

 

*ಸುಳ್ಳು ಹೇಳಿಕೆ ಶೋಭೆ ತರಲ್ಲ’ : ಬಸವರಾಜ್ ಬಸಪ್ಪ*

ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ಲoಚಕ್ಕಾಗಿ ಮಾತನಾಡಿದ್ದಾರೆ ಎಂಬುದು ಸುಳ್ಳು ಆರೋಪ ಎಂದು ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದ್ದಾರೆ

ಈ ಹಿಂದೆ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಸುಳ್ಳು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ, ಇದೀಗ ಬಿಜೆಪಿಯೊಂದಿಗೆ ಮಾಡಿಕೊಂಡಿರುವ ಮೈತ್ರಿಯನ್ನು ವಿರೋಧಿಸಿ ಹಲವು ಹಾಲಿ ಮಾಜಿ ಶಾಸಕರು ಮುಖಂಡರು ಕಾರ್ಯಕರ್ತರು ಪಕ್ಷ ಬಿಟ್ಟು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ, ಇದರಿಂದ ಮಾನಸಿಕ ಸ್ಥಿರತೆ ಕರೆದುಕೊಂಡು ಕುಮಾರಸ್ವಾಮಿ ಅವರು ಸಂಬಂಧವಿಲ್ಲದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಇಂತಹ ಸುಳ್ಳು ಆರೋಪಗಳು ಒಬ್ಬ ಮಾಜಿ ಮುಖ್ಯಮಂತ್ರಿ ಅವರಿಗೆ ಶೋಭೆ ತರುವೂದಂತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ